ಸ್ಪಾನೀಶ್ ಲೀಗ್: ಅಜೇಯ ಗೆಲುವಿನ ದಾಖಲೆ ಸರಿಗಟ್ಟಿದ ಬಾರ್ಸಿಲೋನ

ಬಾರ್ಸಿಲೋನ, ಫೆ.29: ಸೆವಿಲ್ಲಾ ತಂಡದ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿರುವ ಬಾರ್ಸಿಲೋನ ತಂಡ ಸ್ಪಾನೀಶ್ ಲಾಲಿಗದಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ದಾಖಲಿಸಿದ್ದ ಅಜೇಯ ಗೆಲುವಿನ ದಾಖಲೆಯನ್ನು ಸರಿಗಟ್ಟಿದೆ.
ರವಿವಾರ ಇಲ್ಲಿನ ಕ್ಯಾಂಪ್‌ನೌ ಸ್ಟೇಡಿಯಂನಲ್ಲಿ ನಡೆದ ಸ್ಪಾನೀಶ್ ಲಾಲಿಗ ಪಂದ್ಯದಲ್ಲಿ ಸೆವಿಲ್ಲಾ ತಂಡವನ್ನು ರೋಚಕವಾಗಿ ಮಣಿಸಿರುವ ಬಾರ್ಸಿಲೋನ 1988-89ರ ಋತುವಿನಲ್ಲಿ ಸತತ 34 ಪಂದ್ಯಗಳನ್ನು ಜಯಿಸಿದ್ದ ರಿಯಲ್ ಮಾಡ್ರಿಡ್ ದಾಖಲೆಯನ್ನು ಸರಿಗಟ್ಟಿದೆ.
ಪ್ರವಾಸಿ ತಂಡ ಸೆವಿಲ್ಲಾ ಪರ 20ನೆ ನಿಮಿಷದಲ್ಲಿ ಗೋಲು ಬಾರಿಸಿದ ವಿಟೊಲೊ 1-0 ಮುನ್ನಡೆ ಒದಗಿಸಿಕೊಟ್ಟರು. ಕ್ರಮವಾಗಿ 31ನೆ ಹಾಗೂ 48ನೆ ನಿಮಿಷದಲ್ಲಿ ಗೋಲು ಬಾರಿಸಿದ ಲಿಯೊನೆಲ್ ಮೆಸ್ಸಿ ಹಾಗೂ ಗೆರಾರ್ಡ್ ಪಿಕ್ಯೂ ತಂಡವನ್ನು ಗೆಲುವಿನ ದಡ ಸೇರಿಸಿದರು.
Next Story





