ಭಾರತದ ಪುರುಷ, ಮಹಿಳಾ ತಂಡ ಮೂರನೆ ಸುತ್ತಿಗೆ ತೇರ್ಗಡೆ

ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್
ಕೌಲಾಲಂಪುರ, ಫೆ.29: ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ಹಾಗೂ ಮಹಿಳಾ ತಂಡಗಳು ಮೂರನೆ ಸುತ್ತಿಗೆ ತೇರ್ಗಡೆಯಾಗಿವೆ.
ರವಿವಾರ ವಿಯೆಟ್ನಾಂ ವಿರುದ್ಧದ ಮೊದಲ ಸುತ್ತಿನ ಪಂದ್ಯವನ್ನು ಜಯಿಸಿರುವ ಭಾರತ ಸೋಮವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಪುರುಷರ ತಂಡ ಟರ್ಕಿಯನ್ನು ಮಣಿಸಿತು.
ಅಚಂತಾ ಶರತ್ ಕಮಲ್ ಟರ್ಕಿಯ ಇಬ್ರಾಹೀಂ ಗುಂಡುಝ್‌ರನ್ನು 11-5, 11-5, 11-7 ಸೆಟ್‌ಗಳಿಂದ ಮಣಿಸಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸೌಮ್ಯಜಿತ್ ಘೋಷ್ ಅವರು ಜೆನ್‌ಕೇ ಮೆಂಜಿ ಅವರನ್ನು 11-8, 11-6, 11-7 ಸೆಟ್‌ಗಳ ಅಂತರದಿಂದ ಮಣಿಸಿದರು.
ನ್ಯಾಶನಲ್ ಚಾಂಪಿಯನ್ ಆ್ಯಂಟನಿ ಅಮಲ್‌ರಾಜ್ ಟರ್ಕಿಯ ಅಬ್ದುಲ್ಲಾರನ್ನು 11-3, 11-4, 11-6, 11-7 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಭಾರತದ ಪುರುಷರ ತಂಡ ಮಂಗಳವಾರ ನಡೆಯಲಿರುವ ಮೂರನೆ ಸುತ್ತಿನ ಪಂದ್ಯದಲ್ಲಿ ನೈಜೀರಿಯವನ್ನು ಎದುರಿಸಲಿದೆ. ಮಹಿಳಾ ಟೇಬಲ್ ಟೆನಿಸ್ ತಂಡ ಪುಯೆರ್ಟಾ ರಿಕಾ ತಂಡವನ್ನು ಮಣಿಸಿತು.
ಮೊದಲ ಸಿಂಗಲ್ಸ್ ಪಂದ್ಯದಲ್ಲಿ ವೌಮಾ ದಾಸ್ ವಿರುದ್ಧ ಅಡ್ರಿಯಾನ್ ಡಿಯಾಝ್ 5-11, 11-2, 11-7, 11-9 ಸೆಟ್‌ಗಳಿಂದ ಗೆಲುವು ಸಾಧಿಸಿದರು.
ಕೆ.ಶಮಿನಿ ಹಾಗೂ ಮಧುರಿಕಾ ಪಾಟ್ಕರ್ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟರು.
ಶಮಿನಿ ಅವರು ಮೆಲೈನ್ ಡಿಯಾಸ್‌ರನ್ನು 12-10, 11-9, 7-11, 11-5 ಸೆಟ್‌ಗಳಿಂದಲೂ, ಮಧುರಿಕಾ ಅವರು ಡ್ಯಾನ್ಲೀ ರಿಯೊಸ್‌ರನ್ನು 11-4, 11-9, 11-7 ಸೆಟ್‌ಗಳಿಂದ ಮಣಿಸಿ ಭಾರತದ ವಿಶ್ವಾಸವನ್ನು ಜೀವಂತವಾಗಿರಿಸಿದರು.
ಶಮಿನಿ ಮಂಗಳವಾರ ನಡೆಯಲಿರುವ ಮೂರನೆ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು ಎದುರಿಸಲಿದೆ.







