Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇದು ಜೇಟ್ಲಿ ಅಲ್ಲ, ಮೋದಿ ಬಜೆಟ್....

ಇದು ಜೇಟ್ಲಿ ಅಲ್ಲ, ಮೋದಿ ಬಜೆಟ್. ಏಕೆಂದರೆ...

ವಾರ್ತಾಭಾರತಿವಾರ್ತಾಭಾರತಿ29 Feb 2016 11:39 PM IST
share
ಇದು ಜೇಟ್ಲಿ ಅಲ್ಲ, ಮೋದಿ ಬಜೆಟ್. ಏಕೆಂದರೆ...

-ದಿನೇಶ್ ಉಣ್ಣಿಕೃಷ್ಣನ್                                                                                               ಕೇಂದ್ರದ 2016-17ನೆ ಸಾಲಿನ ಮುಂಗಡಪತ್ರದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಬದಲಾಗಿ ಪ್ರಧಾನಿ ನರೇಂದ್ರ ಮೋದಿಯವರ ಛಾಪು ಬಲವಾಗಿ ಕಂಡುಬರುತ್ತದೆ. ಇದು ದೇಶದ ಗ್ರಾಮೀಣ ಜನರನ್ನು ಮತ್ತು ಸಣ್ಣ ಉದ್ದಿಮೆದಾರರನ್ನು ಉತ್ತೇಜಿಸುವ ಹಲವು ಸಣ್ಣ ಹೆಜ್ಜೆಗಳನ್ನೊಳಗೊಂಡ ನೀಲಿನಕ್ಷೆಯಾಗಿದೆ. ಆದರೆ ಸುಧಾರಣಾ ಪ್ರಕ್ರಿಯೆಯನ್ನು ಮುಂದುವರಿಸುವ ಹಾಗೂ ಮೂಲಸೌಕರ್ಯ ವೆಚ್ಚವನ್ನು ಅಧಿಕಗೊಳಿಸುವ ಮೂಲಕ ಆರ್ಥಿಕತೆಯನ್ನು ಉನ್ನತ ಪ್ರಗತಿಪಥದತ್ತ ಮೇಲೆತ್ತುವ ಎನ್‌ಡಿಎ ಸರಕಾರದ ದೊಡ್ಡ ಸವಾಲನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ.

ಈ ಬಜೆಟ್ ಜೇಟ್ಲಿಗೆ ಅಗ್ನಿಪರೀಕ್ಷೆ. ವಿತ್ತೀಯ ಕ್ರೋಡೀಕರಣ ಹಾಗೂ ಆರ್ಥಿಕತೆಯ ಪುನಶ್ಚೇತನಕ್ಕೆ ಅತ್ಯಗತ್ಯವಾದ ವೆಚ್ಚದ ನಡುವೆ ಸಮತೋಲನ ತರುವ ಕಸರತ್ತು. ಅದರಲ್ಲೂ, ಹೂಡಿಕೆದಾರರ ಹತಾಶೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆರ್ಥಿಕತೆಗೆ ಪುನಶ್ಚೇತನ ನೀಡುವ ಮೋದಿ ಕನಸಿಗೆ ಅಪಾಯ ಒದಗಿರುವ ಹಿನ್ನೆಲೆಯಲ್ಲಿ ಈ ಬಜೆಟ್ ನಿಜವಾದ ಪರೀಕ್ಷೆ ಎನಿಸಿಕೊಂಡಿತ್ತು. ಜೇಟ್ಲಿ ವಿತ್ತೀಯ ಕ್ರೋಡೀಕರಣ ಪಥಕ್ಕೆ ಅಂಟಿಕೊಂಡಿದ್ದಾರೆ. ಆದರೆ ಮೂಲಸೌಕರ್ಯ ಪ್ರಗತಿಗೆ ಸಾಕಷ್ಟು ಅನುದಾನ ಒದಗಿಸಲು ಹಾಗೂ ಬ್ಯಾಂಕಿಂಗ್ ವಲಯದ ಸಮಸ್ಯೆಗಳಿಗೆ ಉತ್ತರ ನೀಡುವಲ್ಲಿ ವಿಪಲರಾಗಿದ್ದಾರೆ.

