ಪಂಜಾಬ್‌ನ ಬಟಾಲದಲ್ಲಿ ಕೇಜ್ರಿವಾಲ್ ವಿರುದ್ಧ ಬಿಜೆಪಿ ಪ್ರತಿಭಟನೆ: ಲಾಟಿಚಾರ್ಜ್

ಬಟಾಲ: ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ಪಂಜಾಬ್ ಭೇಟಿಯ ವೇಳೆ ವಿರೋಧಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಟಿಚಾರ್ಜ್ ಮಾಡಿದ್ದಾರೆ.
ಗಾಂಧಿ ಚೌಕ್‌ನಲ್ಲಿ ಘೋಷಣೆ ಕೂಗಿ ಕೇಜ್ರಿವಾಲ್‌ರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸುಮಾರು ಎಂಬತ್ತು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಲ್ಲಿ ಆಮ್‌ಆದ್ಮಿ ಪಾರ್ಟಿಯ ರ್ಯಾಲಿಯಲ್ಲಿ ಕೇಜ್ರಿವಾಲ್ ಭಾಷಣಮಾಡುವ ಕಾರ್ಯಕ್ರಮವಿತ್ತು. ವಶಕ್ಕೆ ಪಡೆದವರನ್ನು ಕೇಜ್ರಿವಾಲ್ ಜನರ ಸಭೆಯನ್ನುದ್ದೇಶಿಸಿ ಭಾಷಣ ನೀಡಿ ಹೋದ ಮೇಲೆಯೇ ಬಿಡುಗಡೆಗೊಳಿಸಲಾಯಿತೆಂದು ಪೊಲೀಸರು ತಿಳಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ಭಾಟಿಯ ಮತ್ತು ನಗರ ಪರಿಷತ್ ಅಧ್ಯಕ್ಷ ನರೇಶ್ ಮಹಾಜನ್ ಪ್ರತಿಭಟನಕಾರರ ನೇತೃತ್ವವನ್ನು ವಹಿಸಿಕೊಂಡಿದ್ದರು. ಇದಕ್ಕಿಂತ ಮೊದಲು ಕೇಜ್ರಿವಾಲ್ ಅಮೃತಸರ ಸ್ವರ್ಣಮಂದಿರ ಮತ್ತು ದರ್ಗಿಯಾನ ಮಂದಿರಕ್ಕೆ ಭೇಟಿ ನೀಡಿದ್ದರು.
Next Story





