ಕಸಾಪ ಚುನಾವಣೆ: ಪುತ್ತೂರಿನಲ್ಲಿ 68 ಮತ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಪುತ್ತೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಾಲೂಕಿನ ಒಟ್ಟು 347 ಮತದಾರರ ಪೈಕಿ 57 ಗಂಡಸರು, 11 ಹೆಂಗಸರು ಸೇರಿದಂತೆ ಒಟ್ಟು 68 ಮತಚಲಾವಣೆಯಾಗಿದೆ.
ಪುತ್ತೂರು ಮಿನಿವಿಧಾನಸೌಧದ ತಹಸೀಲ್ದಾರ್ ಸಭಾಭವನದಲ್ಲಿ 163ನೇ ಸಂಖ್ಯೆಯ ಮತಗಟ್ಟೆ ತೆರೆಯಲಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 4ರವರೆಗೆ ಚುನಾವಣಾ ಪ್ರಕ್ರಿಯೆ ತಹಸೀಲ್ದಾರ್ ಸಣ್ಣರಂಗಯ್ಯ ನೇತೃತ್ವದಲ್ಲಿ ನಡೆಯಿತು. ಉಪತಹಶೀಲ್ದಾರ್ ಶ್ರೀಧರ್ ಅವರು ಜೊತೆಗಿದ್ದರು. ಬೆಳಗ್ಗಿನಿಂದಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಯಂಕಾಲ ಹೆಚ್ಚು ಮತ ಚಲಾವಣೆ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಒಟ್ಟು 14 ಮಂದಿ ಚುನಾವಣಾ ಕಣದಲ್ಲಿದ್ದರು. ಮಾರ್ಚ್ 2ರಂದು ಫಲಿತಾಂಶ ಹೊರಬೀಳಲಿದೆ.
ಫೋಟೋ: ಪುತ್ತೂರು ತಾಲೂಕಿನ ಮಿನಿ ವಿಧಾನ ಸೌಧದಲ್ಲಿನ ಮತಗಟ್ಟೆ.
Next Story