 ಗ್ರಾಮೀಣ ಒತ್ತು:                                                                                                       ಬಜೆಟ್‌ನ ಪ್ರಮುಖ ಅಂಶವೆಂದರೆ ಕೃಷಿ ಕ್ಷೇತ್ರಕ್ಕೆ ಹಾಗೂ ಗ್ರಾಮೀಣ ಭಾರತಕ್ಕೆ ವಿಶೇಷ ಒತ್ತು ನೀಡಿರುವುದು. ಗ್ರಾಮೀಣಾಭಿವೃದ್ಧಿಗೆ ಒಟ್ಟು 87,765 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದು, ಕಳೆದ ಹಣಕಾಸು ವರ್ಷದಲ್ಲಿ ಇದು 79,526 ಕೋಟಿ ರೂ. ಆಗಿತ್ತು. ಇದರ ಜತೆಗೆ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಪಡೆಯಲು ಸಬ್ಸಿಡಿ ನೀಡುವ ಯೋಜನೆಯನ್ನೂ ಪ್ರಕಟಿಸಿದ್ದು, 2020ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹಾಕಿಕೊಂಡಿದೆ ಎಂದು ವಿವರಿಸಿದ್ದಾರೆ. 2,000 ಕೋಟಿ ರೂ.ಗಳನ್ನು ಎಲ್‌ಪಿಜಿ ಸಂಪರ್ಕ ಯೋಜನೆಗೆ ನೀಡಿದ್ದರೆ, ಕೃಷಿ ವಲಯಕ್ಕೆ 35,984 ಕೋಟಿ ರೂ. ಹಾಗೂ ನೀರಾವರಿಗೆ ಮುಂದಿನ ಐದು ವರ್ಷಗಳಿಗೆ 86,500 ಕೋಟಿ ರೂ. ಹಾಗೂ ಕೃಷಿ ಸಾಲಗಳ ಬಡ್ಡಿ ಕಡಿತಕ್ಕೆ 15 ಸಾವಿರ ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಬೆಳೆವಿಮೆ ಯೋಜ ನೆಗೆ 5,500 ಕೋಟಿ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ 38,500 ಕೋಟಿ ರೂ. ಅನುದಾನ ನೀಡಿದ್ದು, ಇದು ಕಳೆದ ವರ್ಷದ ಪ್ರಮಾಣವಾದ 34,699 ಕೋಟಿಗಿಂತ ಅಧಿಕ. 2018ರ ಮೇ 1ನೆ ತಾರೀಕಿನ ಒಳಗಾಗಿ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಗುರಿ ಹಾಕಿಕೊಂಡು ಗ್ರಾಮೀಣ ವಿದ್ಯುದ್ದೀಕರಣಕ್ಕೆ 8,500 ಕೋಟಿ ರೂ. ಒದಗಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಕೃಷಿ ಸಾಲದ ಗುರಿ ಹಿಂದಿನ ವರ್ಷ ಇದ್ದ 8.5 ಲಕ್ಷ ಕೋಟಿ ರೂ.ಗಳಿಂದ 9 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿದೆ.

ವಿತ್ತೀಯ ಕೊರತೆ ಗುರಿ:
