ಮಂಗಳೂರು ವಿವಿ ಮಟ್ಟದ ಫುಟ್‌ಬಾಲ್ ಪಂದ್ಯಾಟ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ : ಆಳ್ವಾಸ್ ಕಾಲೇಜಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಮಹಿಳೆಯರ ವಿಭಾಗದ ಫುಟ್ ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.
ಪಂದ್ಯಾಟಕ್ಕೆ ವಿವಿಧ ಕಾಲೇಜಿನಿಂದ 7 ತಂಡಗಳು ಭಾಗವಹಿಸಿದ್ದು, ಈ ಎಲ್ಲ ತಂಡಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟಿತು. ಮೊದಲನೇ ಸೆಮಿಪೈನಾಲ್ ನಲ್ಲಿ ಆಳ್ವಾಸ್ ಬಿ.ಪಿಎಡ್ ತಂಡ ಹಾಗೂ ಅಲೋಸಿಯಸ್ ಕಾಲೇಜು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲೋಸಿಯಸ್ ತಂಡ ಫೈನಲ್‌ಗೆ ತಲುಪಿತು. ಎರಡನೇ ಸಮಿಪೈನಲ್‌ನಲ್ಲಿ ಆಳ್ವಾಸ್ ಕಾಲೇಜು ಹಾಗೂ ಎಸ್.ಡಿ.ಎಮ್ ಉಜಿರೆ ಕಾಲೇಜು ತಂಡವು ಸೆನಸಾಡಿ ಆಳ್ವಾಸ್ ಕಾಲೇಜು ತಂಡವು ಫೈನಲ್ ಹಂತಕ್ಕೆ ತಲುಪಿತು. ಫೈನಲ್ ಹಂತದಲ್ಲಿ ಆಳ್ವಾಸ್ ತಂಡವು 3-0 ಹಂತರದಲ್ಲಿ ಆಲೋಸಿಯಸ್ ಕಾಲೇಜು ತಂಡವನ್ನು ಸೋಲಿಸಿ ರೋಚಕ ಗೆಲುವನ್ನು ತನ್ನದಾಗಿಸಿಕೊಂಡಿತು.
ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಉಷಾರಾಣಿ ಇವರ ಮೂಲಕ ಪ್ರಶಸ್ತಿ ಹಾಗೂ ಟ್ರೋಪಿ ವಿತರಿಸಿದರು.

Next Story





