ಸ್ಪಾಟ್ಲೈಟ್ಗೆ ಆಸ್ಕರ್ ಗರಿ

ಆರ್ಮಿ’ ಚಿತ್ರಕ್ಕಾಗಿ ಅತ್ಯುತ್ತಮ ಸಾಕ್ಷಚಿತ್ರ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡ ಜೇಮ್ಸ್ ಗೇ-ರೀಸ್ ಮತ್ತು ಆಸಿಫ್ ಕಪಾಡಿಯಾ ಅವರು ಪ್ರೆಸ್ ರೂಮಿನಲ್ಲಿ ಛಾಯಾಗ್ರಾಹಕರಿಗೆ ನೀಡಿರುವ ಭಂಗಿ.
*ಲಿಯೊನಾರ್ಡೊ ಡಿಕಾಪ್ರಿಯೋ ಅತ್ಯುತ್ತಮ ನಟ
*ಬ್ರೀ ಲಾರ್ಸನ್ ಅತ್ಯುತ್ತಮ ನಟಿ
*ಅಲೆಜಾಂಡ್ರೋ ಅತ್ಯುತ್ತಮ ನಿರ್ದೇಶಕ
ಏಂಜಲೀಸ್, ಫೆ.29: ಈ ಬಾರಿಯ ಆಸ್ಕರ್ ಪ್ರಶಸ್ತಿಯನ್ನು, ಅತ್ಯಂತ ವಿವಾದಾತ್ಮಕ ಚಿತ್ರವಾಗಿ ಗುರುತಿಸಲ್ಪಟ್ಟ ‘ಸ್ಟಾಟ್ಲೈಟ್’ ತನ್ನದಾಗಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಅತ್ಯುತ್ತಮ ನಟನಾಗಿ ‘ದಿ ರೆವೆನೆಂಟ್’ ಚಿತ್ರಕ್ಕಾಗಿ ಲಿಯೊನಾರ್ಡೋ ಡಿಕಾಪ್ರಿಯೋ ಆಯ್ಕೆಯಾಗಿದ್ದಾರೆ. ದಿ ರೆವೆನೆಂಟ್ ಚಿತ್ರದ ಪಾತ್ರಕ್ಕಾಗಿ ಡಿಕಾಪ್ರಿಯೋ ಅವರು ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಬಗ್ಗೆ ಈಗಾಗಲೇ ಚಿತ್ರ ವಿಮರ್ಶಕರು ಭವಿಷ್ಯ ನುಡಿದಿದ್ದರು. ಅತ್ಯುತ್ತಮ ನಟಿಯಾಗಿ ‘ರೂಂ’ ಚಿತ್ರಕ್ಕಾಗಿ ಬ್ರೀ ಲಾರ್ಸನ್ ಪಡೆದುಕೊಂಡಿದ್ದಾರೆ. ‘ದಿ ರೆವೆನೆಂಟ್’ ಚಿತ್ರ ನಿರ್ದೇಶಕ ಅಲೆ ಜಾಂಡ್ರೋ ಅತ್ಯುತ್ತಮ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಆಸ್ಕರ್ ಪ್ರಶಸ್ತಿಗಳ ಸಂಪೂರ್ಣ ವಿವರ ಇಲ್ಲಿದೆ.
