ಸುಳ್ಯ :ಶಾರದಾ ಮಹಿಳಾ ಕಾಲೇಜು ವಾರ್ಷಿಕೋತ್ಸವ

ಸುಳ್ಯ: ಸುಳ್ಯದ ಶಾರದಾ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಅಮೃತ ಭವನದಲ್ಲಿ ಸೋಮವಾರ ನಡೆಯಿತು.
ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಕೆ.ಎಂ.ಸುಲೋಚನ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳೆಯರು ಪಸ್ತಕಗಳನ್ನು ನಿರ್ಲಕ್ಷಿಸಬಾರದು. ಯಾವಾಗಳು ಅವರ ಕೈಯಲ್ಲಿ ಪುಸ್ತಕಗಳಿರಬೇಕು. ನಾವು ಬೇರೆಯವರೊಂದಿಗೆ ಸ್ಪರ್ಧಿಸುವ ಬದಲು ನಮ್ಮೊಂದಿಗೆ ಸ್ಪರ್ಧಿಸಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಸಾತ್ವಿಕ ಆಹಾರದಿಂದ ಮನಸ್ಸೂ ಶುದ್ಧವಾಗಿರುತ್ತದೆ. ನಮ್ಮ ಉಡುಪು ಕೂಡಾ ವ್ಯಕ್ತಿತ್ವವನ್ನು ಬಿಂಬಿಸುವುದರಿಂದ ಆ ಕಡೆಗೂ ಗಮನ ನೀಡಬೇಕು. ತಪ್ಪು, ದೋಷಗಳನ್ನು ಹುಡುಕುವ ಬದಲು ಒಳ್ಳೆಯದನ್ನು ಮಾತ್ರ ಯೋಚನೆ ಮಾಡಬೇಕು. ನಮ್ಮ ಆಲೋಚನೆಗಳು, ಅಭ್ಯಾಸಗಳು ವಿಶಷ್ಟವಾಗಿರಬೇಕು ಎಂದವರು ಹೇಳಿದರು. ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನ್ಯಾಯವಾದಿ ಕೊಯಿಂಗಾಜೆ ವೆಂಕಟ್ರಮಣ ಗೌಡ ಅತಿಥಿಗಳಾಗಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಸಂಚಾಲಕಿ ಡಾ.ರೇವತಿ ನಂದನ್, ಪ್ರಾಂಶುಪಾಲೆ ಕೆ.ಜೋತ್ಸಾ, ಶಾರದಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ವಿಜಯ, ಸಾಂಸ್ಕೃತಿಕ ಸಂಘದ ಸಂಚಾಲಕಿ ಕೆ.ಯು.ಲಾವಣ್ಯ, ಸಾಹಿತ್ಯಿಕ ಸಂಘದ ಸಂಚಾಲಕಿ ಸಂಚಾಲಕಿ ಆರ್.ಶಾಂತಾಮಣಿ, ಕ್ರೀಡಾ ಸಂಘದ ಸಂಚಾಲಕಿ ಕೆ.ಎಸ್.ಸವಿತಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕೆ.ಪಲ್ಲವಿ, ಸಾಂಸ್ಕೃತಿಕ ಕಾರ್ಯದರ್ಶಿ ಎ.ವಿನ್ಯಾಶ್ರೀ, ಕ್ರೀಡಾ ಕಾರ್ಯದರ್ಶಿ ಯು.ಫಾತಿಮತ್ ಅಝೀನ ವೇದಿಕೆಯಲ್ಲಿದ್ದರು.







