ಗೊರಕೆಯಿಂದ ಮಕ್ಕಳ ಆರೋಗ್ಯಕ್ಕೆ ತೊಂದರೆ
ಲಂಡನ್,ಮಾ.1: ಆಗಾಗ್ಗೆ ನಿದ್ದೆ ಯಲ್ಲಿ ಗೊರಕೆಹೊಡೆಯುವ ಹಾಗೂ ಉಸಿರಾಟ ಸಮಸ್ಯೆಯೆದುರಿಸುವ ಮಕ್ಕಳಲ್ಲಿ ಏಕಾಗ್ರತೆಯ ಮಟ್ಟ ಹಾಗೂ ಕಲಿಕೆಯ ಸಾಮರ್ಥ್ಯದ ಸಮಸ್ಯೆ ಕಂಡುಬರುವ ಸಾಧ್ಯತೆಗಳಿವೆಯೆಂದು ವರದಿ ತಿಳಿಸಿದೆ.
ಗೊರಕೆ ಹೊಡೆಯುವುದರಿಂದ ಮಕ್ಕಳ ನಿದ್ದೆಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಆಯಾಸ, ಏಕಾಗ್ರತೆಯ ಕೊರತೆ, ಕಲಿಕೆಯ ತೊಂದರೆಗಳು, ನಿದ್ರೆಯಲ್ಲಿ ಮೂತ್ರಿಸುವುದು, ದೈಹಿಕ ಬೆಳವಣಿಗೆ ಕುಂಠಿತದ ಸಮಸ್ಯೆಗಳು ಎದುರಾಗುತ್ತವೆಯೆಂದು ಸ್ವೀಡನ್‌ನ ಗುಟೆನ್‌ಬರ್ಗ್ ವಿವಿಯ ಸಂಶೋಧಕ ಗ್ಯೂನಿಹಿಲ್ಡರ್ ಗುಡ್ನೊಡೊಟಿರ್ ತಿಳಿಸಿದ್ದಾರೆ.
Next Story





