ಇಪಿಎಫ್ ಬಡ್ಡಿಗಷ್ಟೇ ತೆರಿಗೆ: ಸರಕಾರದಿಂದ ಸ್ಪಷ್ಟೀಕರಣ

ಹೊಸದಿಲ್ಲಿ, ಮಾ.1: ವೇತನ ವರ್ಗದ ಭಯವನ್ನು ದೂರ ಮಾಡಲು ಬಯಸಿರುವ ಸರಕಾರ, ಸಾರ್ವಜನಿಕ ಭವಿಷ್ಯನಿಧಿಗೆ(ಪಿಪಿಎಫ್) ಹಿಂದೆ ಪಡೆಯುವ ವೇಳೆ ತೆರಿಗೆ ವಿಧಿಸಲಾಗುವುದಿಲ್ಲ. ಎಪ್ರಿಲ್ 1ರ ಬಳಿಕ ಮಾಡುವ ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ನೀಡಿರುವ ವಂತಿಗೆಗೆ ದೊರೆಯುವ ಬಡ್ಡಿಯ ಮೇಲೆ ಮಾತ್ರ ತೆರಿಗೆ ವಿಧಿಸಲಾಗುವುದು. ಮೂಲ ಬಂಡವಾಳಕ್ಕೆ ತೆರಿಗೆ ವಿನಾಯಿತಿ ಮುಂದು ವರಿಯಲಿದೆಯೆಂದು ಮಂಗಳವಾರ ಸ್ಪಷ್ಟಪಡಿಸಿದೆ.
ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ, ಶೇ.60ರಷ್ಟು ನೌಕರರ ಭವಿಷ್ಯ ನಿಧಿ ಹಿಂದೆಗೆತದ ಮೇಲೆ ತೆರಿಗೆ ವಿಧಿಸುವ ಬಜೆಟ್ ಪ್ರಸ್ತಾವವು ಕೇವಲ ಉನ್ನತ ವೇತನದ, ಐದನೆ ಒಂದಕ್ಕಿಂತಲೂ ಕಡಿಮೆ ನೌಕರರ ಮೇಲಷ್ಟೇ ಪರಿಣಾಮ ಬೀರುತ್ತದೆ ಎಂದಿದ್ದಾರೆ.
2016ರ ಎಪ್ರಿಲ್‌ನ ಬಳಿಕ ನೀಡುವ ಪಿಎಫ್ ದೇಣಿಗೆಗಳ ಮೇಲಿನ ಬಡ್ಡಿಗೆ ತೆರಿಗೆ ವಿಧಿಸುವ ಪ್ರಸ್ತಾಪವಿದೆ. ಮೂಲ ಬಂಡವಾಳಕ್ಕೆ ತೆರಿಗೆ ವಿಧಿಸುವುದಿಲ್ಲ. ಅದನ್ನು ಹಿಂದೆಗೆಯುವಾಗ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಎಪ್ರಿಲ್ 1ರ ಬಳಿಕ ನೀಡುವ ಶೇ.40 ವಂತಿಗೆಗೆ ತೆರಿಗೆ ವಿನಾಯಿತಿ ನೀಡಲಾಗುವುದು ಹಾಗೂ ಉಳಿದ ಶೇ.60 ಭಾಗಕ್ಕೆ ತೆರಿಗೆ ವಿಧಿಸಲಾಗುವುದೆಂದು ನಾವು ಹೇಳಿದ್ದೆವು. ಈ ಶೇ.60ನ್ನೂ ಪಿಂಚಣಿ ಆನ್ಯುವಿಟಿ(ವರ್ಷಾಸನ) ಯೋಜನೆಯೊಂದರಲ್ಲಿ ಹೂಡಿದರೆ ಅದಕ್ಕೂ ತೆರಿಗೆ ವಿನಾಯಿತಿ ನೀಡಲಾಗುವುದು. ಇದೊಂದು ಆದಾಯ ಕ್ರೋಡೀಕರಣ ಕ್ರಮವಲ್ಲವೆಂದು ಅವರು ವಿವರಿಸಿದ್ದಾರೆ. ಪಿಪಿಎಫ್‌ನ ಭಾಗಕ್ಕೆ ತೆರಿಗೆಯಿರುವುದಿಲ್ಲ. ವರ್ಷಕ್ಕೆ ರೂ. 1.5 ಲಕ್ಷಗಳವರೆಗೆ ಹೂಡಿಕೆಯ ಹಾಲಿ ಯೋಜನೆಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆಯೆಂದು ಅಧಿಯಾ ತಿಳಿಸಿದ್ದಾರೆ.
ಕಾನೂನುಬದ್ಧವಾಗಿ ಇಪಿಎಫ್‌ನ ಭಾಗವಾಗಬೇಕಾಗಿರುವ ರೂ. 15 ಸಾವಿರಕ್ಕಿಂತ ಕಡಿಮೆ ಸಂಪಾದನೆಯಿರುವವರಿಗೆ ಹಣ ಹಿಂದೆಗೆತದ ಮೇಲೆ ಹೊಸ ನಿಯಮ ಅನ್ವಯಿಸುವುದಿಲ್ಲ. ಕಾಯ್ದೆ ಬದ್ಧ ಪ್ರಾವಿಡೆಂಟ್ ಫಂಡ್ ವಂತಿಗೆಗಳು ಹಾಗೂ ಇಪಿಎಫ್ ಅನುಭವಿಸುತ್ತಿರುವ ತೆರಿಗೆ ಲಾಭದ ಕಾರಣ ಚಾಲನೆಗೊಳ್ಳಲು ವಿಫಲವಾಗಿರುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗಳಲ್ಲಿ ಏಕ ರೂಪತೆ ತರುವುದು.







