ದುಬೈ ಓಪನ್ ಪ್ರಶಸ್ತಿ ಜಯಿಸಿದ ವಾವ್ರಿಂಕಾ
ವೃತ್ತಿಬದುಕಿನ ಹದಿಮೂರನೆ ಪ್ರಶಸ್ತಿ

ದುಬೈ,ಫೆ.28: ಸ್ವಿಸ್‌ನ ಸ್ಟಾನ್ ವಾವ್ರಿಂಕಾ ಅವರು ಶನಿವಾರ ಇಲ್ಲಿ ನಡೆದ ದುಬೈ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಎತ್ತುವ ಮೂಲಕ ಈ ವರ್ಷ ಎರಡನೆ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ದುಬೈ ಎಟಿಪಿ ಫೈನಲ್‌ನಲ್ಲಿ ವಾವ್ರಿಂಕಾ ಅವರು ಮಾರ್ಕೊಸ್ ಬಾಗ್ದಾಟೀಸ್ ವಿರುದ್ಧ ಟೈಬ್ರೆಕರ್‌ನಲ್ಲಿ 6-4, 7-6, (15/13) ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಎತ್ತಿದರು.
ಇದರೊಂದಿಗೆ ವಾವ್ರಿಂಕಾ ವೃತ್ತಿ ಬದುಕಿನಲ್ಲಿ 13ನೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫ್ರೆಂಚ್ ಓಪನ್ ಚಾಂಪಿಯನ್ ವಾವ್ರಿಂಕಾ ಅವರು ಚೆನ್ನೈ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡ ಬಳಿಕ ಎರಡನೆ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ನಡೆದ ಹಣಾಹಣಿಯಲ್ಲಿ ವಾವ್ರಿಂಕಾ ಟೈಬ್ರೇಕರ್‌ನಲ್ಲಿ 4-1 ಅಂತರದಲ್ಲಿ ಮುನ್ನಡೆ ಸಾಧಿಸಿ ಪ್ರಶಸ್ತಿ ಗೆದ್ದುಕೊಂಡರು.
ಸೈಪ್ರೆಸ್‌ನ 30ರ ಹರೆಯದ ಮಾರ್ಕೊಸ್ ಬಾಗ್ದಾಟೀಸ್ ಕಳೆದ ಎಂಟು ವರ್ಷಗಳಿಂದ ಆಡಿರಲಿಲ್ಲ. 2010ರಲ್ಲಿ ಸಿಡ್ನಿಯಲ್ಲಿ ಪ್ರಶಸ್ತಿ ಎತ್ತಿದ್ದರು.
Next Story





