ಪಾಕ್‌ನಿಂದ 20 ಭಾರತೀಯ ಮೀನುಗಾರರ ಬಂಧನ

ಇಸ್ಲಾಮಾಬಾದ್, ಫೆ.28: ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿ ಮೀನುಗಾರಿಕೆ ಮಾಡಿದ ಸುಮರು 20 ಮಂದಿ ಭಾರತೀಯ ಮೀನುಗಾರರನ್ನು ನೌಕಾಯಾನ ಭದ್ರತಾ ಏಜೆನ್ಸಿ (ಪಿಎಂಎಸ್‌ಎ) ಬಂಧಿಸಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಬಂಧಿತ ಮೀನುಗಾರರಿದ್ದ ನಾಲ್ಕು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೀನುಗಾರರನ್ನು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಪಿಎಂಎಸ್‌ಎನ ವಕ್ತಾರರು ತಿಳಿಸಿದ್ದಾರೆ.
ಕಳೆದ ವಾರ ಗುಜರಾತ್‌ನ ಜಖಾವು ಬಂದರು ಸಮೀಪದ ಅರಬ್ಬಿ ಸಮುದ್ರದಲ್ಲಿ ಪಾಕ್‌ಗೆ ಸೇರಿದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 88 ಮಂದಿ ಭಾರತೀಯ ಬೆಸ್ತರನ್ನು ಪಿಎಂಎಸ್‌ಎ ಬಂಧಿಸಿತ್ತು.
400ಕ್ಕೂ ಅಧಿಕ ಭಾರತೀಯ ಮೀನುಗಾರರು ಪಾಕಿಸ್ತಾನದ ಜೈಲುಗಳಲ್ಲಿ ಬಂಧಿತರಾಗಿದ್ದಾರೆನ್ನಲಾಗಿದೆ. ಈ ಹಿಂದೆ ಸದ್ಭಾವನೆಯ ಕ್ರಮವಾಗಿ ಉಭಯದೇಶಗಳು ತಮ್ಮ ವಶದಲ್ಲಿದ್ದ ಹಲವು ಮೀನುಗಾರರನ್ನು ಬಿಡುಗಡೆಗೊಳಿಸಿತ್ತು,
Next Story