2017ನೆ ಹಣಕಾಸು ವರ್ಷಕ್ಕೆ ಜೇಟ್ಲಿ, ವಿತ್ತೀಯ ಕೊರತೆ ಪ್ರಮಾಣವನ್ನು ದೇಶದ ಒಟ್ಟು ಜಿಡಿಪಿಯ ಶೇ.3.5ಕ್ಕೆ ಇಳಿಸುವ ಗುರಿ ಹಾಕಿಕೊಂಡಿದ್ದಾರೆ. 2016ನೆ ಸಾಲಿನ ವಿತ್ತೀಯ ಕೊರತೆ ಪ್ರಮಾಣವನ್ನು ಶೇ.3.5ರ ಮಟ್ಟದಲ್ಲೇ ನಿರ್ವಹಿಸಲು ನಿರ್ಧರಿಸಿದ್ದಾರೆ. ಈ ಸುದ್ದಿ ಬಹುಶಃ ರೇಟಿಂಗ್ ಏಜೆನ್ಸಿಗಳಿಗೆ, ಹೂಡಿಕೆದಾರರಿಗೆ ಹಾಗೂ ಭಾರತೀಯ ರಿಸರ್ವ್‌ಬ್ಯಾಂಕಿಗೆ ಸಂತಸ ತಂದಿರಬಹುದು. ಏಕೆಂದರೆ ಸರಕಾರದ ಮೇಲೆ ವಿತ್ತೀಯ ಕ್ರೋಡಿಕರಣದ ಮಾರ್ಗನಕ್ಷೆ ಬಗ್ಗೆ ವ್ಯಾಪಕ ಒತ್ತಡ ಇತ್ತು. (ಇದರ ಅನ್ವಯ 2016ನೆ ಸಾಲಿನ ವಿತ್ತೀಯ ಕೊರತೆಯನ್ನು 3.9ರ ಮಟ್ಟದಲ್ಲೇ ನಿರ್ವಹಿಸಬೇಕು ಹಾಗೂ 2016-17ನೆ ಸಾಲಿಗೆ 3.5 ಶೇ.ಹಾಗೂ 2017-18ನೆ ಸಾಳಿಗೆ ಶೇ.3ರಷ್ಟಕ್ಕೆ ಸೀಮಿತಗೊಳಿಸುವ ಗುರಿ ಹಾಕಿಕೊಳ್ಳುವಂತೆ ಒತ್ತಡ ಇತ್ತು). ಆದರೆ ಜೇಟ್ಲಿ, ವೆಚ್ಚದ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ ಎಂದು ಭರವಸೆ ನೀಡಿದ್ದಾರೆ. 2016ರ ಹಣಕಾಸು ವರ್ಷದಲ್ಲಿದ್ದ 17.77 ಲಕ್ಷ ಕೋಟಿ ರೂ.ಗಳ ವೆಚ್ಚದ ಬದಲಾಗಿ 2017ನೆ ಹಣಕಾಸು ವರ್ಷದಲ್ಲಿ 19.78 ಕೋಟಿ ರೂ. ವೆಚ್ಚ ಮಾಡುವ ಗುರಿ ಹಾಕಿಕೊಂಡಿದ್ದಾರೆ. ಈ ಉದ್ದೇಶಕ್ಕಾಗಿ ಯೋಜನಾ ವೆಚ್ಚವನ್ನು ಶೇ.15ರಷ್ಟು ಹೆಚ್ಚಿಸಿ 5.5 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಯೋಜನೇತರ ವೆಚ್ಚ ಕೂಡಾ ಶೇ.9ರಷ್ಟು ಹೆಚ್ಚಿ 14.28 ಲಕ್ಷ ಕೋಟಿ ರೂ. ಆಗಲಿದೆ.

ಮೂಲಸೌಕರ್ಯ ವೆಚ್ಚ:
ಆದರೆ ಸರಕಾರ ಮೂಲಸೌಕರ್ಯ ವೆಚ್ಚದಲ್ಲಿ ಕಡಿತ ಮಾಡಿದೆ. 2017ನೆ ಹಣಕಾಸು ವರ್ಷದಲ್ಲಿ ಮೂಲಸೌಕರ್ಯ ವಲಯಕ್ಕೆ ನಿಗದಿಪಡಿಸಿರುವ ಅನುದಾನ 2.21 ಲಕ್ಷ ಕೋಟಿ ರೂ.. ಇದು ಕಳೆದ ವರ್ಷದ ವೆಚ್ಚವಾದ 2.51 ಲಕ್ಷ ಕೋಟಿಗಿಂತ ಶೇ.12ರಷ್ಟು ಕಡಿಮೆ. ಒಟ್ಟು ಮೂಲಸೌಕರ್ಯ ನಿಧಿಯಲ್ಲಿ 55 ಸಾವಿರ ಕೋಟಿ ರೂ.ಗಳನ್ನು ರಸ್ತೆ ಮತ್ತು ರೈಲ್ವೆ ಯೋಜನೆಗಳಿಗೆ ಹಂಚಿಕೆ ಮಾಡಿದ್ದಾರೆ. ಇದರ ಜತೆಗೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 15 ಸಾವಿರ ಕೋಟಿ ರೂ.ಗಳನ್ನು ಬಾಂಡ್ ರೂಪದಲ್ಲಿ ಸಂಗ್ರಹಿಸಲಿದೆ. 