ಅತ್ಯುತ್ತಮ ಚಿತ್ರ: ಸ್ಪಾಟ್ ಲೈಟ್
ಮುಖ್ಯಪಾತ್ರದಲ್ಲಿ ಅತ್ಯುತ್ತಮ ನಟ:
‘ದಿ ರೆವೆನೆಂಟ್’ ಚಿತ್ರದಲ್ಲಿ ಲಿಯೊನಾರ್ಡೊ ಡಿ‘ಕಾಪ್ರಿಯೊ, ಮುಖ್ಯಪಾತ್ರದಲ್ಲಿ ಅತ್ಯುತ್ತಮ ನಟಿ: ‘ರೂಂ’ ಚಿತ್ರದಲ್ಲಿ ಬ್ರೀ ಲಾರ್ಸನ್, ಅತ್ಯುತ್ತಮ ನಿರ್ದೇಶನ: ಅಲೆ ಜಾಂಡ್ರೊ .ಜ. ಇನಾರಿಟು. ಚಿತ್ರ: ದಿ ರೆವೆನೆಂಟ್, ಅತ್ಯುತ್ತಮ ಮೂಲ ಚಿತ್ರಕತೆ: ಟೋರಿ ಮಕಾರ್ತಿ ಹಾಗೂ ಜೋಶ್ ಸಿಂಗರ್. ಚಿತ್ರ: ಸ್ಪಾಟ್ ಲೈಟ್, ಅತ್ಯುತ್ತಮ ಅಳವಡಿಕೆ, ಚಿತ್ರಕತೆ: ಚಾರ್ಲ್ಸ್ ರಾಂಡೋಲ್ಫ್ ಹಾಗೂ ಆ್ಯಡಂ ಮೆಕೆ. ಚಿತ್ರ: ದಿ ಬಿಗ್ ಶಾರ್ಟ್. ಅತ್ಯುತ್ತಮ ಪೋಷಕ ನಟಿ: ಅಲಿಸಿಯಾ ವಿಕಾಂಡರ್. ಚಿತ್ರ: ದಿ ಡ್ಯಾನಿಶ್ ಗರ್ಲ್, ಅತ್ಯುತ್ತಮ ವಸ್ತ್ರ ವಿನ್ಯಾಸ: ಜೆರ್ರಿ ಬೀವನ್. ಚಿತ್ರ: ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್. ಅತ್ಯುತ್ತಮ ನಿರ್ಮಾಣ ವಿನ್ಯಾಸ: ಕಾಲಿನ್ ಗಿಬ್ಸನ್ ಹಾಗೂ ಲೀಸಾ ಥಾಮ್ಸನ್. ಚಿತ್ರ: ಮ್ಯಾಡ್ ಮ್ಯಾಕ್ಸ್: ಪ್ಯೂರಿ ರೋಡ್ ಅತ್ಯುತ್ತಮ ಪ್ರಸಾದನ: ಕೇಶವಿನ್ಯಾಸ: ಲೆಸ್ಲಿ ವಂಡರ್ವಾವಲ್ಟ್, ವೆನಿಶಿಯೊ ಡೆಲ್ ಟೋರೊ ಹಾಗೂ ಜೆನಿಫರ್ ಗಾರ್ನರ್. ಚಿತ್ರ: ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್.
ಅತ್ಯುತ್ತಮ ಸಿನೆಮಾಟೋಗ್ರಫಿ:
ಇಮಾನ್ಯುವೆಲ್ ಲುಬೆಝ್ಕಿ, ಚಿತ್ರ: ದಿ ರೆವೆನೆಂಟ್, ಅತ್ಯುತ್ತಮ ಚಿತ್ರ ಸಂಕಲನ: ಮಾರ್ಗರೆಟ್ ಸಿಕ್ಸೆಲ್. ಚಿತ್ರ: ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್. ಅತ್ಯುತ್ತಮ ಧ್ವನಿ ಸಂಕಲನ: ಮಾರ್ಕ್ ಮ್ಯಾಂಜಿನಿ ಹಾಗೂ ಡೇವಿಡ್ ವೈಟ್. ಚಿತ್ರ: ಮ್ಯಾಡ್ ಮ್ಯಾಕ್ಸ್:ಫ್ಯೂರಿ ರೋಡ್. ಅತ್ಯುತ್ತಮ ಧ್ವನಿ ಸಂಯೋಜನೆ: ಕ್ರಿಸ್ ಜೆಂಕಿನ್ಸ್, ಗ್ರೆಗ್ ರುಡಾಲ್ಫ್ ಹಾಗೂ ಬೆನ್ ಓಸ್ಮೊ. ಚಿತ್ರ: ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್. ಅತ್ಯುತ್ತಮ ದೃಶ್ಯ ಪರಿಣಾಮ: ಆಂಡ್ರೂ ವೈಟ್ ಹರ್ಸ್ಟ್, ಪೌಲ್ ನೋರಿಸ್, ಮಾರ್ಕ್ ಆರ್ಡಿಂಗ್ಟನ್ ಹಾಗೂ ಸಾರಾ ಬೆನ್ಮೆಟ್. ಚಿತ್ರ: ಎಕ್ಸ್ ಮೆಶಿನಾ
ಅತ್ಯುತ್ತಮ ಕಿರುಚಿತ್ರ (ಅನಿಮೇಟೆಡ್): ಗಾಬ್ರಿಯಲ್ ಒಸೋರಿಯೊ ಹಾಗೂ ಪಾಟೊ ಎಸ್ಕಲ. ಚಿತ್ರ: ಬೇರ್ ಸ್ಟೋರಿ
ಅತ್ಯುತ್ತಮ ಅನಿಮೇಟೆಡ್ ಕಥಾ ಚಿತ್ರ: ಪೀಟರ್ ಡಾಕ್ಟರ್ ಹಾಗೂ ಜೋನಾಸ್ ರಿವೇರಾ. ಚಿತ್ರ: ಇನ್ಸೈಡ್ ಔಟ್
ಅತ್ಯುತ್ತಮ ಪೋಷಕ ನಟ: ಮಾರ್ಕ್ ರೈಲಾನ್ಸ್. ಚಿತ್ರ: ಬ್ರಿಜಸ್ ಆಫ್ ಸ್ಪೈಸ್
ಅತ್ಯುತ್ತಮ ಸಾಕ್ಷ ಚಿತ್ರ (ಕಿರು ಚಿತ್ರ): ಶರ್ಮಿನ್ ಉಬೈದ್ ಚಿನಾಯ್. ಚಿತ್ರ: ಎಗರ್ಲ್ ಇನ್ದಿ ರಿವರ್: ದಿ ಪ್ರೈಸ್ ಆಫ್ ಫರ್ಗೀವ್ನೆಸ್.
ಅತ್ಯುತ್ತಮ ಸಾಕ್ಷ ಚಿತ್ರ (ಕಥಾ ಚಿತ್ರ): ಆಸಿಫ್ ಕಪಾಡಿಯಾ ಹಾಗೂ ಜೀಮ್ಸ್ ಗೇ ರೀಸ್. ಚಿತ್ರ: ಆರ್ಮಿ.
ಅತ್ಯುತ್ತಮ ಕಿರು ಚಿತ್ರ (ಲೈವ್ ಆ್ಯಕ್ಷನ್): ಬೆಂಜಮಿನ್ ಕ್ಲಿಯರಿ ಹಾಗೂ ಸೆರೆನಾ ಆರ್ಮಿಟೇಜ್. ಚಿತ್ರ: ಸ್ಟಟ್ಟರರ್ ಅತ್ಯುತ್ತಮ ವಿದೇಶೀ ಭಾಷಾ ಚಿತ್ರ: ಹಂಗೇರಿ: ಚಿತ್ರ: ಸನ್ ಆಫ್ ಸಾವುಲ್, ನಿರ್ದೇಶನ: ಲಾಸ್ಝ್ ಲೊ ನೆಮೆಸ್ ಅತ್ಯುತ್ತಮ ಸಂಗೀತ (ಮೂಲ): ಎನ್ನಿಯೊ ಮೊರ್ರಿಕಾನ್ ಚಿತ್ರ: ದಿ ಹೇಟ್ಫುಲ್ ಏಯ್ಟಿ
ಅತ್ಯುತ್ತಮ ಸಂಗೀತ (ಮೂಲ ಹಾಡು): ಜಿಮ್ಮಿ ನೇಪ್ಸ್ ಹಾಗೂ ಸ್ಯಾಮ್ ಸ್ಮಿತ್. ಸ್ಪೆಕ್ಟರ್ ಚಿತ್ರದ ‘ರೈಟಿಂಗ್ ಆನ್ ಎ ವಾಲ್’ ಗೀತೆ.
ಈ ಬಾರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕಾ ಛೋಪ್ರಾ ಅವರು ಭಾಗಿಯಾಗುವ ಅವಕಾಶವನ್ನು ಪಡೆದುಕೊಂಡಿರುವುದು ವಿಶೇಷವಾಗಿತ್ತು.







