ಅಂತೂ ಇಂತೂ ಲಿಯೋ ಗೆ ಆಸ್ಕರ್ ಬಂತು !
ಹನ್ನೊಂದು ವರ್ಷ, ನಾಲ್ಕು ನಾಮ ನಿರ್ದೇಶನಗಳ ಬಳಿಕ ಹಾಲಿವುಡ್ ಹಾರ್ಟ್ ತ್ರೋಬ್ , ಟೈಟಾನಿಕ್ ನ ಹೀರೋ ಲಿಯೋನಾರ್ಡೋ ಡಿ ಕಾಪ್ರಿಯೋಗೆ ಕೊನೆಗೂ ಆಸ್ಕರ್ ಒಲಿದಿದೆ. ಜಗತ್ತೇ ಮೆಚ್ಚುವ ನಟ, ಸ್ಟಾರ್ ನೀವಾಗಿದ್ದರೂ ಆಸ್ಕರ್ ಅಷ್ಟು ಸುಲಭಕ್ಕೆ ನಿಮ್ಮ ಕೈಸೇರದು ಎಂಬುದಕ್ಕೆ ಪ್ರತಿಭಾವಂತ ಲಿಯೋ ಅತ್ಯುತ್ತಮ ಉದಾಹರಣೆ. 2005,2007,2014 ರಲ್ಲಿ ಅತ್ಯುತ್ತಮ ನಟ ಹಾಗು 1994 ರಲ್ಲಿ ಪೋಷಕ ನಟ ವಿಭಾಗದಲ್ಲಿ ನಾಮನಿರ್ದೆಶನಗೊಂಡಿದ್ದರೂ ೨೦೧೫ ರವರೆಗೆ ತಾಳ್ಮೆಯಿಂದ ಕಾಯಬೇಕಾಯಿತು ಆಸ್ಕರ್ ಗೌರವಕ್ಕಾಗಿ. ತಾಳಿದವನು ಬಾಳಿಯಾನು ಎಂಬಂತೆ ಈಗ ಇಡೀ ಸಿನೆಮಾ ಜಗತ್ತೇ ಈ ಬಾರಿ ಲಿಯೋ ಎಂದು ಮಂತ್ರ ಜಪಿಸಿ ಅವರನ್ನು ಗೌರವಿಸಿದೆ. ಅದರ ವೀಡಿಯೋ ಇಲ್ಲಿದೆ.
courtesy : hindustantimes.com
Next Story





