ಪುತ್ತೂರು ನಗರಸಭೆ ಸೌಲಭ್ಯ ವಿತರಣೆ

ಪುತ್ತೂರು, ಫೆ.29 : ಪುತ್ತೂರು ನಗರ ಸಭೆಯ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಭಿನ್ನ ಸಾಮಥ್ಯದ ವ್ಯಕ್ತಿಗಳಿಗೆ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಸೋಮವಾರ ನಡೆಯಿತು.
ಈ ಸಂದರ್ಭ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ, ವಿದ್ಯುತ್ ಸಂಪರ್ಕಕ್ಕೆ ಮತ್ತು ಕುಡಿಯುವ ನೀರು ಯೋಜನೆಗೆ ಕಾರ್ಯಾಧೇಶ ನೀಡಲಾಯಿತು. ಭಿನ್ನ ಸಾಮರ್ಥ್ಯದ ಕುಟುಂಬಗಳ ಪೋಷಕರಿಗೆ ಫೋಷಣಾ ಭತ್ಯೆಯನ್ನು ವಿತರಿಸಲಾಯಿತು.
ಅಧ್ಯಕ್ಷ ಜೀವಂಧರ್ ಜೈನ್ ಅವರು ಫಲಾನುಭವಿಗಳಿಗೆ ವಿತರಣೆ ಮಾಡಿದರು. ನಗರ ಸಭಾ ಪೌರಾಯುಕ್ತೆ ರೇಖಾ ಜೆ.ಶೆಟ್ಟಿ, ಶಹರಿ ರೋಜ್‌ಗಾರ್ ಯೋಜನೆಯ ಸಮುದಾಯ ಸಂಘಟಕ ಉಸ್ಮಾನ್ ಬೊಳುವಾರು, ನಗರಸಭಾ ಸದಸ್ಯೆ ಸೀಮಾ ಗಂಗಾಧರ್ ಉಪಸ್ಥಿತರಿದ್ದರು.
Next Story





