ಛತ್ತೀಸ್‌ಗಡ-ತೆಲಂಗಾಣ ಜಂಟಿ ಕಾರ್ಯಾಚರಣೆ: ಐವರು ಮಹಿಳೆಯರು ಸಹಿತ 8 ನಕ್ಸಲರ ಹತ್ಯೆ

ಹೈದರಾಬಾದ್, ಮಾ.1: ಛತ್ತೀಸ್‌ಗಡ ಹಾಗೂ ತೆಲಂಗಾಣಗಳ ನಡುವಿನ ಗಡಿಯಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಕಾಳಗವೊಂದರಲ್ಲಿ ಐವರು ಮಹಿಳೆಯರು ಸಹಿತ 8 ಮಂದಿ ಮಾವೊವಾದಿ ಉಗ್ರರು ಬಲಿಯಾಗಿದ್ದಾರೆ. ಸತ್ತವರಲ್ಲಿ ಸ್ಥಳೀಯ ಮಾವೊವಾದಿ ಕಮಾಂಡರ್ ಒಬ್ಬನೂ ಸೇರಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಕುಖ್ಯಾತ ಮಾವೊವಾದಿ ನಾಯಕ ಹರಿಕಿಶನ್ ಎಂಬಾತ ಖಮ್ಮಾಮ್ ಪ್ರದೇಶದ ಅರಣ್ಯದಲ್ಲಿ ಅಡಗಿಕೊಂಡಿದ್ದಾನೆಂಬ ಮಾಹಿತಿ ಆಧರಿಸಿ ತೆಲಂಗಾಣ ಹಾಗೂ ಛತ್ತೀಸ್‌ಗಡ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡರೆಂದು ಅಧಿಕಾರಿಗಳು ಹೇಳಿದರು.
ಆಂಧ್ರಪ್ರದೇಶ ರಚಿಸಿರುವ ಉನ್ನತ ನಕ್ಸಲ್‌ವಿರೋಧಿ ದಳ-ಗ್ರೇಹೌಂಡ್ಸ್ ಕಾರ್ಯಾಚರಣೆಯ ನೇತೃತ್ವ ವಹಿಸಿತ್ತು. ಎಕೆ-47 ರೈಫಲ್ ಸಹಿತ ಆಯುಧಗಳು ಹಾಗೂ ಮದ್ದುಗುಂಡುಗಳು ನಕ್ಸಲರ ಶವಗಳೊಂದಿಗೆ ಪತ್ತೆಯಾಗಿವೆಯೆಂದು ಮೂಲಗಳು ತಿಳಿಸಿವೆ.
Next Story





