ತಮಿಳುನಾಡು ಮುಖ್ಯಮಂತ್ರಿ ಜಯಲಲಿತರ ಹೆಸರಲ್ಲಿ ದೇವಸ್ಥಾನ: ವೆಲ್ಲೂರಿನಲ್ಲಿ ಶಿಲಾನ್ಯಾಸ

ವೆಲ್ಲೂರು,ಫೆ.29: ತಮಿಳ್ನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾರಿಗೆ ದೇವಸ್ಥಾನವೊಂದು ನಿರ್ಮಾಣಗೊಳ್ಳಲಿದೆ ಎಂದು ವರದಿಯಾಗಿದೆ. ಅಮ್ಮ ಆಲಯಂ ಎಂಬ ಹೆಸರಿನ ದೇವಳ ನಿರ್ಮಾಣ ಈ ವರ್ಷ ಕೊನೆಯಲ್ಲಿ ಪೂರ್ಣಗೊಳ್ಳಲಿದೆ. ವೆಲ್ಲೂರಿನ ಅಯ್ಯೆಪ್ಪೇಡ್ ಗ್ರಾಮಲ್ಲಿ ಇದೀಗ ಶಿಲಾನ್ಯಾಸ ನಡೆಸಲಾಗಿದೆ.
ವಿರುಗಂಬಂಕಂ ಕ್ಷೇತ್ರದ ಎಂಜಿಆರ್ ಯುವ ವಿಭಾಗದ ಜಂಟಿ ಕಾರ್ಯದರ್ಶಿ ಎ.ಪಿ. ಶ್ರೀನಿವಾಸನ್ 2008ರಲ್ಲಿ ತಾನು ಖರೀದಿಸಿದ ಭೂಮಿಯಲ್ಲಿ ಅಮ್ಮರಿಗೆದೇವಳವನ್ನು ಕಟ್ಟಿಸುತ್ತಿದ್ದಾರೆ. ಈ ಮೂವತ್ತೇಳು ವರ್ಷ ವಯಸ್ಸಿನ ಯುವ ನಾಯಕ ಚೆನ್ನೈಯಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ. 1200 ಚದುರ ಅಡಿ ವಿಸ್ತಾರದ ಭೂಮಿಯನ್ನು ದೇವಸ್ಥಾನ ನಿರ್ಮಾಣಕ್ಕೆ ಅವರು ಬಿಟ್ಟುಕೊಟ್ಟಿದ್ದಾರೆ. ಐವತ್ತು ಲಕ್ಷ ರೂ. ಖರ್ಚು ತಗಲಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ತನ್ನ ಕುಟುಂಬ ಮತ್ತು ಗೆಳೆಯರಿಂದ ಸಂಗ್ರಹಿಸುವ ಹಣವನ್ನು ಅಮ್ಮನ ದೇವಸ್ಥಾನಕ್ಕೆ ಅವರು ಬಳಸಲಿದ್ದಾರೆ. ದಾನ ನೀಡುವವರಿಗೆ ಸ್ವಾಗತ ವಿದೆಯೆಂದು ಶ್ರೀನಿವಾಸನ್ ಹೇಳಿದ್ದಾರೆ.
2004ರಲ್ಲಿ ಶ್ರೀನಿವಾಸನ್ ಜಯಲಲಿತಾರ ಪಕ್ಷಕ್ಕೆ ಸೇರಿದ್ದರು. ಅಮ್ಮನೊಂದಿಗೆತನಗಿರುವ ಭಕ್ತಿಯನ್ನು ಪ್ರಕಟಿಸುವುದಕ್ಕಾಗಿ ತಾನು ಕಾರ್ಯ ಕೈಗೆತ್ತಿಕೊಂಡೆ ಎಂದು ಅವರು ಹೇಳುತ್ತಿದ್ದಾರೆ. ಅರಂಗೋಣಂ ಶಾಲಿಂಗುರ್ ರಸ್ತೆಯಲ್ಲಿ ದೇವಳ ನಿರ್ಮಾಣಗೊಳ್ಳಲಿದೆ.





