ಎಸೆಸೆಲ್ಸಿ ಪರೀಕ್ಷಾ ಸಿದ್ಧತೆಗೆ ಸಹಾಯವಾಣಿ
ಬೆಂಗಳೂರು, ಫೆ.28: ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮಾ.3ರಿಂದ 28ರವರೆಗೆ ಸಹಾಯವಾಣಿಯನ್ನು ಆರಂಭಿಸಲಿದೆ. ಮಾ.30ರಿಂದ ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆಗಳು ನಡೆಯುತ್ತಿದ್ದು, ಈ ಸಹಾಯವಾಣಿ ಮಾರ್ಚ್ 3ರಿಂದ 28ರ ತನಕ ಪ್ರತಿ ದಿನ ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಮಾ.30 ರಿಂದ ಎ.13ರ ತನಕ ಸಹಾಯವಾಣಿ ಬೆಳಗ್ಗೆ 9ರಿಂದ ಮಧ್ಯಾಹ್ನ 2.30ರವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರತಿವರ್ಷ ಸಹಾಯವಾಣಿ ಮತ್ತು ಕೌನ್ಸಿಲಿಂಗ್ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತದೆ. ಸಹಾಯವಾಣಿ ಸಂಖ್ಯೆಗಳು: 080-23310075, 080-23310076.
Next Story