2016-17ನೆ ಸಾಲಿನಲ್ಲಿ ರಸ್ತೆ ಹಾಗೂ ರೈಲ್ವೆಗೆ ಒಟ್ಟು ಹಂಚಿಕೆ 2.18 ಲಕ್ಷ ಕೋಟಿ. ಆರ್ಥಿಕ ಪ್ರಗತಿಯ ಇಂಜಿನ್ ಎಲ್ಲೂ ವಿಫಲವಾಗದಂತೆ ನೋಡಿಕೊಳ್ಳುವುದು ಜೇಟ್ಲಿಯವರ ಪಾಲಿಗೆ ದೊಡ್ಡ ಸವಾಲು. ಈ ಬಾರಿ ಮೂಲಸೌಕರ್ಯ ವೆಚ್ಚದ ಹೆಚ್ಚಳ ಸುಮಾರು 30 ಸಾವಿರ ಕೋಟಿ ಆಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 70 ಸಾವಿರ ಕೋಟಿ ರೂ. ಹೆಚ್ಚಳ ಮಾಡಲಾಗಿತ್ತು. ಈ ಕಾರಣದಿಂದ ಆರ್ಥಿಕ ಪ್ರಗತಿಗೆ ಇದು ಉತ್ತೇಜಕವಾಗಿದೆ. ಆದರೆ ಈ ವಿಭಾಗದಲ್ಲಿ ಖಾಸಗಿ ವಲಯದ ಹೂಡಿಕೆ ಚಕ್ರಕ್ಕೆ ಇನ್ನೂ ಚಾಲನೆ ದೊರಕಿಲ್ಲ. ಬಜೆಟ್ ಪೂರ್ವಭಾವಿಯಾಗಿ ಶುಕ್ರವಾರ ಪ್ರಕಟಿಸಲಾದ ಆರ್ಥಿಕ ಸಮೀಕ್ಷೆ ವರದಿಯಲ್ಲಿ, ಜೇಟ್ಲಿಯವರ ಮೊದಲ ಆದ್ಯತೆ ಪ್ರಗತಿ ವೇಗವನ್ನು ಉಳಿಸಿಕೊಂಡು ಹೋಗುವುದು ಎಂದು ಸ್ಪಷ್ಟಪಡಿಸಲಾಗಿತ್ತು. ಏಕೆಂದರೆ ಪ್ರಸ್ತುತ ವಾತಾವರಣ ಹಲವು ಅಪಾಯಗಳಿಂದ ಕೂಡಿದ್ದು, ಇದು ಭಾರತದ ಪ್ರಗತಿಯ ಇಂಜಿನ್‌ಗಳಿಗೆ ಎಚ್ಚರಿಕೆಯಾಗಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಹೇಳಿತ್ತು.

ಬ್ಯಾಂಕಿಂಗ್ ವಲಯಕ್ಕೆ ಬೆನ್ನು:
ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 2017ನೆ ಹಣಕಾಸು ವರ್ಷದಲ್ಲಿ 25 ಸಾವಿರ ಕೋಟಿ ರೂ. ಪೂರಣ ಮಾಡುವ ನಿರ್ಧಾರವನ್ನು ಜೇಟ್ಲಿ ಪ್ರಕಟಿಸಿದ್ದಾರೆ. ಐದು ವರ್ಷಗಳಲ್ಲಿ 70 ಸಾವಿರ ಕೋಟಿ ರೂ. ಪೂರಣ ಮಾಡುವ ಸಾಧ್ಯತೆಯ ಬಗ್ಗೆ ಕಳೆದ ವರ್ಷ ಮಾಡಿದ ಘೋಷಣೆಗೆ ಅನುಗುಣವಾಗಿ ಈ ಹಣ ಹಂಚಿಕೆ ಮಾಡಲಾಗಿದೆ. ಇದರ ಜತೆಗೆ ಐಡಿಬಿಐ ಬ್ಯಾಂಕಿನಲ್ಲಿನ ತನ್ನ ಪಾಲನ್ನು ಶೇ.51ಕ್ಕಿಂತ ಕಡಿಮೆ ಮಡುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುವುದು ಎಂದೂ ಜೇಟ್ಲಿ ಹೇಳಿದ್ದಾರೆ. ಆದರೆ ಬ್ಯಾಂಕಿಂಗ್ ವಲಯದ ತೀರಾ ಒತ್ತಡಪೂರ್ವಕ ಆಸ್ತಿ ಪರಿಸ್ಥಿತಿ ಹಿನ್ನೆಲೆಯಲ್ಲಿ, ಹಣಕಾಸು ವಲಯ ಇನ್ನೂ ಹೆಚ್ಚಿನ ನಿರೀಕ್ಷೆ ಮಾಡಿತ್ತು. ಇದು ಬ್ಯಾಂಕ್‌ಗಳ ಷೇರುಗಳ ಕುಸಿತದಲ್ಲಿ ಪ್ರತಿಫಲನಗೊಂಡಿತ್ತು.
