ಕ್ಯಾಂಟರ್ ಹರಿದು ಕ್ಲೀನರ್ ಸಾವು
ನಾಗಮಂಗಲ, ಮಾ.1: ಚಾಲಕನ ಅಜಾಗರೂಕತೆಯಿಂದ ಕ್ಯಾಬಿನ್‌ನಿಂದ ಹೊರಬಿದ್ದ ಕ್ಲೀನರ್ ಮೇಲೆ ಕ್ಯಾಂಟರ್ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿ, ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ದೇವಲಾಪುರ ಹ್ಯಾಂಡ್ ಪೋಸ್ಟ್ ಬಳಿ ಸಂಭವಿಸಿದೆ.
ಮೃತರನ್ನು ಮಂಡ್ಯ ತಾಲೂಕಿನವರಾದ ಬಸರಾಳು ಗ್ರಾಮದ ಚನ್ನೇಗೌಡ(25) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಾಲಕ ಉಪ್ಪರಕನಹಳ್ಳಿಯ ನಟರಾಜ(34) ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗಮಂಗಲ ಪಟ್ಟಣದಿಂದ ಮಂಡ್ಯಕ್ಕೆ ತೆರಳುತ್ತಿದ್ದ ವೇಳೆ ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಹಾಕಲಾಗಿರುವ ರಸ್ತೆ ಉಬ್ಬು ಗಮನಿಸದೆ ಚಾಲಕ ವೇಗವಾಗಿ ಚಲಿಸಿದ್ದರಿಂದ ಕ್ಯಾಂಟರ್‌ನ ಮುಂದಿನ ಕ್ಯಾಬಿನ್ ಮಗುಚಿ ಬಿದ್ದಿದೆ. ಪರಿಣಾಮ ಕೆಳಗೆ ಬಿದ್ದ ಕ್ಲೀನರ್ ಮೇಲೆ ಕ್ಯಾಂಟರ್ ಹರಿದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.
Next Story





