ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಂಶೋಧನೆಗೆ ಅನುದಾನ

ಪುತ್ತೂರು: ಇಲ್ಲಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ರಮ್ಯಾ ಹೆಚ್ ಮತ್ತು ರೂಪ ಆರ್ ಎನ್ ಇವರು ಸಲ್ಲಿಸಿದ ಔಷಧೀಯ ಸಸ್ಯದ ಎಲೆಗಳ ಸ್ವಯಂಚಾಲಿತ ಗುರುತಿಸುವಿಕೆ ಮತ್ತು ಮಾಹಿತಿ ತಂತ್ರ ಎನ್ನುವ ಸಂಶೋಧನಾ ಪ್ರಸ್ತಾವನೆಯು ಕರ್ನಾಟಕ ಸರ್ಕಾರದ ವಿಶನ್ ಗ್ರೂಪ್ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿ ವಿಭಾಗದಿಂದ ಅಂಗೀಕರಿಸಲ್ಪಟ್ಟಿದೆ. ಔದ್ಯೋಗಿಕ ವಿಜ್ಞಾನಕ್ಕೆ ಸಂಬಂಧಿಸಿದ ಹೊಸತನದ ಯೋಜನೆ ವಿಭಾಗದಲ್ಲಿ ಅಂಗೀಕರಿಸಲ್ಪಟ್ಟ ಈ ಪ್ರಸ್ತಾವನೆಯ ಅಭಿವೃದ್ಧಿಗಾಗಿ ನಲ್ವತ್ತು ಸಾವಿರ ರೂಪಾಯಿಗಳ ಅನುದಾನ ಮಂಜೂರಾಗಿರುತ್ತದೆ. ಕಾಲೇಜಿನ ಗಣಕ ಯಂತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಹರಿವಿನೋದ್ ಎನ್ ಅವರ ಮಾರ್ಗದರ್ಶನದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
Next Story