ಇಲ್ಲಿ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಹಣಕಾಸು ಸಚಿವರಾಗಿ ಜೇಟ್ಲಿ,ಭಾರತದ 95 ದಶಸಹಸ್ರ ಕೋಟಿ ವೌಲ್ಯದ ಬ್ಯಾಂಕಿಂಗ್ ಉದ್ಯಮದ ಸಮಸ್ಯೆ ಗಳ ಹೆಚ್ಚಳಕ್ಕೆ ಮೂಲ ಕಾರಣ ಹುಡುಕುವಲ್ಲಿ ವಿಫಲರಾಗಿದ್ದಾರೆ. ಎನ್‌ಡಿಎ ಸರಕಾರದ ಆರಂಭಿಕ ಅವಧಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಬಂಡವಾಳ ಅಗತ್ಯತೆಯನ್ನು ಕೀಳಂದಾಜು ಮಾಡಿ, ಕೇವಲ 11200 ಕೋಟಿ ರೂ. ಹಂಚಿಕೆ ಮಾಡಿದ್ದರು. ಇದರ ಜತೆಗೆ ಸಣ್ಣ ಬ್ಯಾಂಕ್‌ಗಳ ವಿಲೀನ ಹಾಗೂ ಖಾಸಗಿ ಬಂಡವಾಳವನ್ನು ಆಕರ್ಷಿಸುವಂಥ ಕ್ರಾಂತಿಕಾರಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ನಿರಾಕರಿಸಿದರು. ಈ ನೀತಿಯಿಂದಾಗಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಸಂಕಷ್ಟದಿಂದ ಹೊರಬರಲು ಸಾಧ್ಯವಾಗಲಿಲ್ಲ. ತಡವಾಗಿ ಈ ಕ್ಷೇತ್ರದ ಅಗತ್ಯತೆಯನ್ನು ಮನವರಿಕೆ ಮಾಡಿಕೊಂಡ ಸಚಿವರು ದೊಡ್ಡ ಮೊತ್ತದ ಪೂರಣದ ಆಶ್ವಾಸನೆ ನೀಡಿದರು. ಆದರೆ ಅದು ಕೂಡಾ ತೀರಾ ವಿಳಂಬ ಹಾಗೂ ತೀರಾ ಕಡಿಮೆ. ಭಾರತದ ಬ್ಯಾಂಕಿಂಗ್ ಉದ್ಯಮದ ಶೇ.70ರಷ್ಟು ಸರಕಾರಿ ಹಿಡಿತದಲ್ಲಿದ್ದು, ವಸೂಲಾಗದ ಸಾಲದ ಪ್ರಮಾಣ ಕಳೆದ ಡಿಸೆಂಬರ್ ವೇಳೆಗೆ ನಾಲ್ಕು ಲಕ್ಷ ಕೋಟಿ ರೂ.ಯಷ್ಟಿದೆ. ನಿರೀಕ್ಷಿತ ಆರ್ಥಿಕ ಪುನಶ್ಚೇತನವಾಗದಿದ್ದರೆ ಇದು ಪುನರ್ ನಿರ್ಮಿತ ಸಾಲ ವಲಯದಿಂದ ಇನ್ನಷ್ಟು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪುನಶ್ಚೇತನಕ್ಕೆ ಕಳೆದ ವರ್ಷ ಜೇಟ್ಲಿ ಘೋಷಿಸಿದ್ದ ಇಂದ್ರಧನುಷ್ ಯೋಜನೆ, ಈ ಬ್ಯಾಂಕುಗಳನ್ನು ಸುರಕ್ಷಿತ ಪಥದತ್ತ ಒಯ್ಯಲು ಸಾಧ್ಯವಾಗಿಲ್ಲ.

