Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು: 2016-17ನೇ ಸಾಲಿನ ಬಜೆಟ್‌ಗೆ...

ಮಂಗಳೂರು: 2016-17ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದೆ.

ವಾರ್ತಾಭಾರತಿವಾರ್ತಾಭಾರತಿ29 Feb 2016 9:20 PM IST
share
ಮಂಗಳೂರು: 2016-17ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದೆ.

ಮಂಗಳೂರು,ಫೆ.29:ಕೇಂದ್ರ ಹಣಕಾಸು ಸಚಿವರು ಮಂಡಿಸಿದ ಕೇಂದ್ರ ಸರಕಾರದ 2016-17ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದೆ. 

ಆರ್ಥಿಕ ಸವಾಲುಗಳನ್ನು ಎದುರಿಸಲು ಬಜೆಟ್ ವಿಫಲ: ಸಚಿವ ರಮಾನಾಥ ರೈ

 ಭವಿಷ್ಯದ ಆರ್ಥಿಕ ಸವಾಲುಗಳನ್ನು ಎದುರಿಸಲು ಅಸಮರ್ಥವಾಗಿರುವುದನ್ನು ಬಜೆಟ್ ಎತ್ತಿತೋರಿಸುತ್ತಿದೆ . ದೇಶದ ಆರ್ಥಿಕ ಚಿತ್ರಣವನ್ನು ಬದಲಾಯಿಸಬೇಕಾದರೆ ಧೈರ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿತ್ತು. ಅಂತಹ ಎದೆಗಾರಿಕೆ ಕೇಂದ್ರ ಸರಕಾರಕ್ಕಿಲ್ಲ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ರಬ್ಬರ್ ಬೆಳೆಗಾರರಿಗೆ ಯಾವುದೇ ರೀತಿಯ ನೆಮ್ಮದಿ ನೀಡಲು ಬಜೆಟ್ ವಿಫಲವಾಗಿದೆ. ರಬ್ಬರ್ ಬೆಳೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ ರಬ್ಬರ್ ಬೆಳೆಗಾರ ಕಂಗಾಲಾಗಿದ್ದಾನೆ. ಉದ್ದಿಮೆಗಳ ಸಾಲದ ಬಗ್ಗೆ ತೋರಿಸಿದ ಕಾಳಜಿಯನ್ನು ರೈತರ ಸಾಲದ ಬಗ್ಗೆ ತೋರಿಸಿಲ್ಲ. ಕೃಷಿಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ.
ಯುಪಿಎ ಸರಕಾರ ಆರಂಭಿಸಿದ್ದ ಆಧಾರ್ ಕಾರ್ಡ್, ನರೇಗಾ, ನಿರ್ಮಾಣ ಭಾರತ್ ಮತ್ತಿತರ ಯೋಜನೆಗಳ ಬಗ್ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಅಪಪ್ರಚಾರ ಮಾಡಲಾಗಿತ್ತು. ಆದರೆ ಈಗಿನ ಕೇಂದ್ರ ಸರಕಾರವು ಆಧಾರ್ ಕಾರ್ಡ್ ಗೆ ಶಾಸನಬದ್ಧ ಸ್ಥಾನಮಾನ ನೀಡಿ, ತನ್ನ ಮುಖವಾಡವನ್ನು ಕಳಚಿದೆ.
ಇಂದು ಮಂಡಿಸಿದ ಕೇಂದ್ರ ಬಜೆಟ್ ಕೇವಲ ಅಂಕಿಸಂಖ್ಯೆಗಳನ್ನು ಮುಂದಿಟ್ಟು ಜನರನ್ನು ದಾರಿ ತಪ್ಪಿಸುತ್ತಿದೆ
 -ರಮಾನಾಥ ರೈ , ದ.ಕ ಜಿಲ್ಲಾ ಉಸ್ತುವಾರಿ ಸಚಿವರು

