ದೈಹಿಕ ಕ್ಷಮತೆ ಯಿಂದ ಆತ್ಮ ವಿಶ್ವಾಸ ವೃದ್ಧಿ -ಕೆ.ಎಲ್.ರಾಹುಲ್
‘ಝ್ಯೂಸ್ ಫಿಟ್‌ನೆಸ್ ಕ್ಲಬ್ ಉದ್ಘಾಟನೆ
_zuese13 copy.jpg)
ಮಂಗಳೂರು.ಫೆ.28:ದೈಹಿಕ ದೃಢತೆಯೊಂದಿಗೆ ಆತ್ಮ ವಿಶ್ವಾಸವೃದ್ಧಿಸಿಕೊಳ್ಳಲು ಫಿಟ್‌ನೆಸ್ ಮಾರ್ಗದರ್ಶಕರ ಸಲಹೆ ಗಳು ನನ್ನ ಕ್ಷೇತ್ರದಲ್ಲಿ ಸಾಧನೆ ಮಾಡಲು ನನಗೆ ಸಹಕಾರಿಯಾಗಿದೆ ಎಂದು ಭಾರತ ಕ್ರಿಕೇಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ತಿಳಿಸಿದರು.
ಅವರು ಇಂದು ನಗರದ ಹೃದಯ ಭಾಗದಲ್ಲಿರುವ ಕೊಡಿಯಾಲ್ ಬೈಲ್‌ನ ಪಿವಿಎಸ್ ಜಂಕ್ಷನ್ ಬಳಿಯ ಸುಧೀಂದ್ರ ಪ್ಲಾಜಾದಲ್ಲಿದ್ದ ‘ಝ್ಯೂಸ್ ಫಿಟ್‌ನೆಸ್ ’ಕ್ಲಬ್ ಇಬ್ರೋಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ 3ನೆ ಮಹಡಿಗೆ ಸ್ಥಳಾಂತರಗೊಂಡ ಕಟ್ಟಡದಲ್ಲಿ ಹಮ್ಮಿಕೊಂಡ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಮಂಗಳೂರು ನಗರದ ಜನರಿಗೆ ಆರೋಗ್ಯಕರ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸದ್ರಿ ಕೇಂದ್ರದಿಂದ ಸಹಾಯವಾಗಲಿದೆ.ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.ಈ ಕೇಂದ್ರದಲ್ಲಿ ಉತ್ತಮ,ನುರಿತ ಫಿಟ್‌ನೆಸ್ ತರಬೇತುದಾರರು ಇವರುವುದರಿಂದ ದೈಹಿಕವಾದ ಅಸಹಜಬೆಳವಣಿಗೆಯನ್ನು ನಿಯಂತ್ರಿಸಿ ದೇಹದ ಫಿಟ್‌ನೆಸ್ ಕಾಯ್ದುಕೊಳ್ಳಲು ಈ ರೀತಿಯ ಕೇಂದ್ರ ಸಹಕಾರಿಯಾಗಲಿದೆ.ವಯೋಮಿತಿಯ ನಿರ್ಭಂಧವಿಲ್ಲದೆ.ಎಲ್ಲಾ ವಯಸ್ಸಿನವರಿಗೂ ಫಿಟ್‌ನೆಸ್ ಕೇಂದ್ರಗಳ ಮೂಲಕ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಬಳಸಿಕೊಳ್ಳಬಹುದಾಗಿದೆ ದೈಹಿಕ ಆರೋಗ್ಯ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ ಎಂದು ರಾಹುಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಸೆಲೆಬ್ರೆಟಿ ಫಿಟ್‌ನೆಸ್ ಅತ್ಲೆಟ್ ಸೋನಾಲಿ ಸ್ವಾಮಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಈ ರೀತಿಯ ಫಿಟ್ ನೆಸ್ ಕೇಂದ್ರಗಳು ಪ್ರಸಕ್ತ ಕಾಲಘಟ್ಟದಲ್ಲಿ ತುಂಬಾ ಅಗತ್ಯವನ್ನು ಹೊಂದಿದೆ.ಕೌಟುಂಬಿಕ ವ್ಯವಸ್ಥೆಯಲ್ಲಿ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತ ಎಲ್ಲರಿಗೂ ದೈಹಿಕ ಕ್ಷಮತೆ ಅಗತ್ಯವಿದೆ.ಇದರಿಂದ ವಯೋಸಹಜವಾಗಿ ನಮ್ಮ ದೇಹವನ್ನು ಕಾಡುವ ಸಾಕಷ್ಟು ರೋಗಗಳಿಂದ ದೂರವಿರಬಹುದು.