ಜಾಗತಿಕ ಬಲಪಂಥೀಯ ಪಕ್ಷಗಳ ಒಕ್ಕೂಟಕ್ಕೆ ಬಿಜೆಪಿ ಸೇರ್ಪಡೆ
ಲಂಡನ್, ಫೆ.28: ಭಾರತದ ಆಳುವ ಭಾರತೀಯ ಜನತಾ ಪಕ್ಷವು (ಬಿಜೆಪಿ) ಇತ್ತೀಚೆಗೆ ಅಂತಾರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಐಡಿಯು) ಸೇರಿದೆ. ಐಡಿಯು, ಪ್ರಜಾಪ್ರಭುತ್ವ ವಿಶ್ವದಾದ್ಯಂತದ ಮಧ್ಯ-ಬಲ ಪಂಥೀಯ ರಾಜಕೀಯ ಪಕ್ಷಗಳ ಗುಂಪಾಗಿದ್ದು, ನಾರ್ವೆಯ ಓಸ್ಲೊದಲ್ಲಿ ಅದರ ಮುಖ್ಯಾಲಯವಿದೆ.
ಐಡಿಯು ಬ್ರಿಟನ್‌ನ ಕನ್ಸರ್ವೆಟಿವ್ ಪಕ್ಷ, ಅಮೆರಿಕದ ರಿಪಬ್ಲಿಕನ್ ಪಕ್ಷ ಜರ್ಮನಿಯ ಕ್ರಿಶ್ಚನ್ ಡೆಮಕ್ರಾಟಿಕ್ ಯೂನಿಯನ್ ಮತ್ತಿತರ ಪಕ್ಷಗಳನ್ನೊಳಗೊಂಡಿದೆಯೆಂದು ಅಮೆರಿಕನ್ ಎಂಟರ್‌ಪ್ರೈಸಸ್ ಇನ್‌ಸ್ಟಿಟ್ಯೂಟ್‌ನ (ಎಇಐ) ಭಾರತೀಯ ವಿದ್ವಾಂಸ ಸದಾನಂದ ಧೂಮೆ ತಿಳಿಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್, ಫೆ.25ರ ಟ್ವೀಟ್ ಒಂದರಲ್ಲಿ ಬಿಜೆಪಿಯ ಐಡಿಯು ಸದಸ್ಯತ್ವವನ್ನು ಘೋಷಿಸಿದ್ದಾರೆ. ಬಿಜೆಪಿಯ ಈ ಕ್ರಮವು ಅದನ್ನು ಅಂತಾರಾಷ್ಟ್ರೀಯವಾಗಿ ಗುರುತಿಸಲಾಗಿರುವ ಸೈದ್ಧಾಂತಿಕ ನಿಲುವಿನೊಂದಿಗೆ ಸೇರಿಸುತ್ತದೆ ಹಾಗೂ ಅದು ನಿಜವಾಗಿ ಶುದ್ಧ ಬಲ ಪಂಥೀಯವಾಗಿ ಅಥವಾ ಪುರೋಹಿತ ಪ್ರಭುತ್ವವೇ ಎಂಬ ಕುರಿತು ಇರುವ ಯಾವುದೇ ಸಂಶಯವನ್ನು ನಿವಾರಿಸಲಿದೆ.
ಇದು ಭಾರತದ ದೇಶೀಯ ರಾಜಕೀಯದ ಬೇರನ್ನು ವಿಸ್ತೃತ, ಜಾಗತಿಕ ಪಕ್ಷ ರಾಜಕೀಯದ ಜಾಲದಲ್ಲಿ ಊರಲಿದೆ.
ಭಾರತದ ಪ್ರಮುಖ ವಿಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈಗಾಗಲೇ ಪ್ರಗತಿಪರ ಮೈತ್ರಿ ಕೂಟದ ಸದಸ್ಯನಾಗಿದೆ. ಇದೊಂದು ಸಾಮಾಜಿಕ-ಪ್ರಜಾಸತ್ತಾತ್ಮಕ ಪಕ್ಷಗಳ ಗುಂಪಾಗಿದ್ದು, ಅದರಲ್ಲಿ ಅಮೆರಿಕದ ಡೆಮಕ್ರಾಟಿಕ್ ಪಕ್ಷ, ಬ್ರಿಟನ್‌ನ ಲೇಬರ್ ಪಕ್ಷ ಹಾಗೂ ಇತರ ಕೆಲವು ಪಕ್ಷಗಳಿವೆ.
ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂೆ ಹಾಗೂ ನ್ಯೂಝಿಲೆಂಡ್‌ನ ಪ್ರಧಾನಿ ಜಾನ್ ಕೀಯವರ ಅಧ್ಯಕ್ಷತೆಯಲ್ಲಿ ಕೊಲಂಬೊದಲ್ಲಿ ನಡೆದ ಐಡಿಯು ಕಾರ್ಯಕಾರಿ ಸಮಿತಿಯ ಸಭೆಯೊಂದರ ವೇಳೆ ಬಿಜೆಪಿ ಐಡಿಯುಗೆ ಸೇರಿದೆ. ವಿಶ್ವದ ಕಾರ್ಯಕಾರಿ ಸಮಿತಿಯ ಸಭೆಯೊಂದರ ವೇಳೆ ಬಿಜೆಪಿ ಐಡಿಯುಗೆ ಸೇರಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸರಕಾರವನ್ನು ನಡೆಸುತ್ತಿರುವ ಹಾಗೂ ಬಹುಶಃ ಪ್ರಪಂಚದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ಸೇರುವಿಕೆಯಿಂದ ಐಡಿಯು ಭಾರೀ ಬಲ ಪಡೆಯಲಿದೆಯೆಂದು ವಿಕ್ರಮ ಸಿಂೆ ಉಲ್ಲೇಖಿಸಿದ್ದಾರೆ.
ಐಡಿಯು, ಅಮೆರಿಕದ ಆಗಿನ ಉಪಾಧ್ಯಕ್ಷ ಜಾರ್ಜ್ ಎಚ್.ಡಬ್ಲು ಬುಶ್‌ರ ಪ್ರಚೋದನೆಯಿಂದ 1983ರಲ್ಲಿ ಸ್ಥಾಪನೆಯಾಗಿದೆ.







