ಉಳ್ಳಾಲ: ಸುನ್ನಿ ಸಮ್ಮೇಳನ ಮತ್ತು ಗೌರವಾರ್ಪಣೆ ಸಮಾರಂಭ

ಉಳ್ಳಾಲ: ಧಾರ್ಮಿಕ ಕ್ಷೇತ್ರದಲ್ಲಿ ಮಾಡುವ ಸೇವೆಗೆ ಉತ್ತಮ ಗೌರವ ಇದೆ. ಈ ಕ್ಷೇತ್ರದಲ್ಲಿ ಸೇವೆ ಮಾಡುವವರನ್ನು ಗೌರವಿಸಬೇಕಾದ ಕರ್ತವ್ಯ ನಮ್ಮದಾಗಿರುತ್ತದೆ ಸುನ್ನಿ ಆಶಯದಲ್ಲಿದ್ದುಕೊಂಡು ದೀನಿ ಸೇವೆ ಮಾಡಿದವರಿಗೆ ಮಾತ್ರ ರಕ್ಷಣೆ ಸಿಗಲು ಸಾಧ್ಯ ಎಂದು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಅವರು ಸಿರಾಜಿಲ್ ಮುನೀರ್ ಅಸೋಸಿಯೇಶನ್ ಅಲ್ ಮದೀನ್ ಮತ್ತು ಸುನ್ನಿ ಕೋ ಓಡಿನೇಷನ್ ದೇರಳಕಟ್ಟೆ ವಲಯ ಇದರ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಸಿಟಿಗ್ರೌಂಡ್‌ನಲ್ಲಿ ಬಾನುವಾರ ನಡೆದ ಸುನ್ನಿ ಸಮ್ಮೇಳನ ಮತ್ತು ಗೌರವಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರವಾದಿಯವರ ಕಾಲದಲ್ಲಿ ಇಸ್ಲಾಂ ಧರ್ಮ ಬೋಧನೆ ಮಾಡುವವರಿಗೆ ಬಹಳಷ್ಟು ಗೌರವ ಇತ್ತು. ಅದನ್ನು ಸಮುದಾಯ ಈವರೆಗೆ ಉಳಿಸಿಕೊಂಡು ಬಂದಿದೆ. ಇನ್ನು ಕೂಡಾ ಇದನ್ನು ಉಳಿಸಿಕೊಂಡು ಬರುವ ಕಾರ್ಯ ಸಮುದಾಯದ ಮುಂದಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ ವಹಿಸಿದ್ದರು. ಬೇಕಲ ಇಬ್ರಾಹಿಂ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಶ್ರಫ್ ಸಖಾಫಿ ಕನ್ನಂಗಾರ್ ಸುನ್ನಿ ಆಶಯದ ಬಗ್ಗೆ ವಿವರಿಸಿದರು. ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ,ಹೈದರ್ ಪರ್ತಿಪ್ಪಾಡಿ, ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿಎಂ. ಇಬ್ರಾಹಿಂ, ಸಚಿವ ಯು.ಟಿ. ಖಾದರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿದರು.ಶೈಖುನಾ ತಾಜುಶ್ಯರೀಅ ಎಂ ಆಲಿಕುಂಞಿ ಉಸ್ತಾದ್ ಶಿರಿಯ ಮನೆಗಳ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದ ಪ್ರಚಾರ ಸಮಿತಿಯ ಸಂಚಾಲಕ ವಿ.ಯು. ಇಸ್ಹಾಕ್ ಝುಹ್‌ರಿ ಸಂದೇಶ ಭಾಷಣ ಮಾಡಿದರು. ಬಳಿಕ ಕಳೆದ ಐದು ದಶಕಗಳಿಮದ ಧಾರ್ಮಿಕ ಶಿಕ್ಷಣ ಒದಗಿಸುವ ಕಾರ್ಯದಲ್ಲಿ ನಿರಂತರ ಕೆಲಸ ಮಾಡಿ ಅಲ್ ಮದೀನ ಸಂಸ್ಥೆಯನ್ನು ಸ್ಥಾಪನೆ ಮಾಡಿದ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಅವರನ್ನು ಗೌರವಿಸಲಾಯಿತು. ಎಪಿ ಅಬೂಬಕರ್ ಮುಸ್ಲಿಯಾರ್ ಶಾಲು ಹೊದಿಸಿ ಶರಫುಲ್ ಉಲಮಾ ಬಿರುದು ನೀಡಿ ಅಬ್ಬಾಸ್ ಉಸ್ತಾದ್‌ರವರಿಗೆ ಗೌರವಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯೆನೇಪೋಯ ಯುನಿವರ್ಸಿಟಿ ಕುಲಪತಿ ಯೆನೆಪೋಯ ಅಬ್ದುಲ್ಲ ಕುಂಞಿ, ದಾರುಲ್ ಇರ್ಶಾದ್ ಮಾಣಿಯ ಅಧ್ಯಕ್ಷ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್, ಎಸ್‌ಜೆಎಂ ರಾಷ್ಟ್ರೀಯ ಸಮಿತಿಯ ಪ್ರ. ಕಾರ್ಯದರ್ಶಿ ಡಾ. ಮುಹಮ್ಮದ್ ಪಾಝಿಲ್ ರಝ್ವಿ ಕಾವಳಕಟ್ಟೆ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆಸಿರೋಡ್, ಕೊಡಗು ಜಿಲ್ಲಾ ಸಹಾಯಕ ಖಾಝಿ ಮುಹಮ್ಮದ್ ಸಅದಿ ವಳವೂರು, ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್, ಎಸ್‌ಜೆಎಂ ರಾಜ್ಯಾಧ್ಯಕ್ಷ ಸದ್ ಮುಸ್ಲಿಯಾರ್ ಆತೂರು, ಎಇಡಿಸಿ ರಾಜ್ಯಾಧ್ಯಾಕ್ಷ ಕೆ.ಕೆ. ಮೊಯ್ಯಿದ್ದೀನ್ ಕಮಿಲ್ ಸಖಾಫಿ, ಶಿಹಾಬುದ್ದೀನ್ ತಂಙಳ್ ತಲಕ್ಕಿ, ಶರಫುದ್ದೀನ್ ತಂಙಳ್ ಮದನಿನಗರ, ಎಸ್‌ಪಿ ಹಂಝ ಸಖಾಫಿ, ಅಬ್ದುಲ್ ರಶೀದ್ ಝೈನಿ,ಎಚ್ ಎಚ್. ಉಂಞಿ ಹಾಜಿ ದೇರಳಕಟ್ಟೆ, ಮೂಸ ಸಖಾಫಿ ಕಲತ್ತೂರು, ವಕ್ಫ್ ಬೋರ್ಡ್ ಜಿಲ್ಲಾ ಸಲಹೆಗಾರ ಎಸ್.ಎಂ ರಶೀದ್ ಹಾಜಿ, ಮಜೀದ್ ಹಾಜಿ ಉಚ್ಚಿಲ, ಎಸೆಸ್ಸೆಫ್ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಬಿ. ಮುಹಮ್ಮದ್ ಸಾದಿಕ್, ಸುನ್ನಿವಾಣಿ ಪತ್ರಿಕೆ ಸಂಪಾದಕ ಮುಹ್ಯಿದ್ದೀನ್ ಸಖಾಫಿ ತೋಕೆ,ಬೆಳ್ಮ ಗ್ರಾ.ಪಂ. ಉಪಾಧ್ಯಕ್ಷ ಸತ್ತಾರ್, ಮಾಜಿ ಜಿ.ಪಂ. ಸದಸ್ಯ ಎನ್.ಎಸ್. ಕರೀಂ, ಎಸ್‌ವೈಎಸ್ ಮುಡಿಪು ಸೆಂಟರ್ ಅಧ್ಯಕ್ಷ ಎಸ್‌ಕೆ ಖಾದರ್ ಹಾಜಿ, ಎಸ್‌ಜೆಎಂ ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮಣೆ,ಎಸ್‌ವೈಎಸ್ ಜಿಲ್ಲಾ ಸಮಿತಿ ಸದಸ್ಯ ಇಸ್ಮಾಯಿಲ್ ಸಅದಿ ಕಿನ್ಯ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮುಹಮ್ಮದ್ ಅಸೈ, ಅಲ್ಪ ಸಂಖ್ಯಾತ ನಿಗಮದ ಕಾರ್ಯದರ್ಶಿ ಕೆ.ಎಂ ಶರೀಫ್ ದೇರಳಕಟ್ಟೆ, ಕೆ.ಇ ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು, ಎಸ್‌ಜೆಎಂ ಮಂಜನಾಡಿ ರೇಂಜ್ ಅಧ್ಯಕ್ಷ ಕತ್ತರ್ ಬಾವಾ ಹಾಜಿ, ಮೊದಲಾದವರು ಉಪಸ್ಥಿತರಿದ್ದರು.
ಸಿರಾಜುಲ್ ಮುನೀರ್ ಅಸೋಸಿಯೇಶನ್‌ನ ಕಾರ್ಯದರ್ಶಿ ಉಮರ್ ಸಖಾಫಿ ಕಲ್ಮಿಂಜ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸ್ವಾಗತ ಸಮಿತಿಯ ಕನ್ವಿನರ್ ಕೆ.ಎ. ಅಬ್ದುರ್ರಹ್ಮಾನ್ ರಿಝ್ವಿ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಮುಸ್ಲಿಯಾರ್ ಉದ್ಯಾವರ ಧನ್ಯವಾದ ಸಮರ್ಪಿಸಿದರು.







