ಹಸನ್ ರೂಹಾನಿ ಮಿತ್ರರಿಗೆ ಪ್ರಚಂಡ ಜಯ
ಇರಾನ್ ಚುನಾವಣೆ
ದುಬೈ, ಫೆ.29: ಇರಾನ್‌ನ ಅಧ್ಯಕ್ಷ ಹಸನ್ ರೂಹಾನಿ ಹಾಗೂ ಅವರ ಮಿತ್ರ ಪಕ್ಷಗಳು ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿವೆ. ಇದು ಪರಮಾಣು ಕಾರ್ಯಕ್ರಮ ನಿಯಂತ್ರಣಕ್ಕೆ ಒಪ್ಪುವ ಮೂಲಕ ಅನೇಕ ವರ್ಷಗಳ ನಿಷೇಧದಿಂದ ಪಾರಾಗಿರುವ ಅವರ ಸರಕಾರವು ವಿಶ್ವದೊಂದಿಗೆ ತೊಡಗಿಕೊಳ್ಳುವುದನ್ನು ಹೆಚ್ಚಿಸಲಿದೆ.
ಸೋಮವಾರ ಪ್ರಕಟವಾದ ಚುನಾವಣಾ ಫಲಿತಾಂಶವು ಹಾಲಿ ಸರಕಾರಕ್ಕೆ ಭಾರೀ ಹೊಡೆತ ನೀಡಿದೆ.ಆದಾಗ್ಯೂ, ಇರಾನ್‌ನ ವಿದ್ವಾಂಸರ ಹಾಗೂ ರಿಪಬ್ಲಿಕನ್ನರ ಆಡಳಿತದ ಅವಳಿ ವ್ಯವಸ್ಥೆಯಿಂದಾಗಿ ಅದು ನಿರ್ಧಾರಾತ್ಮಕ ಅಧಿಕಾರವನ್ನು ಉಳಿಸಿಕೊಂಡಿದೆ.
ಹೊಸ ಸಂಸತ್ತಿಗೆ ಆಯ್ಕೆಯಾಗದಿರುವ, ಹೆಚ್ಚಿನ ಕಾನೂನು ನಿರ್ಮಾತೃಗಳು ಪರಮಾಣು ಒಪ್ಪಂದವನ್ನು ಪ್ರಬಲವಾಗಿ ವಿರೋಧಿಸಿದ್ದರು. ವಿದೇಶಾಂಗ ಸಚಿವ ಮುಹಮ್ಮದ್ ಜಾವೇದ್ ಝಾರಿಫ್‌ರನ್ನು ‘ದೇಶದ್ರೋಹಿ’ ಎಂದು ಕರೆದಿದ್ದ ಮೆಹ್ದಿ ಹಾಗೂ ಜಾಗತಿಕ ಶಕ್ತಿಗಳಿಗೆ ಮಣಿದ ಸಂಧಾನಕಾರರನ್ನು ಸಿಮೆಂಟ್‌ನಡಿ ಹೂಳುವ ಬೆದರಿಕೆ ಹಾಕಿದ್ದ ರೂಹುಲ್ಲಾಹ್ ಇವರಲ್ಲಿ ಸೇರಿದ್ದರು.
ಚುನಾವಣೆಯು ಇಸ್ಲಾಮಿಕ್ ಗಣರಾಜ್ಯದ ಚರಿತ್ರೆಯಲ್ಲಿ ಪರಿವರ್ತನೆಯ ಕಾಲವಾಗಬಹುದೆಂದು ಸುಧಾರಣಾವಾದಿಗಳ ವರ್ತಮಾನ ಪತ್ರಿಕೆ ‘ಮಾರ್ಡೊಂ-ಸಾಲರಿಯ ಸಂಪಾದಕೀಯವೊಂದು ಅಭಿಪ್ರಾಯಿಸಿದೆ. ಅದರ, ಪುರವಣಿ ಸಂಪಾದಕ ಮುಸ್ತಫಾ ಕವಕೆಬಿಯನ್ ಟೆಹ್ರಾನ್‌ನ ಸಂಸದೀಯ ಕ್ಷೇತ್ರವೊಂದನ್ನು ಗೆದ್ದಿದ್ದಾರೆಂದು ಆರಂಭಿಕ ಫಲಿತಾಂಶಗಳು ತಿಳಿಸಿವೆ.
ರೂಹಾನಿ ಹಾಗೂ ಮಿತ್ರರಾದ ಮಧ್ಯಮ ಮಾರ್ಗಿಗಳು ಹಾಗೂ ಸುಧಾರಣಾ ವಾದಿಗಳು ಪರಿಣತರ ಅಸೆಂಬ್ಲಿಯ ಟೆಹ್ರಾನ್‌ನ 16 ಸ್ಥಾನಗಳಲ್ಲಿ 15ನ್ನು ಗೆದ್ದಿದ್ದಾರೆಂದು ಟೆಹ್ರಾನ್‌ನ ಅಂತಿಮ ಫಲಿತಾಂಶ ತೋರಿಸಿದೆ. ಅವರು, ಬಲಶಾಲಿ ವಿದ್ವಾಂಸರ ಮಂಡಳಿಯ ಸ್ಪೀಕರ್ ಸಹಿತ ಇಬ್ಬರು ಪ್ರಭಾವೀ ಕನ್ಸರ್ವೇಟಿವ್‌ಗಳನ್ನು ಸೋಲಿಸಿದ್ದಾರೆ.





