Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ದೈನಂದಿನ ಬದುಕಿಗೆ ನೆರವಾಗುವ...

ದೈನಂದಿನ ಬದುಕಿಗೆ ನೆರವಾಗುವ ಕೈಪಿಡಿಗಳು...

ಕಾರುಣ್ಯಾಕಾರುಣ್ಯಾ28 Feb 2016 11:06 PM IST
share
ದೈನಂದಿನ ಬದುಕಿಗೆ ನೆರವಾಗುವ ಕೈಪಿಡಿಗಳು...

ಟಿ. ಎಸ್. ಗೋಪಾಲ್ ಅವರು ಬರೆದ ‘ಲೇಖನ ಚಿಹ್ನೆಗಳು’, ಬಿ. ಆರ್. ರವೀಂದ್ರನಾಥ್ ಬರೆದ ‘ಗೃಹ ಸಾಲ-ಸಮಗ್ರ ಮಾಹಿತಿ ಕೈಪಿ ಡಿ’, ಡಾ. ಕೆ. ಎಸ್. ಪವಿತ್ರ ಬರೆದ ‘ನಿಮ್ಮ ಪಯಣ ಸುಗಮವಾಗಲಿ’ ಈ ಮೂರು ಪುಟ್ಟ ಕೃತಿಗಳನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಇದು ಅತ್ಯಗತ್ಯ ಮಾಹಿತಿಯುಳ್ಳ ಪುಟ್ಟ ಕೈ ಬಿಡಿ. ‘ಲೇಖನ ಚಿಹ್ನೆಗಳು’ ತಿಳಿ ವ್ಯಾಕರಣಕ್ಕೆ ಸಂಬಂಧಿಸಿದ ಪುಸ್ತಕ. ಅನೇಕ ಸಂದರ್ಭದಲ್ಲಿ, ಅತೀ ದೊಡ್ಡ ಬರಹಗಾರರೂ, ವ್ಯಾಕರಣದ ವಿಷಯಕ್ಕೆ ಬಂದಾಗ ಸಣ್ಣ ಸಣ್ಣ ವಾಕ್ಯಗಳಲ್ಲಿ ಎಡವಿ ಬೀಳುತ್ತಾರೆ. ನಾವು ದಿನ ನಿತ್ಯ ಬಳಸುವ ವಾಕ್ಯಗಳಿಗೆ, ಇಂತಹ ಚಿಹ್ನೆ ಎಲ್ಲಿ ಬಳಸಬೇಕು ಎನ್ನುವುದು ಕೆಲವೊಮ್ಮೆ ಗೊಂದಲಗಳಿಗೆ ಕಾರಣವಾಗಬಹುದು. ಬರೆಯುವವರು ತಮ್ಮ ಪಕ್ಕದಲ್ಲೇ ಇಟ್ಟುಕೊಳ್ಳಬೇಕಾದ ಪುಟ್ಟ ಪುಸ್ತಕ ಲೇಖನ ಚಿಹ್ನೆಗಳು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಎಲ್ಲರಿಗೂ ಉಪಯೋಗವಾಗಬಹುದಾದ ಕಿರು ಪುಸ್ತಕ ಇದು. ಇದರ ಮುಖಬೆಲೆ 25 ರೂಪಾಯಿ. ಬ್ಯಾಂಕ್‌ಗಳೆಂದರೆ ಕೆಲವರಿಗೆ ಅನಗತ್ಯ ಭಯ. ಕೆಲವರು ಅದರೊಂದಿಗೆ ವ್ಯವಹರಿಸಿ ಕೈ ಸುಟ್ಟುಕೊಂಡಿರುತ್ತಾರೆ. ಕೆಲವರಿಗೆ ಅದರೊಂದಿಗೆ ವ್ಯವಹರಿಸಲು ಆಸಕ್ತಿಯಿರುತ್ತದೆ. ಆದರೆ ಹೇಗೆ ಮುಂದೆ ಹೆಜ್ಜೆಯಿಡಬೇಕು ಎಂಬ ಕುರಿತು ಅನುಮಾನಗಳಿರುತ್ತವೆ. ಇಂಥವರಿಗಾಗಿ ಮಾಡಿರುವ ಪುಟ್ಟ ಕೈ ಬಿಡಿ ‘ಗೃಹಸಾಲ-ಸಮಗ್ರ ಮಾಹಿತಿ ಕೈಪಿಡಿ’. ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಅತ್ಯಮೂಲ್ಯ ಸಲಹೆಗಳು, ಮಾಹಿತಿಗಳು ಇದರಲ್ಲಿವೆ. ನಾವು ಎಂತಹ ಬ್ಯಾಂಕುಗಳನ್ನು ಆರಿಸಿಕೊಳ್ಳಬೇಕು ಎನ್ನುವುದರಿಂದ ಹಿಡಿದು, ಸಾಲ ತೆಗೆದುಕೊಳ್ಳಬೇಕಾದ ಅನುಸರಿಸಬೇಕಾದ ವಿಧಾನ, ಬಡ್ಡಿದರ, ನಿಯಮ ನಿಬಂಧನೆ ಇವುಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಈ ಕೃತಿಯಲ್ಲಿ ವಿವರಗಳಿವೆ. ಹೊಸದಾಗಿ ಮನೆಕಟ್ಟುವ ಕನಸುಗಳುಳ್ಳವರು, ಅಥವಾ ಅದಕ್ಕಾಗಿ ಒಂದು ಯೋಜನೆಯನ್ನು ರೂಪಿಸಲು ಹೊರಟವರು ಈ ಕೈಪಿಡಿಯ ಸಹಾಯವನ್ನು ಪಡೆಯಬಹುದು.
 ‘ನಿಮ್ಮ ಪಯಣ ಸುಗಮವಾಗಲಿ’ ಕೃತಿ ಪ್ರವಾಸಾನುಭವಕ್ಕೆ ಸಂಬಂಧ ಪಟ್ಟಿರುವುದು. ಹಲವರು ಪ್ರವಾಸ ಅನುಭವಗಳ ಬಗ್ಗೆ ಬರೆದಿದ್ದಾರೆ. ಆದರೆ ಇಲ್ಲಿ, ಪ್ರವಾಸಕ್ಕೆ ಬೇಕಾದ ತಯಾರಿಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಾಗಿದೆ. ಒಂದು ಒಳ್ಳೆಯ ಪ್ರವಾಸ ಅನುಭವವನ್ನು ಹೇಗೆ ನಮ್ಮದಾಗಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಕೈಪಿಡಿಯಲ್ಲಿ ಹಲವು ಮಾರ್ಗದರ್ಶನವಿದೆ. ಪ್ರವಾಸದಿಂದ ನಾವು ಹೇಗೆ ನಮ್ಮ ವ್ಯಕ್ತಿತ್ವವನ್ನು ವಿಸ್ತಾರಗೊಳಿಸಬಹುದು, ಮಕ್ಕಳ ಜೊತೆಗಿನ ಪ್ರವಾಸವನ್ನು ಹೇಗೆ ಖುಷಿಖುಷಿಯಾಗಿ ಪರಿವರ್ತಿಸಿಕೊಳ್ಳಬಹುದು, ಟೂರ್ ಏಜೆಂಟ್‌ಗಳ ಮೂಲಕ ಪ್ರವಾಸ, ಸ್ವತಂತ್ರ ಪ್ರವಾಸ ಇವುಗಳ ವ್ಯತ್ಯಾಸ, ಪ್ರವಾಸಿ ಜಗಳ, ಪ್ರವಾಸ ಮತ್ತು ಆರೋಗ್ಯ ಇತ್ಯಾದಿಗಳ ಬಗ್ಗೆ ಈ ಪುಟ್ಟ ಕೈ ಪಿಡಿಯಲ್ಲಿ ಮಾಹಿತಿಗಳಿವೆ.
        ಇದರ ಮುಖಬೆಲೆ 65 ರೂಪಾಯಿ. ಆಸಕ್ತರು 080- 30578020 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X