ವಯಸ್ಸಾದರೂ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೊಂದಲು ಸಾಧ್ಯ ನಾನು 40ರ ವಯಸ್ಸಿನ,ಎರಡು ಮಕ್ಕಳ ತಾಯಿ ಫಿಟ್‌ನೆಸ್ ತರಬೇತು ನೀಡುತ್ತಿರುವುದು ನನ್ನ ಆರೋಗ್ಯದ ಗುಟ್ಟು ಎಂದು ಸೊನಾಲಿ ಸ್ವಾಮಿ ತಿಳಿಸಿದರು. ಝ್ಯೂಸ್ ಫಿಟ್‌ನೆಸ್ ಕೇಂದ್ರದಲ್ಲಿ ಆಧುನಿಕ ಉಪಕರಣಗಳು ಸಜ್ಜುಗೊಳಿಸಲಾಗಿದೆ. ಅತ್ಯಾಧುನಿಕ ಕಾರ್ಡಿಯೋ ಉಪಕರಣಗಳು,ಗ್ರೂಪೆಕ್ಸ್ ಮತ್ತು ಇಂಡೋರ್ ಸೈಕ್ಲಿಂಗ್ ಸ್ಟುಡಿಯೋ ನಿರ್ಮಿಸಲಾಗಿದೆ.ಇದಲ್ಲದೆ ಇಲ್ಲಿನ ಸದಸ್ಯರು ಝುಂಬಾ, ಯೋಗ, ಏರೋಬಿಕ್ಸ್ , ಸ್ಪೈನಿಂಗ್ ಮತ್ತು ಪ್ರೀಮಿಯಂ ಝ್ಯೂಸ್ ಫೈಟ್ ಕ್ಲಬ್‌ನಲ್ಲಿ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ,ಝ್ಯೂಸ್ ಫಿಟ್‌ನೆಸ್ ಕ್ಲಬ್ ನಲ್ಲಿ ಕ್ರಾಂತಿಕಾರಿ ನ್ಯೂಟ್ರಿಷನ್ ಕೆಫೆ -ಕೆಫಿನ್ ಒಳಗೊಂಡಿದೆ.ಜಿಮ್ 5000ಕ್ಕೂ ಅಧಿಕ ನೊಂದಾಯಿತ ಸದಸ್ಯರನ್ನು ಹಾಗೂ 1000ಕ್ಕೂ ಅಧಿಕ ಸಕ್ರೀಯ ಸದಸ್ಯರನ್ನು ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿತಿಶ್ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ರೀಡೆ,ಫಿಟ್‌ನೆಸ್ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಾಧನೆಗೈದ ಕೆ.ಎಲ್.ರಾಹುಲ್,ಸೋನಾಲಿ ಸ್ವಾಮಿ,ಯತಿನ್ ಸನಿಲ್, ಜೆ.ಬಂಗೇರಾ,ಪ್ರಸಾದ್ ಶೆಟ್ಟಿ,ವರ್ಷಾ,ಗುರುರಾಜ್,ಐಸಿರಿ ಆರ್ಟ್ ತಂಡವನ್ನು ಸನ್ಮಾನಿಸಲಾಯಿತು. ಇದಲ್ಲದೆ ವಿಶೇಷ ಮನೋರಂಜನಾ ಕಾರ್ಯಕ್ರಮ ಸೆಮಿನಾರ್ ಮತ್ತು ಫಿಟ್‌ನೆಸ್ ರಂಗದಲ್ಲಿನ ನೂತನ ಆವಿಷ್ಕಾರಗಳಾದ ಮಿಕ್ಸೆಡ್ ಮಾರ್ಷಲ್ ಆಟ್ಸ್‌ರ್ ,ಝಂಬಾ ಇತ್ಯಾದಿಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ.ರೆಡ್ ಅಕ್ಟೋಪಸ್ ಇವೆಂಟ್ಸ್ ಬಳಗದವರಿಂದ ವಿಶೇಷ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಸಚಿವ ಯು.ಟಿ.ಖಾದರ್,ಶಾಸಕ ಜೆ.ಆರ್.ಲೊಬೊ,ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಶಶಿಧರ್,ಉದ್ಯಮಿ ಸುಬ್ರಾಯ ಎಂ.ಪೈ,ಎಂಸಿಎಫ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಅವಿನಂದನ್ ಆಚನಹಳ್ಳಿ , ನಿರ್ದೇಶಕರಾದ ರಾಜೇಶ್ ಪಾಟಾಳಿ,ಶ್ರೀನಿವಾಸ ಶೆಟ್ಟಿ,ವಿಕಾಸ್ ಪುತ್ರನ್,ಪ್ರಸಾದ್ ಶೆಟ್ಟಿ,ರಿಚಿ ಪೂವಯ್ಯ,ಅಖಿಲೇಶ್ ವಾರಂಬಳ್ಳಿ,ಅಭಿಲಾಶ್ ಮುಖ್ಯ ಕೋಚ್ ಕೌಶಿಕ್ ಬೋಳೂರು,ನಿತಿಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







