ನಾಳಿನ ಕಾರ್ಯಕಮ
ಸಾರ್ವಜನಿಕ ಅಭಿಪ್ರಾಯ ಸಭೆ
ಮಂಗಳೂರು, ಫೆ.28: ಮಂಗಳೂರು ಮಹಾನಗರಪಾಲಿಕೆಯ 2016-17ನೆ ಸಾಲಿನ ಆಯವ್ಯಯ ಮುಂಗಡ ಪತ್ರವನ್ನು ತಯಾರಿಸುವ ಸಲುವಾಗಿ ಪೌರ ಸಂಸ್ಥೆಗಳ ಲೆಕ್ಕವನ್ನಿಡುವಿಕೆ ಮತ್ತು ಆಯವ್ಯಯ ತಯಾರಿಕೆ ನಿಯಮಗಳ ಅನ್ವಯ ಸಾರ್ವಜನಿಕರಿಂದ, ಸಂಘಸಂಸ್ಥೆಗಳಿಂದ, ಊರಿನ ಗಣ್ಯರಿಂದ , ಸರಕಾರೇತರ ಸಂಸ್ಥೆ, ವ್ಯಾಪಾರೋದ್ಯಮಿಗಳಿಂದ ಸಲಹೆಗಳನ್ನು ಪಡೆಯಲು ಮಾ.1ರಂದು ಸಂಜೆ 4ಕ್ಕೆ ಮನಪಾ ಸಭಾಂಗಣದಲ್ಲಿ ಮಾ.2ರಂದು ಸುರತ್ಕಲ್‌ನ ಮನಪಾ ಉಪಕಚೇರಿಯ ಆವರಣದಲ್ಲಿ ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಸಭೆ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ನಾಗಮಂಡಲ ಸೇವೆ
ಪುತ್ತೂರು, ಫೆ.28: ಇಲ್ಲಿನ ರಾಗಸುಧಾ, ದಸರಾ ನವದುರ್ಗಾರಾಧನಾ ಸಮಿತಿ ವತಿಯಿಂದ ಮಾ.1ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ಗದ್ದೆಯಲ್ಲಿ ಚತುರ್ಪವಿತ್ರ- ನಾಗಮಂಡಲ ಸೇವೆ ನಡೆಯಲಿದೆ ಎಂದು ರಾಗಸುಧಾ ಸಂಚಾಲಕ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬ್ರಹ್ಮವಾದಕ ಕೆ.ರಾಧಾಕೃಷ್ಣ ಪುತ್ತೂರಾಯ ಹಾಗೂ ಸ್ಯಾಕ್ಸೋಫೋನ್ ಕಲಾವಿದ ಪಿ.ಕೆ.ದಾಮೋದರರಿಗೆ ರತ್ನಪ್ರಶಸ್ತಿ ಪುರಸ್ಕಾರ ನೀಡಲಾಗುವುದು. ಸ್ವರ್ಣೋದ್ಯಮಿಗಳಾದ ಜಿ.ಎಲ್.ಆಚಾರ್ಯ, ಮುಳಿಯ ಶ್ಯಾಮ ಭಟ್, ಡಾ. ಎಂ.ಕೆ.ಪ್ರಸಾದ್ ಭಂಡಾರಿ, ಜವುಳಿ ವ್ಯಾಪಾರಸ್ಥ ಸಂಜೀವ ಶೆಟ್ಟಿ, ಸಮಾಜ ಸೇವಕ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಉದ್ಯಮಿ ಮೋಹನ್‌ದಾಸ್ ಭಟ್, ಗುತ್ತಿಗೆದಾರ ಇ.ಪಿ.ಕೆ.ನಾಯರ್, ನವನೀತ ನರ್ಸರಿಯ ಜಯರಾಮ ಕೆದಿಲಾಯರನ್ನು ಗೌರವಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ರಾಗಸುಧಾ ಉಪಾಧ್ಯಕ್ಷ ಲೊಕೇಶ್ ಹೆಗ್ಡೆ, ಖಜಾಂಚಿ ಸುಭಾಷ್ ರೈ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.







