ಸುಳ್ಯ: ಅಪ್ರಾಪ್ತ ಬಾಲಕಿಗೆ ಕಿರುಕುಳ: ಯುವಕನ ಬಂಧನ
ಸುಳ್ಯ: ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಸಂಪಾಜೆ ಗ್ರಾಮದ ಆಲಡ್ಕ ಎಂಬಲ್ಲಿ ಅಂಗಡಿಗೆ ಸಾಮಾನಿಗೆಂದು ಬಂದ 13ರ ಹರೆಯದ ಬಾಲಕಿಯನ್ನು ಶಿವಪ್ಪ ಎಂಬಾತ ಕೈಹಿಡಿದೆಳೆದು ಕಿರುಕುಳ ನೀಡಿದ್ದು ಇದನ್ನು ನೋಡಿದ ಸ್ಥಳೀಯ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆರೋಪಿ ಶಿವಪ್ಪನ್ನು ಬಂಧಿಸಿ ಪೋಸ್ಕೋ ಪ್ರಕರಣದಡಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಕಸ್ಟಡಿ ವಿಧಿಸಿದ್ದಾರೆ.
Next Story





