ಕಾಸರಗೋಡು: ಯಕ್ಷಗಾನ ಸಂಶೋಧನಾ ಕೇಂದ್ರ ಉದ್ಘಾಟನೆ

ಕಾಸರಗೋಡು, ಮಾ.1: ಜಿಲ್ಲೆಗೆ ಮಂಜೂರಾದ ರಾಜ್ಯದ ಪ್ರಥಮ ಯಕ್ಷಗಾನ ಸಂಶೋಧನಾ ಕೇಂದ್ರವು ಮಂಗಳವಾರ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕಾರ್ಯಾರಂಭಗೊಂಡಿತು.
ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಕೇಂದ್ರವನ್ನು ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹೀಂ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿ ಇ.ದೇವದಾಸನ್, ಕರ್ನಾಟಕ ಯಕ್ಷಗಾನ ಅಕಾಡಮಿ ಅಧ್ಯಕ್ಷ ತಾರಾನಾಥ ವರ್ಕಾಡಿ, ನಗರಸಭಾ ಸದಸ್ಯೆ ಕೆ. ಸವಿತಾ, ಉಪಪ್ರಾಂಶುಪಾಲ ಡಾ.ಸಿ.ಬಾಬುರಾಜ್, ಕನ್ನಡ ವಿಭಾಗದ ಎಸ್. ಸುಜಾತಾ, ಮಂಜೇ ಶ್ವರ ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾ ಗದ ಮುಖ್ಯಸ್ಥ ಕೆ. ದಿನೇಶ್ ಕುಮಾರ್, ಡಾ.ರಾಧಾಕೃಷ್ಣ ಬೆಳ್ಳೂರು, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಕೆ.ಬಾಲಕೃಷ್ಣನ್, ಪಿ.ಎಸ್.ಸಹದ್ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ಪಿ.ಎ. ಶಿವರಾಮ ಕೃಷ್ಣನ್ ಸ್ವಾಗತಿಸಿದರು. ಡಾ. ರತ್ನಾಕರ ಮಲ್ಲಮೂಲೆ ವಂದಿಸಿದರು.
Next Story





