ಏಷ್ಯಾ ಕಪ್: ಯುಎಇ ವಿರುದ್ಧ ಪಾಕ್‌ಗೆ ಜಯ

ಮೀರ್ಪುರ, ಫೆ.29: ಪಾಕಿಸ್ತಾನ ತಂಡ ಇಲ್ಲಿ ನಡೆದ ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯ 6ನೆ ಪಂದ್ಯದಲ್ಲಿ ಯುಎಇ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದೆ.
ಶೇರ್ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 130 ರನ್‌ಗಳ ಸವಾಲನ್ನು ಪಡೆದ ಪಾಕಿಸ್ತಾನ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿ ಗೆಲುವಿನ ದಡ ಸೇರಿತು.
ಉಮರ‍್ ಅಕ್ಮಲ್ ಔಟಾಗದೆ 50 ರನ್(78ನಿ, 46ಎ, 2ಬೌ,3ಸಿ) ಮತ್ತು ಶುಐಬ್ ಮಲಿಕ್ ಔಟಾಗದೆ 63 ರನ್(69ನಿ, 49ಎ, 7ಬೌ, 3ಸಿ) ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಯುಎಇ ತಂಡದ ನಾಯಕ ಅಮ್ಜದ್ ಜಾವೇದ್ ಪಾಕ್‌ನ ಅಗ್ರ ಸರದಿಯ ಮೂವರು ದಾಂಡಿಗರಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. 3.1 ಓವರ್‌ಗಳಲ್ಲಿ 17 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಪಾಕ್‌ನ ಬ್ಯಾಟಿಂಗ್‌ನ್ನು ಮುನ್ನಡೆಸಿದ ಅಕ್ಮಲ್ ಮತ್ತು ಮಲಿಕ್ ನಾಲ್ಕನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 114 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಯುಎಇ ತಂಡ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 129 ರನ್ ಗಳಿಸಿತ್ತು.
ಯುಎಇ ತಂಡ ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದರೊಂದಿಗೆ ಏಷ್ಯಾಕಪ್‌ನಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದೆ.
ಸೋಮವಾರ ಇಲ್ಲಿನ ಶೇರ್-ಇ-ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಯುಎಇ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಪಾಕ್‌ನ ವೇಗದ ಬೌಲರ್‌ಗಳಾದ ಮುಹಮ್ಮದ್ ಆಮಿರ್(2-6), ಮುಹಮ್ಮದ್ ಇರ್ಫಾನ್(2-30), ಮುಹಮ್ಮದ್ ಸಮಿ(1-28) ದಾಳಿಗೆ ಸಿಲುಕಿದ ಯುಎಇ ತಂಡ 4ನೆ ಓವರ್‌ನಲ್ಲಿ 12 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಶೈಮನ್ ಅನ್ವರ್(46), ಮುಹಮ್ಮದ್ ಉಸ್ಮಾನ್(21), ಅಮ್ಜದ್ ಜಾವೇದ್(ಔಟಾಗದೆ 27) ಹಾಗೂ ಮುಹಮ್ಮದ್ ನವೀದ್(ಔಟಾಗದೆ 10) ಕೊಡುಗೆ ನೆರವಿನಿಂದ ಯುಎಇ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 129 ರನ್ ಗಳಿಸಿತು.
4ನೆ ವಿಕೆಟ್‌ಗೆ 29 ರನ್ ಸೇರಿಸಿದ ಅನ್ವರ್ ಹಾಗೂ ಉಸ್ಮಾನ್ ಮುಶ್ತಾಕ್(9) ತಂಡವನ್ನು ಆಧರಿಸಿದರು. ಆದರೆ, ಈ ಜೋಡಿಯನ್ನು ಶಾಹಿದ್ ಅಫ್ರಿದಿ ಬೇರ್ಪಡಿಸಿದರು.
ಐದನೆ ವಿಕೆಟ್‌ಗೆ ಮುಹಮ್ಮದ್ ಉಸ್ಮಾನ್(21) ಅವರೊಂದಿಗೆ 30 ರನ್ ಸೇರಿಸಿದ ಅನ್ವರ್ ಮತ್ತೊಂದು ಜೊತೆಯಾಟದಲ್ಲಿ ಪಾಲ್ಗೊಂಡರು. 46 ರನ್ ಗಳಿಸಿದ್ದ ಅನ್ವರ್ ವೇಗಿ ಇರ್ಫಾನ್‌ಗೆ ವಿಕೆಟ್ ಒಪ್ಪಿಸಿದರು.
6ನೆ ವಿಕೆಟ್‌ಗೆ 46 ರನ್ ಜೊತೆಯಾಟ ನಡೆಸಿದ ಮುಹಮ್ಮದ್ ಉಸ್ಮಾನ್(21) ಹಾಗೂ ಅಮ್ಜ್ಜದ್ ಜಾವೇದ್(ಔಟಾಗದೆ 27) ತಂಡದ ಸ್ಕೋರನ್ನು 100ರ ಗಡಿ ದಾಟಿಸಿದರು.
ಪಾಕ್ ಪರ ಮುಹಮ್ಮದ್ ಆಮಿರ್(2-6) ಹಾಗೂ ಮುಹಮ್ಮದ್ ಇರ್ಫಾನ್(2-30) ತಲಾ ಎರಡು ವಿಕೆಟ್ ಉರುಳಿಸಿದರು. ಮುಹಮ್ಮದ್ ಸಮಿ(1-28) ಹಾಗೂ ಶಾಹಿದ ಅಫ್ರಿದಿ(1-24) ತಲಾ ಒಂದು ವಿಕೆಟ್ ಕಬಳಿಸಿದರು
ಸಂಕ್ಷಿಪ್ತ ಸ್ಕೋರ್ ವಿವರ
ಯುಎಇ 20 ಓವರ್‌ಗಳಲ್ಲಿ 129/6( ಅನ್ವರ್ 46, ಜಾವೇದ್ ಔಟಾಗದೆ 27; ಆಮಿರ್ 2-6, ಇರ್ಫಾನ್ 2-30).
ಪಾಕಿಸ್ತಾನ 18.4 ಓವರ್‌ಗಳಲ್ಲಿ 131/3( ಮಲಿಕ್ ಔಟಾಗದೆ 63, ಅಕ್ಮಲ್ ಔಟಾಗದೆ 50, ; ಜಾವೇದ್ 3-36).







