ದುಬಾರಿ ವಾಚ್ ವಿವಾದ ಜಾರಿ, ನಿರ್ದೇಶನಾಲಯಕ್ಕೆ ನೀಡುವ ಮನವಿ ಪರಿಗಣಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಬೆಂಗಳೂರು, ಮಾ.1: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದುಬಾರಿ ಬೆಲೆಯ ವಾಚ್‌ನ್ನು ಯಾರು ನೀಡಿದರು ಮತ್ತು ಯಾವ ಕಾರಣಕ್ಕಾಗಿ ನೀಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲಿರುವ ಮನವಿ ಪರಿಗಣಿಸುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆೆಯಾಗಿದೆ.
ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳಿಗೆ ಲಕ್ಷಾಂತರ ಬೆಲೆ ಬಾಳುವ ವಾಚ್‌ನ್ನು ನೀಡಿದವರು ಯಾರು ಮತ್ತು ಯಾವ ಉದ್ದೇಶಕ್ಕಾಗಿ ನೀಡಿದ್ದಾರೆ. ಉಡುಗೊರೆ ನೀಡಿರುವವರಿಗೆ ಇದರಿಂದ ಯಾವ ರೀತಿಯ ಲಾಭವಾಗಿದೆ ಎಂಬ ಕಾರಣ ಕೇಳಿ ಫೆ. 17 ರಂದು ಹೊಸದಿಲ್ಲಿಯ ಜಾರಿ ನಿರ್ದೇಶನಾಲಯ ಕಚೇರಿಗೆ ಮನವಿ ಮಾಡಲಾಗಿದೆ.ಲ್ಲದೆ, ಫೆ.21ರಂದು ಬೆಂಗಳೂರು ಮತ್ತು ಚೆನ್ನೈನಲ್ಲಿರುವ ವಲಯ ಹಾಗೂ ಪ್ರಾದೇಶಿಕ ಕಚೇರಿಗಳಿಗೂ ಮನವಿ ಸಲ್ಲಿಸಲಾಗಿದೆ. ಆದರೂ, ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ, ಮನವಿ ಪರಿಗಣಿಸುವುದಕ್ಕೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಬೇಕು ಎಂದು ವಕೀಲ ನಟರಾಜ್ ಶರ್ಮಾ ಎಂಬವರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಚುನಾವಣೆಗೆ ಸ್ಪರ್ಧಿಸುವ ನಾಮಪತ್ರದಲ್ಲಿ ಈ ವಾಚ್ ಬಗ್ಗೆ ಮಾಹಿತಿ ನೀಡಿಲ್ಲ. ಒಬ್ಬ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಶಾಲಿಯಾದ ಬಳಿಕ ಅವರು ಸಾರ್ವಜನಿಕರ ಸೇವಕರಾಗುತ್ತಾರೆ. ಸಾರ್ವಜನಿಕ ಸೇವಕರಾಗಿರುವವರು ಈ ರೀತಿಯ ದುಬಾರಿ ಬೆಲೆಯ ವಾಚ್ ಪಡೆದುಕೊಳ್ಳುವುದು ಭ್ರಷ್ಟಾಚಾರ ನಡೆಸಿದಂತಾಗುತ್ತದೆ. ಅಲ್ಲದೆ, ಪ್ರತೀ ವರ್ಷ ಲೋಕಾಯುಕ್ತ ಸಂಸ್ಥೆಗೆ ಆಸ್ತಿಯ ವಿವರವನ್ನು ಸಲ್ಲಿಸಬೇಕು ಎಂಬ ನಿಯಮವಿದ್ದು, 2014 ಮತ್ತು 15ರಲ್ಲಿ ಸಲ್ಲಿಸಿರುವ ವರದಿಯಲ್ಲಿ ದುಬಾರಿ ವಾಚ್‌ನ ಪ್ರಸ್ತಾಪವಿಲ್ಲ.ದರೆ ಸಿದ್ದರಾಮಯ್ಯನವರ ಅನುಯಾಯಿಗಳು ವಾಚ್‌ನ್ನು ಸಾರ್ವಜನಿಕವಾಗಿ ಹರಾಜು ಹಾಕಿ ಬಂದ ಮೊತ್ತವನ್ನು ಮುಖ್ಯಮಂತ್ರಿಗಳ ಸಹಾಯ ನಿಧಿಗೆ ಸೇರಿಸಲಾಗುವುದು. ಸಿಯಾಚಿನ್‌ನಲ್ಲಿ ಮೃತರಾದ ಸೈನಿಕರಿಗೆ ಪರಿಹಾರವಾಗಿ ನೀಡಲಾಗುವುದು ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿಗಳು ಈ ವಾಚ್‌ನ್ನು ವಿದೇಶದಲ್ಲಿ ನಲೆಸಿರುವ ಸ್ನೇಹಿತರೊಬ್ಬರು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ವಾಚ್ ಕಳ್ಳತನದ್ದಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ, ಸರಕಾರದ ಮುಖ್ಯ ಕಾರ್ಯದರ್ಶಿಗಳು ಯಾವುದೇ ರೀತಿಯ ಹರಾಜು ಹಾಕುವುದಕ್ಕೆ ಅವಕಾಶ ನೀಡಬಾರದು ಮತ್ತು ವಾಚ್‌ನ್ನು ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಸೇಫ್ ಕಸ್ಟಡಿಯಲ್ಲಿಡುವುದಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.







