ರಸೂಲ್‌ಪೂಕುಟ್ಟಿಗೆ ಗೋಲ್ಡನ್ ರೀಲ್ ಪುರಸ್ಕಾರ

ತಿರುವನಂತಪುರಂ:ಆಸ್ಕರ್ ವಿಜೇತ ಧ್ವನಿ ಸಂಕಲನಕಾರ ರಸೂಲ್ ಪೂಕುಟ್ಟಿಗೆ ಬ್ರಿಟಿಷ್ ನಿರ್ದೇಶಕ ಲೆಸ್ಲಿ ಉಡ್ವಿನ್ ನಿರ್ದೇಶನಕದ ಹೆಚ್ಚು ವಿವಾದಿತವಾದ ಇಂಡಿಯಾಸ್ ಡಾರ್ ಎಂಬ ಡಾಕ್ಯುಮೆಂಟರಿ ಗೋಲ್ಡನ್ ರೀಲ್ ಪುರಸ್ಕಾರವನ್ನುತಂದುಕೊಟ್ಟಿದೆ.
ಟೆಲಿವಿಷನ್ ಡಾಕ್ಯುಮೆಂಟರಿ ವಿಭಾಗದಲ್ಲಿ ಪುರಸ್ಕಾರ ಲಭಿಸಿದ್ದು ಏಷ್ಯಾದಲ್ಲಿ ಇದೇ ಮೊದಲ ಬಾರಿ ಈ ವಿಭಾಗದಲ್ಲಿ ಓರ್ವರಿಗೆ ಪ್ರಶಸ್ತಿ ಲಭಿಸಿದೆ ಎಂದು ವರದಿಯಾಗಿದೆ. ದಿಲ್ಲಿಯಲ್ಲಿ 2012ರಲ್ಲಿ ಚಲಿಸುತ್ತಿರುವ ಬಸ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಯುವತಿಯ ಕತೆಯನ್ನು ಆಧರಿಸಿ ಗೋಲ್ಡನ್ ಡಾರ್ ಡಾಕ್ಯುಮೆಂಟರಿಯನ್ನು ನಿರ್ಮಿಸಲಾಗಿತ್ತು.
Next Story