ಹಣಕಾಸು ಕ್ಷೇತ್ರ ಸುಧಾರಣೆ:
ಜೇಟ್ಲಿ ದೊಡ್ಡ ಸುಧಾರಣೆ ಆಶ್ವಾಸನೆಯನ್ನು ಪುನರುಚ್ಚರಿಸಿದ್ದು, ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ. ಪರಿಣಾಮಕಾರಿ ಯಾದ ದಿವಾಳಿ ಸಂಹಿತೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮುಂದುವರಿ ಯುವುದಾಗಿ ಹೇಳಿದ್ದಾರೆ. ಆದರೆ ಬಹುನಿರೀಕ್ಷಿತ ಸರಕು ಮತ್ತು ಸೇವಾ ಕಾನೂನಿಗೆ ಸಂಬಂಧಿಸಿದಂತೆ ಯಾವ ನಿರ್ದಿಷ್ಟ ಮಾರ್ಗನಕ್ಷೆಯೂ ಇಲ್ಲ.
ದೊಡ್ಡಮಟ್ಟದ ಸುಧಾರಣೆಗಳ ಮೂಲಕ ಆರ್ಥಿಕ ಪ್ರಗತಿ ಸಾಧಿಸುವುದು 2014ರ ಲೋಕಸಭಾ ಚುನಾವಣೆಯ ವೇಳೆ ಮೋದಿ ಪ್ರಚಾರದ ಟ್ರಂಪ್ ಕಾರ್ಡ್ ಆಗಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಇದನ್ನು ಹಲವು ಸಣ್ಣ ಮಟ್ಟದ ಸುಧಾರಣೆಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ವಿಮಾ ಮಸೂದೆ, ಹಲವು ವಲಯಗಳನ್ನು ವಿದೇಶಿ ನೇರ ಹೂಡಿಕೆಗೆ ಮುಕ್ತಗೊಳಿಸಿದ್ದು, ವಿತ್ತೀಯ ಸೇರ್ಪಡೆ ಪ್ರಯತ್ನವಾಗಿ ಜನಧನ್, ಆಧಾರ್ ಹಾಗೂ ಮೊಬೈಲ್ ಜಾರಿ ಹಾಗೂ ಸಬ್ಸಿಡಿಯನ್ನು ಹೆಚ್ಚು ತಾರ್ಕಿಕಗೊಳಿಸುವ ಪ್ರಕ್ರಿಯೆಯಲ್ಲಿ ನೇರ ಪ್ರಯೋಜನ ವರ್ಗಾವಣೆ ಯೋಜನೆ ಜಾರಿ ಇವಿಷ್ಟಕ್ಕೇ ಸೀಮಿತವಾಗಿದೆ.
ಆದರೆ ಹೂಡಿಕೆದಾರರು, ಆಶ್ವಾಸನೆಗೆ ಅನುಗುಣವಾಗಿ ದೊಡ್ಡ ಪ್ರಮಾಣ ದ ಸುಧಾರಣೆಗಳನ್ನು ಎದುರು ನೋಡುತ್ತಿದ್ದಾರೆ. ದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿರುವ ಸರಕು ಮತ್ತು ಸೇವಾ ತೆರಿಗೆ, ಕೈಗಾರಿಕಾ ಉದ್ದೇಶದ ಭೂಸ್ವಾಧೀನ ಪ್ರಕ್ರಿಯೆಗೆ ತಿದ್ದುಪಡಿ ಹಾಗೂ ಸರಳ ಕಾರ್ಮಿಕ ನಿಯಮಾವಳಿಗಳು ಪ್ರಮುಖವಾದವುಗಳು. ಈ ವಿಷಯದಲ್ಲಿ ಮೋದಿ ಸರಕಾರ ಯಾವ ಅರ್ಥಪೂರ್ಣ ಪ್ರಗತಿಯನ್ನೂ ಸಾಧಿಸುವುದು ಸಾಧ್ಯವಾಗಿಲ್ಲ. ಏಕೆಂದರೆ ಪ್ರಮುಖವಾದ ಜಿಎಸ್‌ಟಿಯಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ಒಮ್ಮತ ಸಾಧ್ಯವಾಗಿಲ್ಲ. ಈ ಮೊದಲೇ ಲೇಖನವೊಂದರಲ್ಲಿ ಫಸ್ಟ್ ಪೋಸ್ಟ್ ವಿವರಿಸಿದಂತೆ, ಮೋದಿ ಮ್ಯಾಜಿಕ್ ಷೇರು ಮಾರುಕಟ್ಟೆಯಲ್ಲಿ ಪವಾಡ ಮಾಡಿದ ದಿನಗಳು ಎಂದೋ ಕಳೆದುಹೋಗಿವೆ. ಇದು ಆಂತರಿಕ ಷೇರು ಮಾರುಕಟ್ಟೆಯಲ್ಲಿ ಪ್ರತಿಫಲನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕತೆಯ ವಾಸ್ತವ ಸ್ಥಿತಿಗತಿಯನ್ನು ಒಪ್ಪಿಕೊಂಡು, ಪರಿಹಾರದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ಸರಕಾರಕ್ಕೆ ಇದು ಸಕಾಲ.