  ಅತ್ಯುತ್ತಮ ಬಜೆಟ್ : ನಳಿನ್ ಕುಮಾರ್ ಕಟೀಲ್

ಕೇಂದ್ರ ಸರಕಾರವು ಜನಪರವಾದ, ಕೃಷಿಪರವಾದ ಅತ್ಯುತ್ತಮ ಬಜೆಟ್‌ನ್ನು ನೀಡಿದೆ. ಗಾ್ರುೀಣಾಭಿವೃದ್ದಿ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರಮುಖ ವಿಚಾರಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಜನರ ಮೂಲಭೂತ ಆಶಯಗಳಿಗೆ ಸ್ಪಂದಿಸಿದೆ. ಕರಾವಳಿಗೆ ಸಂಬಂಧಿಸಿದಂತೆ ಮಂಗಳೂರು ಬಂದರು ಅಭಿವೃದ್ಧಿಗೆ 71ಕೋಟಿ ರೂ.ಗಳನ್ನು ಹಾಗೂ ಎಂಆರ್‌ಪಿಎಲ್ ಯೋಜನೆಗೆ 2270ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ವಿಶೇಷ ವಾಗಿ ಕರಾವಳಿಗೆ ದೊಡ್ಡ ಕೊಡುಗೆಯಾಗಿದೆ. ಈ ಅತ್ಯುತ್ತಮ ಬಜೆಟ್ ನೀಡಲು ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣ್ ಜೆಟ್ಲಿ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. -ನಳಿನ್ ಕುಮಾರ್ ಕಟೀಲ್ , ಸಂಸದರು. ದ.ಕ

ಒಟ್ಟಾರೆ ಕೇಂದ್ರ ಸರಕಾರದ ಬಜೆಟ್ ಒಂದು ಒಳ್ಳೆಯ ಬಜೆಟ್ ಅಲ್ಲ, ಮಂಡಿಸಿದ ಬಜೆಟ್ ಅನುಷ್ಠಾನಗೊಳಿಸಲು ಸಾಧ್ಯವಾಗದೇ ಘೋಷಣೆ ಮಾತ್ರ- ಐವನ್ ಡಿಸೋಜ

ಕೇಂದ್ರ ಬಜೆಟ್ ರೈತರ ಸಾಲ ಮನ್ನಾ ಮಾಡದೇ ಕುಡಿಯುವ ನೀರು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯಾವುದೇ ಅನುದಾನವನ್ನು ನೀಡದೇ ಮನ್ಕಿ ಬಾತ್ ಗೆ ಸೀಮಿತವಾದ ಬಜೆಟ್ ನೀಡಿದ್ದಾರೆ. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಮೋದಿ ಸರಕಾರ ನೀಡಿದ ಆಶ್ವಾಸನೆಗೆ ವಿರುದ್ಧವಾಗಿದ್ದು ಮನ್ಕಿಬಾತ್ ಮೂಲಕ ರೈತರನ್ನು ಸಂತೈಸಿದ ಪ್ರಧಾನಮಂತ್ರಿ ಮೋದಿಯವರು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ರೈತರಿಗೆ ಸಂತೋಷದ ಸುದ್ದಿಯನ್ನು ನೀಡುತ್ತಾರೆಂದು ಭಾವಿಸಿದ್ದೆ .ಆದರೆ ಅದರಂತೆ ನಡೆಯಲಿಲ್ಲ ಇದೊಂದು ನಿರಾಶಾದಾಯಕ ಬಜೆಟ್.
 ಕೇವಲ ಕೇಂದ್ರ ಸರಕಾರ ತೆರಿಗೆಗಳನ್ನು ವಸೂಲಿ ಮಾಡಲು ಆಲೋಚನೆ ಮಾಡಿದೆ ಹೊರತು ಕುಡಿಯುವ ನೀರು, ಗಾ್ರುೀಣ ಜೀವ ಖಾತ್ರಿ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್, ಕೃಷಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಗೆ ಅನುದಾನವನ್ನು ಹೆಚ್ಚಿಸದೇ ರಾಜ್ಯ ಸರಕಾರಗಳ ಮೇಲೆ ಹೆಚ್ಚಿನ ಹೊರೆಯನ್ನು ಹಾಕಿದೆ ಹೊರತು ಕೇಂದ್ರ ಬಜೆಟ್‌ನಿಂದ ರಾಜ್ಯದ ಜನತೆಗೆ ಯಾವುದೇ ಪ್ರಯೋಜನ ಆಗಿಲ್ಲ.

