ಉಪ್ಪೂರು: ವ್ಯಕ್ತಿ ನಾಪತ್ತೆ
ಬ್ರಹ್ಮಾವರ, ಮಾ.1: ವ್ಯವಹಾರದ ಹಣದ ವಸೂಲಿಗಾಗಿ ಫೆ.12ರಂದು ಕಳಸಕ್ಕೆ ಹೋಗಿರುವ ಉಪ್ಪೂರು ಜಾತಬೆಟ್ಟುವಿನ ಸಂದೀಪ್(33) ಎಂಬವರು ನಾಪತ್ತೆಯಾಗಿದ್ದಾರೆ.
ಮೂಲತಃ ಧಾರವಾಡ ಜಿಲ್ಲೆಯ ಕಿಲ್ಲಾ ಕುರ್ಲಿಚಾಳದ ನಿವಾಸಿಯಾಗಿರುವ ಇವರ ಪತ್ನಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಉಪ್ಪೂರಿನಲ್ಲಿ ನೀರಿನ ಟ್ಯಾಂಕ್‌ನ ವ್ಯವಹಾರ ಮಾಡಿಕೊಂಡಿರುವ ಇವರು ಈ ವ್ಯವಹಾರದಲ್ಲಿ ನಷ್ಟ ಹೊಂದಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