ವಸೂಲಾಗದ ಸಾಲ:                                                                             ಎಸ್‌ಎಆರ್‌ಎಫ್‌ಇಎಸ್‌ಐ ಕಾಯ್ದೆಯಲ್ಲಿ ಹಲವು ಬದಲಾವಣೆಗಳನ್ನು ಮೋದಿ ಘೋಷಿಸಿದ್ದು, ಆಸ್ತಿ ಪುನರ್‌ನಿರ್ಮಾಣ ಕಂಪೆನಿಗಳಲ್ಲಿ ಹೆಚ್ಚಿನ ಹೂಡಿಕೆಗೆ ಅವಕಾಶ ಮಾಡಿಕೊಡುವ ಕಾನೂನಿನಲ್ಲಿ ತಿದ್ದುಪಡಿಯ ಸೂಚನೆಯನ್ನೂ ನೀಡಿದ್ದಾರೆ. ಇದು ಪ್ರಮುಖ ಏಕೆಂದರೆ ನಮ್ಮಲ್ಲಿ ಸಿಎಂಐಇ (ಭಾರತೀಯ ಆರ್ಥಿಕತೆ ಮೇಲುಸ್ತುವಾರಿ ಕೇಂದ್ರ) ಇದೆ. ಆರಂಭಿಕ ಸುಧಾರಣೆಯ ಬಳಿಕ ಕಳೆದ ಕೆಲ ತ್ರೈಮಾಸಿಕಗಳಲ್ಲಿ ನಿಲುಗಡೆಯಾದ ಯೋಜನೆಗಳ ಸಂಖ್ಯೆ ಹೆಚ್ಚುತ್ತಿದೆ. ವಸೂಲಾಗದ ಸಾಲಗಳ ಸಮಸ್ಯೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದು, ಗರ್ಭಾವಸ್ಥೆಯಲ್ಲಿರುವ ದೊಡ್ಡ ಮೂಲ ಸೌಕರ್ಯ ಯೋಜನೆಗಳಿಗೆ ನೆರವು ನೀಡುವ ಸಾಮರ್ಥ್ಯವನ್ನು ಬ್ಯಾಂಕಿಂಗ್ ಕ್ಷೇತ್ರ ಕಳೆದುಕೊಂಡಿದೆ. ಇದನ್ನು ಹೊರತುಪಡಿಸಿ, ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾ ಗುತ್ತಿರುವುದು ಕೂಡಾ ಕಂಪೆನಿಗಳಿಗೆ ವೆಚ್ಚ ಪ್ರಮಾಣ ಹೆಚ್ಚಳಕ್ಕೆ ಕಾರಣ ವಾಗುತ್ತಿದೆ. ಮುಖ್ಯವಾಗಿ ಮೂಲಸೌಕರ್ಯ ವಲಯದಲ್ಲಿ ಇಂತಹ ಹೊರೆ ಯನ್ನು ಇಳಿಸುವ ಕ್ರಮಗಳಿಗಾಗಿ ಕಾರ್ಪೊರೇಟ್ ವಲಯ ಕಾತರವಾಗಿದೆ. ಜೇಟ್ಲಿಯವರ ಹೊಸ ಬಜೆಟ್ ಕಂಪೆನಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದೇ? ಮೇಲ್ನೋಟಕ್ಕೆ 2016ರ ಬಜೆಟ್ ಜೇಟ್ಲಿಯವರ ಉದ್ದೇಶಗಳ ಹೇಳಿಕೆ ಯಾಗಿರದೇ, ಮೋದಿ ಬಜೆಟ್ ಆಗಿದೆ. ಹಲವು ಸಣ್ಣ ಹೆಜ್ಜೆಗಳ ಯೋಜನೆ ಗಳಿಂದ ಕೂಡಿದ್ದು, ತೀರಾ ಅಗತ್ಯವಾದ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಪ್ರಮುಖ ಹಾಗೂ ದಿಟ್ಟ ಹೆಜ್ಜೆಗಳು ಕಾಣುತ್ತಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X