ನೈಸರ್ಗಿಕ ವಿಕೋಪ ಪೀಡಿತರಿಗೆ ಹೆಚ್ಚುವರಿ ಆಹಾರಧಾನ್ಯ ಪೂರೈಕೆ
ಹೊಸದಿಲ್ಲಿ,ಮಾ.1: ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮನವಿಯ ಮೇರೆಗೆ ನೈಸರ್ಗಿಕ ವಿಕೋಪಗಳಿಂದ ಪೀಡಿತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚುವರಿ ಆಹಾರಧಾನ್ಯಗಳನ್ನು ಪೂರೈಸಲಾಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
ಪ್ರಚಲಿತ ವರ್ಷದಲ್ಲಿ ಮಹಾರಾಷ್ಟ್ರ ಸರಕಾರವು ಮಾತ್ರ ತನ್ನ ರಾಜ್ಯದಲ್ಲಿಯ ಬರಪೀಡಿತ ಜನರಿಗಾಗಿ ಹೆಚ್ಚುವರಿ ಆಹಾರಧಾನ್ಯಗಳನ್ನು ಕೋರಿದ್ದು, ಹಾಲಿ ನೀತಿಗನುಸಾರ ಅದಕ್ಕೆ 1.63 ಲ.ಟನ್ ಅಕ್ಕಿ ಮತ್ತು 2.44 ಲ.ಟನ್ ಗೋಧಿಯನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ ಅವರು,2015-16ರಲ್ಲಿ ಅಧಿಸೂಚಿತ ಬರಪೀಡಿತ ಪ್ರದೇಶಗಳಲ್ಲಿ ನರೇಗಾದಡಿ ನಿಗದಿತ 100 ದಿನಗಳೊಂದಿಗೆ ಹೆಚ್ಚುವರಿಯಾಗಿ 50 ದಿನಗಳವರೆಗೆ ಕೆಲಸವನ್ನು ನೀಡಲು ಸರಕಾರವು ನಿರ್ಧರಿಸಿದೆ ಎಂದರು.
Next Story





