ಐಟಿ ದೂರುಗಳ ನಿರ್ವಹಣೆಗೆ ವಿಶೇಷ ದಳ ರಚನೆ

ಹೊಸದಿಲ್ಲಿ,ಫೆ.29:ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹಾಗೂ ತೆರಿಗೆ ಮರುಪಾವತಿಯಲ್ಲಿ ಉಂಟಾಗುವ ವಿಳಂಬಕ್ಕೆ ಸಂಬಂಧಿಸಿ ತೆರಿಗೆಪಾವತಿದಾರರ ಅಹವಾಲುಗಳು ಹಾಗೂ ದೂರುಗಳನ್ನು ನಿಭಾಯಿಸುವುದಕ್ಕಾಗಿ ನೂತನ ದಳವೊಂದನ್ನು ರಚಿಸಲಾಗುವುದು. ಈ ದಳಕ್ಕೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ)ಯೆಂದು ಹೆಸರಿಡಲಾಗಿದೆ.
ಈ ಸಂಬಂಧವಾಗಿ ಸಿಬಿಡಿಟಿ ಸದಸ್ಯ (ಕಂದಾಯ) ಹುದ್ದೆಯನ್ನು ಕಂದಾಯ ಹಾಗೂ ತೆರಿಗೆ ಪಾವತಿ ಸೇವೆಗಳ ಸದಸ್ಯನೆಂಬುದಾಗಿ ಹಾಗೂ ಆದಾಯ ತೆರಿಗೆ ಇಲಾಖೆಯ ಮಹಾನಿರ್ದೇಶಕ (ಆಡಳಿತ) ಹುದ್ದೆಯನ್ನು ಆಡಳಿತ ಹಾಗೂ ತೆರಿಗೆ ಪಾವತಿ ಸೇವೆಗ ಮಹಾನಿರ್ದೇಶಕನೆಂಬುದಾಗಿ ಪುನಾರಚಿಸಲಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್), ಮರುಪಾವತಿ, ಬೇಡಿಕೆ ದೃಢೀಕರಣ (ಡಿಮಾಂಡ್ ವೆರಿಫಿಕೇಶನ್) ಪಾನ್ ಖಾತೆ ಸಂಖ್ಯೆಗಳಿಗೆ ಸಂಬಂಧಿಸಿ ತೆರಿಗೆಪಾವತಿದಾರರು ನೀಡುವ ದೂರುಗಳನ್ನು ನಿಭಾಯಿಸಲು ಬೆಂಗಳೂರಿನಲ್ಲಿ ಪರಿಷ್ಕರಣೆ ಕೇಂದ್ರವನ್ನು ತೆರೆಯಲಾಗುವುದು ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
Next Story





