ಆರಕ್ಷಕರಿಂದಲೇ ಯುವತಿಯ ಅತ್ಯಾಚಾರ: ಬಂಧಿಸಲು ತೆರಳಿದ ಪೊಲೀಸರಿಗೆ ಗುಂಡು ಹಾರಿಸಿ ಆರೋಪಿಗಳು ಪರಾರಿ

ಮಧುಬನಿ,ಮಾರ್ಚ್.1: ಬಿಹಾರದ ಮಧುಬನಿ ಜಿಲ್ಲೆಯ ನಗರ ಠಾಣೆಯ ವ್ಯಾಪ್ತಿಯಲ್ಲಿ ಎಸ್ಸೈಟಿ ಕಾನ್ಸ್‌ಟೇಬಲ್‌ನೊಬ್ಬ ಗೆಳೆಯರೊಂದಿಗೆ ಸೇರಿ ತನ್ನನ್ನು ಸಾಮೂಹಿಕ ಅತ್ಯಾಚಾರಗೈದಿರುವುದಾಗಿ ಯುವತಿಯೊಬ್ಬಳು ದೂರು ನೀಡಿದ್ದಾಳೆ. ಪೊಲೀಸರು ಘಟನೆಯ ನಡೆದಿದೆಯೆನ್ನಲಾದ ಸ್ಥಳದಿಂದ ಅಸ್ತ್ರಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಮಧುಬನಿ ಜಿಲ್ಲೆಯ ಲಕ್ಷ್ಮೀ ಸಾಗರ ನಿವಾಸಿ ಯುವತಿ ಶನಿವಾರ ರಾತ್ರಿ ತನ್ನ ಮನೆಯ ಬಾಗಿಲು ಮುಚ್ಚಲು ತೆರಳಿದ್ದಳು. ಜಿಲ್ಲಾಧಿಕಾರಿ ವಸತಿ ರಕ್ಷಣೆ ಕರ್ತವ್ಯಕ್ಕೆ ನಿಯುಕ್ತನಾಗಿದ್ದ ಎಸೈಟಿ ಕಾನ್ಸ್‌ಟೇಬಲ್ ಅನಿಲ್ ಸಿಂಗ್ ತನ್ನ ಇಬ್ಬರು ಸಂಗಡಿಗರೊಂದಿಗೆ ಅಲ್ಲಿಗೆ ಬಂದು ಯುವತಿಯನ್ನು ಬಲವಂತದಿಂದ ಸಮೀಪದ ಗದ್ದೆಗೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೆ ಅಲ್ಲಿಂದ ಪರಾರಿಯಾಗಿದ್ದರು ಎಂದು ಪೀಡಿತ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ. ಆರೋಪಿಯು ನಲಂದಾ ಜಿಲ್ಲೆಯ ನಿವಾಸಿಯಾಗಿದ್ದಾನೆಂದು ಪೊಲೀಸ್ ಅಧೀಕ್ಷರಾದ ಅಕ್ತರ್ ಹುಸೈನ್ ಮಂಗಳವಾರ ತಿಳಿಸಿದ್ದಾರೆ. ಯುವತಿಯ ಹೇಳಿಕೆಯನ್ನು ನಗರ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದಿರುವ ಅವರು ಆರೋಪಿ ಕಾನ್ ಸ್ಟೇಬಲ್‌ನ ವಿರುದ್ಧ ಆರೋಪ ಬಂದ ತಕ್ಷ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಅವನು ಹಾಗೂ ಇಬ್ಬರು ಸ್ನೇಹಿತರನ್ನು ಹುಡುಕವುದರಲ್ಲಿ ಪೊಲೀಸರು ವ್ಯಸ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ. ನಲಂದಾದ ಪೊಲೀಸ್ ಅಧೀಕ್ಷಕ ಕುಮಾರ್ ಆಶೀಷ್ ನೇತೃತ್ವದದಲ್ಲಿ ಆರೋಪಿ ಕಾನ್‌ಸ್ಟೇಬಲ್ ಮತ್ತು ಸಂಗಡಿಗರನ್ನು ಬಂಧಿಸುವ ನಿಟ್ಟಿನಲ್ಲಿ ನಲಂದಾದ ಮಮುರಾಬಾದ್‌ಗೆ ತೆರಳಿದ್ದರು. ಆರೋಪಿಗಳು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.





