ಸಂತ್ರಸ್ತರಿಗೆ ಸಹಾಧನ ನೀಡಿದ ಭಟ್ಕಳ ಸಾಲಗಾರರ ಕ್ಷೇಮಾಭಿವೃದ್ದಿ ಸಂಘ

ಗೋಕರ್ಣ :ಖಾಸಗಿ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದೇ ಮನೆಯ ನಾಲ್ವರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವರದಿಗಾಗಿ ಮನನೊಂದ ಭಟ್ಕಳ ತಾಲೂಕು ಸಾಲಗಾರರ ಕ್ಷೇಮಾಭಿವೃದ್ದಿ ಸಂಘದವರು ಬಂಡಿಕೇರಿ ಗ್ರಾಮದ ಸಂತ್ರಸ್ತ ನಾಗರಾಜ ಆಚಾರಿ ಮನೆಗೆ ಆಗಮಿಸಿ ಐದು ಸಾವಿರ ರೂಪಾಯಿ ಸಹಾಯಧನ ನೀಡಿದ್ದಲ್ಲದೆ ಈರ್ವರು ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಧನ ನೀಡುವದಾಗಿಯೂ ಬರವಸೆ ನೀಡುವ ಮೂಲಕ ಸಾಂತ್ವನ ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಇಲ್ಲಿನ ಬಂಡಿಕೇರಿ ಗ್ರಾಮದ ನಾಗರಾಜ ಆಚಾರಿ ಮತ್ತು ಆತನ ಹೆಂಡತಿ ಈರ್ವರು ಮಕ್ಕಳು ಖಾಸಗಿ ಬ್ಯಾಂಕ್ ಒಂದರ ಸಾಲದ ನೋಟೀಸಿಗೆ ಹೆದರಿ ಸಾಮೂಹಿಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈ ಬಗ್ಗೆ ಅದೃಷ್ಟವಶಾತ್ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸೇರಿಸಲ್ಪಟ್ಟು ಬಚಾವಾದ ಕುಟುಂಬಕ್ಕೆ ಆಶ್ರಯ ಪೌಂಡೇಶನ ಹಿರೇಗುತ್ತಿಯ ರಾಜೀವ ಗಾಂವಕರ ಅವರು ವಿಷೇಶಸಹಕಾರ ನೀಡುವ ಮೂಲಕ ಚಿಕಿತ್ಸೆ ನೀಡುವಲ್ಲಿ ಸಹಕರಿಸಿದ್ದರು. ಅದರಂತೆ ಇವರ ಸಾಲದ ಬಗ್ಗೆನೀಡಲಾದ ನೋಟೀಸಿನಿಂದ ತಿಳಿದ ಈ ದುರಂತದ ಬಗ್ಗೆ ನೊಂದ ಭಟ್ಕಳದ ಸಾಲಗಾರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಮಂಗಳವಾರದಂದು ಬಂಡಿಕೇರಿಗೆ ಬೇಟಿ ನೀಡಿದ್ದರು.
ನಾಗರಾಜ ಆಚಾರಿ ಇವರಿಗೆ ನೀಡಲಾದ ಸಾಲ ಮರುಪಾವತಿಸುವಂತೆ ಬ್ಯಾಂಕ್ ನೀಡಿದ ನೋಟೀಸಿ ನ ಬಗ್ಗೆಯೂ ವಿಚಾರಣೆ ನಡೆಸುವ ಮೂಲಕ ಸತ್ಯಾಸತ್ಯತೆ ಪರಿಶೀಲಿಸುವದಾಗಿಯೂ ಈ ಸಂದರ್ಬದಲ್ಲಿ ತಿಳಿಸಿದ ಸಂಘದ ಪದಾದಿಕಾರಿಗಳು ಕುಟುಂಬಸ್ಥರಿಗೆ ದೈರ್ಯ ತುಂಬುವ ಮಾನವೀಯ ಕಾರ್ಯ ಮಾಡಿರುವದು ಗಮನಾರ್ಹ ಸಂಗತಿಯಾಗಿದೆ.
ಈ ಸಂದರ್ಬದಲ್ಲಿ ಮಾತನಾಡಿದ ಸಂಘದ ಅದ್ಯಕ್ಷರಾದ ಗಣಪತಿ ನಾಯ್ಕ ಮಾತನಾಡಿ ಸಾಲಕ್ಕೆ ಹದರಿ ಇಂಥ ಒಂದು ದುರಂತ ಸಂಬವಿಸಿದಾಗಲೂ ಯಾವುದೇ ಜನಪ್ರತಿನಿದಿಗಳು ಆಗಮಿಸಿ ನೊಂದವರಿಗೆ ಸಾತ್ವನ ಹೇಳದಿರುವದು ವಿಷಾದಕರವಾಗಿದೆ. ಈ ನಿಟ್ಟಿನಲ್ಲಿ ಗೋಕರ್ಣದಲ್ಲಿಯೂ ಸಾಲಗಾರರ ಕ್ಷೇಮಾಭಿವೃದ್ದಿಗಾಗಿ ಪ್ರತ್ಯೇಕ ಸಂಘದ ಘಟಕವನ್ನು ಸ್ಥಾಪಿಸಿ ಇಲ್ಲಿನ ಬಡ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದದು ಅನಿವಾರ್ಯವಾಗಿ ತೋರುತ್ತದೆ. ಈ ನಿಟ್ಟಿನಲ್ಲಿ ನೊಂದ ನಾಗರಾಜ ಆಚಾರಿ ಇವರ ಕುಟುಂಬಕ್ಕೆ ನಮ್ಮಿಂದ ಅಲ್ಪ ಸಹಾಯವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಅವರ ಯಾವುದೇ ಅವಶ್ಯಕತೆಗಳಿದ್ದಲ್ಲಿ ನಾವು ನೆರವಾಗಲು ಸಿದ್ದರಿದ್ದೇವೆಂಬುದಾಗಿ ತಿಳಿಸಿರುತ್ತಾರೆ.





