Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊಲ್ಲೂರು ದೇವಳದ ಚಿನ್ನಾಭರಣ ದುರುಪಯೋಗ...

ಕೊಲ್ಲೂರು ದೇವಳದ ಚಿನ್ನಾಭರಣ ದುರುಪಯೋಗ ಐವರು ದೇವಳ ಸಿಬ್ಬಂದಿಗಳ ಬಂಧನ, 8 ಮಂದಿ ವಶಕ್ಕೆ

ವಾರ್ತಾಭಾರತಿವಾರ್ತಾಭಾರತಿ1 March 2016 10:04 PM IST
share
ಕೊಲ್ಲೂರು ದೇವಳದ ಚಿನ್ನಾಭರಣ ದುರುಪಯೋಗ ಐವರು ದೇವಳ ಸಿಬ್ಬಂದಿಗಳ ಬಂಧನ, 8 ಮಂದಿ ವಶಕ್ಕೆ

ಕೊಲ್ಲೂರು, ಮಾ.1: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭಕ್ತಾಧಿಗಳು ಹರಕೆ ರೂಪದಲ್ಲಿ ನೀಡಿರುವ ಚಿನ್ನಾಭರಣಗಳನ್ನು ದುರುಪಯೋಗಪಡಿಸಿ ಕೊಂಡಿರುವ ಪ್ರಕರಣದ ಹಿಂದೆ ಬೃಹತ್ ಜಾಲ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ದೇವಳದ ಐವರು ಸಿಬ್ಬಂದಿ ಗಳನ್ನು ಬಂಧಿಸಿದ್ದು, ಇತರ 8ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇವರಿಂದ ಸುಮಾರು 70ಲಕ್ಷ ರೂ. ವೌಲ್ಯದ 2,243.890 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿ ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ದೇವಳದ ಸೇವಾ ಕೌಂಟರ್ ಒಂದರ ಸಿಬ್ಬಂದಿ ಶಿವರಾಮ(43)ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಹಿನ್ನೆಲೆಯಲ್ಲಿ ಈ ವಿಚಾರಗಳು ಬೆಳಕಿಗೆ ಬಂದಿದ್ದು, ಅದರಂತೆ ಉಳಿದವರನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಕೊಲ್ಲೂರು ಪೊಲೀಸ್ ಠಾಣೆಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಿವರಾಮನೊಂದಿಗೆ ಕೈಜೋಡಿಸಿರುವ ದೇವಳದ ಕಂಪ್ಯೂಟರ್ ಆಪರೇಟರ್ ಗಂಗಾಧರ ಹೆಗ್ಡೆ, ಕೌಂಟರ್ ಒಂದರ ಎರಡನೆ ಪಾಳಿಯಲ್ಲಿ ಕೆಲಸ ಮಾಡುವ ಪ್ರಸಾದ್ ಆಚಾರ್, ಇತ್ತೀಚೆಗೆ ಕುಡಿದು ಬಂದು ಕರ್ತವ್ಯ ನಿರ್ವಹಿಸಿದ ಆರೋಪದಲ್ಲಿ ಅಮಾನತಿನಲ್ಲಿರುವ ನಾಗರಾಜ್ ಶೇರುಗಾರ್, ಸೆಕ್ಯುರಿಟಿ ಗಾರ್ಡ್ ಗಣೇಶ್ ಉಳಿದ ಬಂಧಿತ ಆರೋಪಿಗಳು.

ಶಿವರಾಮ ದೇವಳದಿಂದ ತರುತ್ತಿದ್ದ ಚಿನ್ನಾಭರಣಗಳನ್ನು ಕುಂದಾಪುರ, ಕೊಲ್ಲೂರು, ಗಂಗೊಳ್ಳಿಯ 10 ಬ್ಯಾಂಕ್ ಹಾಗೂ ಮೂರು ಸೊಸೈಟಿಗಳಲ್ಲಿ ಅಡವು ಇಡುತ್ತಿದ್ದ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದ್ದು, ಇವರಲ್ಲಿ ಆರು ಮಂದಿ ಕೊಲ್ಲೂರು ಹೊಟೇಲಿನ ರೂಮ್ ಬಾಯ್, ಅಡುಗೆ ಕೆಲಸಗಾರ, ಐಬಿಯ ನೌಕರರಿದ್ದು, ಇಬ್ಬರು ದೇವಳದ ಅಡುಗೆ ಕೆಲಸಗಾರರಾಗಿದ್ದಾರೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿರುವ ದೇವಳದ 10 ಮಂದಿ ಸಿಬ್ಬಂದಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು. ಮುಂದೆ ಇವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುವುದು. ಇವರಲ್ಲಿ ವಿಭಾಗೀಯ ಅಧೀಕ್ಷಕ, ದೇವಳದ ಇಂಜಿನಿಯರ್, ಸಹಾಯಕ ಎಕ್ಸಿಕ್ಯೂಟಿವ್ ಆಫೀಸರ್ ಕೂಡ ಸೇರಿದ್ದಾರೆ.

