ಪಾಕ್: ಕೌಟುಂಬಿಕ ಹಿಂಸೆ ಕಾಯ್ದೆಯಡಿ ಪ್ರಥಮ ಪ್ರಕರಣ ದಾಖಲು
ಇಸ್ಲಾಮಾಬಾದ್, ಮಾ.1: ಪಂ ಜಾಬ್ ವಿಧಾನಸಭೆಯು ಇತ್ತೀಚೆಗೆ ಅಂಗೀಕರಿಸಿದ ಕೌಟುಂಬಿಕ ಹಿಂಸೆ ಕಾಯ್ದೆಯಡಿ ಪಾಕ್ ಪೊಲೀಸರು, ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿಯ ಮೇಲೆ ಹಿಂಸೆಯನ್ನು ಎಸಗಿದ ಪತಿಯ ವಿರುದ್ಧ ಲಾಹೋರ್‌ನ ಗ್ರೀನ್‌ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಹಿಳೆಯ ಮೇಲೆ ಯಾವುದೇ ದೈಹಿಕ ದೌರ್ಜನ್ಯ ನಡೆದಿರುವ ಚಿಹ್ನೆಗಳು ಕಂಡುಬಂದಿಲ್ಲ. ಅಷ್ಟೇ ಅಲ್ಲದೆ ವೈದ್ಯಕೀಯ ವರದಿಯೂ ಕೂಡಾ ಆಕೆಯ ಆರೋಪವನ್ನು ದೃಢಪಡಿಸಿಲ್ಲವೆಂದು, ಸಹಾಯಕ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಅಶೀಕ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ. ದೂರು ನೀಡಿದ ಮಹಿಳೆಯ ಪತಿಯನ್ನು ಬಂಧಿಸಲಾಗಿದ್ದು, ಆತನನ್ನು ಠಾಣೆಗೆ ತರಲಾಗಿದೆಯೆಂದು ಅವರು ಹೇಳಿದ್ದಾರೆ.
Next Story





