ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ
ಮಂಗಳೂರು,ಮಾ.1:ಮಂಗಳೂರು ತಾಲೂಕು ಉಪನೋಂದಣಿ ಕಛೇರಿ ವ್ಯಾಪ್ತಿಗೆ ಸಂಬಂಧಿಸಿದ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯನ್ನು ಈಗಾಗಲೇ ಪರಿಷ್ಕರಿಸಿ ಪ್ರಕಟಿಸಲಾಗಿದೆ .ದರಪಟ್ಟಿಯಲ್ಲಿ ಕೋಟೇಕಾರು ಹಾಗು ಉಳ್ಳಾಲ, ಪೆರ್ಮನ್ನೂರು ಗ್ರಾಮಗಳು ಪಟ್ಟಣ ಪಂಚಾಯಿತಿ, ನಗರ ಸಭೆಗಳಾಗಿ ಮೇಲ್ದರ್ಜೆಗೇರಿರುವುದರಿಂದ, ಸದರಿ,ಪ್ರದೇಶಗಳ ಮಾರ್ಗಸೂಚಿ ದರಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಿ ಹಾಗೂ ಜಿಲ್ಲೆಯಾದ್ಯಂತ ಏಕರೂಪ ವಿಶೇಷ ಸೂಚನೆಗಳನ್ನು ಅಳವಡಿಸಿರುವುದರಿಂದ, ದರಪಟ್ಟಿ ಮತ್ತು ವಿಶೇಷ ಸೂಚನೆಗಳನ್ನು ಸಂಬಂಧಪಟ್ಟ ಕಛೇರಿಯಲ್ಲಿ ಪ್ರಕಟಿಸಲಾಗಿದ್ದು, ಮಾ. 01 ರಿಂದ 15 ರವರೆಗೆ ಸಾರ್ವಜನಿಕರ ಆಕ್ಷೇಪಣೆಗಳೇನಾದರು ಇದ್ದಲ್ಲಿ ಸೂಕ್ತ ಕಾರಣಗಳೊಂದಿಗೆ ಆಕ್ಷೇಪಣೆಗಳನ್ನು ಲಿಖಿತವಾಗಿ ಕಾರ್ಯದರ್ಶಿಗಳು/ಉಪನೋಂದಣಾಧಿಕಾರಿಗಳು ಮಂಗಳೂರು ತಾಲೂಕು, ಮಿನಿಧಾನಸೌಧ ಕಟ್ಟಡ, ಮಂಗಳೂರು ಇವರಲ್ಲಿ ಸಲ್ಲಿಸಲು ಸ್ಥಿರಾಸ್ತಿ ಮೌಲ್ಯಮಾಪನ ಸಮಿತಿ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
Next Story





