ಹಣ ಕಿತ್ತು ಪರಾರಿ
ಮಂಗಳೂರು,ಮಾ.1: ಕೂಳೂರು ಬಸ್ ನಿಲ್ದಾಣದಿಂದ ರಾಯಿಕಟ್ಟೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಆನಂದ್ ಎಂಬವರ ಜೇಬಿನಲ್ಲಿದ್ದ ಹಣವನ್ನು ಬಲಾತ್ಕಾರವಾಗಿ ಕಿತ್ತುಹೋದ ಘಟನೆ ಸೋಮವಾರದಂದು ನಡೆದಿದೆ.
ಕೃತ್ಯಕ್ಕೆ ಬಳಸಿದ ವಾಹನದ ಮಾಹಿತಿಯನ್ನು ಆನಂದ್ ಪೊಲೀಸರಿಗೆ ನೀಡಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





