ಅಮೆರಿಕ: ವಿಮಾನ ಅಪಘಾತ; ನಾಲ್ಕು ಸಾವು
ವಾಶಿಂಗ್ಟನ್, ಫೆ.29: ಅಮೆರಿಕದ ಟೆಕ್ಸಾಸ್ ಪ್ರಾಂತದ ಕಾಲೇಜ್ ಸ್ಟೇಶನ್‌ನ ಆಗ್ನೇಯದ ನವಸೊಟಾ ನಗರದಲ್ಲಿ ರವಿವಾರ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಇಬ್ಬರು ಮಕ್ಕಳು ಸಹಿತ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.
ಒಂಟಿ ಯಂತ್ರದ ಸೈರಸ್ ಎಸ್‌ಆರ್-20 ಎಂಬ ನಾಲ್ಕು ಆಸನಗಳ ವಿಮಾನ ನಗರದ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಿದ್ಧತೆ ನಡೆಸುತ್ತಿದ್ದಂತೆಯೇ ಸಮಯ ಬೆಳಗ್ಗೆ 10ಕ್ಕೆ ಮುನ್ನ ನೆಲಕ್ಕಪ್ಪಳಿಸಿತೆಂದು ರವಿವಾರ ಕ್ಸಿನುವಾ ಸ್ಥಳೀಯ ಟಿವಿ ಸ್ಟೇಟ್ ಎಬಿಸಿ 13ನ್ನು ಉಲ್ಲೇಖಿಸಿ ವರದಿ ಮಾಡಿದೆ.
Next Story