ಅಹಮದ್ ಬಾವ, ಮಾಜಿ ಕೋಶಾಧಿಕಾರಿ, ಕೆಸಿಸಿಐ,ಮಂಗಳೂರು

ಬಜೆಟ್‌ನಿಂದ ಕೃಷಿಕರಿಗೆ ಸ್ವಲ್ಪಮಟ್ಟಿಗೆ ಪ್ರಯೋಜನವಾಗಲಿದೆ. ಸರಕಾರಿ ನೌಕರರ ಮೊದಲ 3 ವರ್ಷದ ಪಿಎಫ್ ಪಾವತರಿಯನ್ನು ಸರಕಾರವೆ ಭರಿಸಲಿರುವುದರಿಂದ ಸರಕಾರಿ ಉದ್ಯೋಗಿಗಳಿಗೂ ಅನುಕೂಲವಾತಗಲಿದೆ. ಗ್ರಾಮೀಣಾಭಿವೃದ್ದಿಗೆ , ಕೃಷಿ ಮಾರುಕಟ್ಟೆ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಸಾಧಾರಣ ಒಳ್ಳೆಯ ಬಜೆಟ್ ಇದಾಗಿದೆ.

ಭುವನೆಶ್ವರಿ ಹೆಗ್ಡೆ, ಅರ್ಥಶಾಸ್ತ್ರ ಉಪನ್ಯಾಸಕರು, ಮಂಗಳೂರು ವಿ.ವಿ ಕಾಲೇಜು

ಗ್ರಾಮೀಣ ರಂಗ, ಸಾಮಾಜಿಕ ರಂಗಕ್ಕೆ ಸಂಬಂಧಪಟ್ಟಂತೆ ಉತ್ತಮ ಅಂಶಗಳು ಬಜೆಟ್‌ನಲ್ಲಿ ಇದೆ. ಆರೋಗ್ಯ, ಶಿಕ್ಷಣ ಮುಂತಾದವುಗಳಲ್ಲಿ ಉತ್ತಮ ಪ್ರಯತ್ನವನ್ನು ಆರಂಭಿಸಿದ್ದಾರೆ. ಆದರೆ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಪಟ್ಟಂತೆ ಸರಳೀಕರಣ ಮಾಡಿರುವುದು ಕಂಡುಬರುತ್ತಿದೆ. ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುವ ಈ ಬಜೆಟ್ ಜಾರಿಯ ನಂತರವಷ್ಟೆ ಎಷ್ಟು ಸಾಮನ್ಯ ಜನರಿಗೆ ಪ್ರಯೋಜನಕಾರಿಯಾಗಲಿದೆ ಎಂಬುದು ತಿಳಿದುಬರಲಿದೆ.

ಬಿ.ಎಂ. ಭಟ್, ಕಾರ್ಮಿಕ ಮುಖಂಡರು.

ಕಾರ್ಮಿಕ ಪರವಾದ, ರೈತಪರವಾದ , ಜನಪರವಾದ ನಮ್ಮ ಬೇಡಿಕೆಗಳು ಬಜೆಟ್‌ನಲ್ಲಿ ಈಡೇರಿಲ್ಲ. ಜನರಿಗೆ ಪರೋಕ್ಷವಾಗಿ ಹೊರೆಯನ್ನೇರಲಾಗಿದೆ. ಅಂಗನವಾಡಿ,ಬಿಸಿಯೂಟ ನೌಕರರಿಗೆ ಈ ಹಿಂದೆ ಕೇಂದ್ರದಿಂದ ನೀಡಲಾದ ಅನುದಾನವನ್ನು ಕಡಿತ ಮಾಡಿರುವುದನ್ನು ನಿಡುವುದರ ಜೊತೆಗೆ ಹಲವು ಬೇಡಿಕೆಗಳನ್ನಿಡಲಾಗಿತ್ತು. ಆದರೆ ಕಳೆದ ಬಾರಿ ಕಡಿತ ಮಾಡಿರುವುದನ್ನೆ ೀ ಬಜೆಟ್‌ನಲ್ಲಿ ನೀಡಲಾಗಿಲ್ಲ. ಇದರಿಂದ ಅಂಗನವಾಡಿ, ಬಿಸಿಯೂಟ ನೌಕರರು ಕೇಂದ್ರದಿಂದ ಸದಿಗಬೇಕಿದ್ದ ಗೌರವ ಧನವನ್ನು ಪಡೆಯುವುದರಿಂದ ವಂಚಿತರಾಗಲಿದ್ದಾರೆ. ಈ ಬಜೆಟ್‌ನಿಂದ ಸ್ಕೀಮ್ ನೌಕರರು ಶೋಷನೆಗೊಳಗಾಗಲಿದ್ದಾರೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X