ಮಂಗಳೂರು : ಟಿ.ಸಿ. ವೆಲ್ಪೇರ್ ಫೌಂಡೇಶನ್ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ಸರಳವಿವಾಹ ಕಾರ್ಯಕ್ರಮ

ಮಂಗಳೂರು,ಫೆ.28: ಟಿ.ಸಿ. ವೆಲ್ಪೇರ್ ಫೌಂಡೇಶನ್ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ಪ್ರವಾದಿ ಮೊಹಮ್ಮದ್ ಸ.ಅ ರವರ ಜನ್ಮದಿನಾಚರಣೆಯ ಪ್ರಯುಕ್ತ ಸರಳವಿವಾಹ ಕಾರ್ಯಕ್ರಮವು ಇಂದು ನಗರದ ಬೀಬಿ ಅಲಾಬಿ ರಸ್ತೆ ಬಂದರ್‌ನಲ್ಲಿ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ವೈ. ಮುಹಮ್ಮದ್ ಕುಂಞಿರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ದ.ಕ ಖಾಝಿ ಅಲ್‌ಹಾಜ್ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾಶಿರ್ವಚನಗೈದು ನಿಖಾಹ್‌ಗೆ ನೇತೃತ್ವ ನೀಡಿದರು. ಕೆ.ಎಸ್ ಮಸೂದ್ ಉದ್ಘಾಟನೆಗೈದು ಮತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಿ ಉತ್ತಮ ವ್ಯಕ್ತಿತ್ವ ಮತ್ತು ದುಡಿಮೆಯ ಜೀವನವನ್ನು ನಡೆಸುವ ಮೂಲಕ ಎಲ್ಲರೂ ಕೂಡ ಸ್ವಾಭಿಮಾನದ ಜೀವನವನ್ನು ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ರಶೀದ್ ಹಾಜಿ ಯವರು ಮಾತನಾಡಿ ವಧುವರರಿಗೆ ಶುಭಹಾರೈಸಿದರು. ಝೀನತ್ ಬಕ್ಷ್ ಖತೀಬ್ ಬಹು. ಸದಖತುಲ್ಲಾ ಫೈಝಿ ನಿಖಾಹ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮೂಸ ಮೊದಿನ್ , ಡಾ.ಕೆ.ಎಸ್ ಆರೀಫ್ ಮಸೂದ್, ಅಹ್ಮದ್ ಶಾಕೀರ್, ಟಿ ಸಿ ವೆಲ್ಪೇರ್ ಪೌಂಡೇಶನ್ ಅಧ್ಯಕ್ಷ ಅಬ್ದುಲ್ ಸಲಾಂ, ಮೆಹಬೂಬ್, ಹಾಜಿ ಅಬ್ದುಲ್ ಹಮೀದ್, ಹಾಜಿ ಸಾಲೀಹ್ ಉಸ್ತಾದ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಯಹ್ಯಾ ತಂಙಳ್ ಸ್ವಾಗತಿಸಿ ವಂದಿಸಿದರು. ರಿಯಾಝ್ ಕಡಂಬು ಕಾರ್ಯಕ್ರಮವನ್ನು ನಿರೂಪಿಸಿದರು.