ಚಿನ್ನಾಭರಣಗಳು ವಶ:ದೇವಳದ ಸೇವಾ ಕೌಂಟರ್‌ನಲ್ಲಿ ಕೆಲಸ ನಿರ್ವ ಹಿಸುತ್ತಿದ್ದ ಶಿವರಾಮ 2012ರ ಜು.22ರಿಂದ ಕೌಂಟರ್‌ನಲ್ಲಿ ಭಕ್ತಾಧಿಗಳು ನೀಡಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಗೊದ್ರೇಜ್ ಆಲ್ಮೇರಾದಲ್ಲಿ ಇರಿಸಿ, ಅದರ ಕೀಯನ್ನು ತನ್ನಲ್ಲಿಯೇ ಇಟ್ಟುಕೊಂಡು 2016ರ ಫೆ.15ರಿಂದ ಅನಧಿಕೃತ ಗೈರುಹಾಜರಾಗಿದ್ದನು. ಈ ಬಗ್ಗೆ ದೇವಳದ ಆಡಳಿತ ಕಾರ್ಯನಿರ್ವ ಹಣಾಧಿಕಾರಿ ಟಿ.ಆರ್.ಉಮಾ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
 ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶಿವರಾಮನನ್ನು ಫೆ.23 ರಂದು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ತನಿಖೆಯ ವೇಳೆ 2012ರಿಂದ ದೇವಳಕ್ಕೆ ಹರಕೆ ರೂಪದಲ್ಲಿ ಬಂದ 3172.20 ಗ್ರಾಂ ತೂಕದ ಚಿನ್ನಾಭರಣ ಗಳಲ್ಲಿ 651ಗ್ರಾಂ ಚಿನ್ನಾಭರಣ ದೇವಳದಲ್ಲೇ ಪತ್ತೆಯಾಯಿತು. ಉಳಿದ 2521.030ಗ್ರಾಂ ತೂಕದ ಚಿನ್ನದ ಒಡವೆಗಳು ನಾಪತ್ತೆಯಾಗಿರುವುದು ಕಂಡು ಬಂತು. 13ಬ್ಯಾಂಕ್ ಹಾಗೂ ಸೊಸೈಟಿಗಳಿಂದ 1.675ಗ್ರಾಂ ಚಿನ್ನಾಭರಣ ಗಳನ್ನು ವಶಪಡಿಸಿಕೊಳ್ಳಲಾಯಿತು. ಉಳಿದಂತೆ 845ಗ್ರಾಂ ಚಿನ್ನಾಭರಣ ವಶ ಪಡಿಸಿಕೊಳ್ಳಲು ಬಾಕಿ ಇತ್ತು. ಇದರಲ್ಲಿ ಇಂದು 430ಗ್ರಾಂ ಚಿನ್ನಾಭರಣಗಳು ದೇವಳದಲ್ಲೇ ಪತ್ತೆಯಾದವು. ಇನ್ನು 415ಗ್ರಾಂ ಚಿನ್ನ ವಶಪಡಿಸಿಕೊಳ್ಳಲು ಬಾಕಿ ಇದೆ. ಅದೇ ರೀತಿ ಸೇವಾ ಕೌಂಟರ್‌ನಲ್ಲಿ ರಶೀದಿ ಪಡೆದುಕೊಳ್ಳದೆಯೇ ಹರಕೆ ರೂಪದಲ್ಲಿ ನೀಡಿರುವಂತಹ 138ಗ್ರಾಂ ಚಿನ್ನಾಭರಣ ಕೂಡ ಪತ್ತೆಯಾಗಿದೆ ಎಂದು ಅವರು ವಿವರಿಸಿದರು.

ಶಿವರಾಮ ಸೇವಾ ಕೌಂಟರ್‌ಗೆ ಬಂದ ಹಣ ಹಾಗೂ ಚಿನ್ನಾಭರಣಗಳನ್ನು 12ಗಂಟೆಯೊಳಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಹಿ ಪಡೆದು ಲಾಕರ್‌ನಲ್ಲಿ ಇಡಬೇಕು. ಆದರೆ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸಹಿ ಮಾಡಿದ ಬಳಿಕ ಅದನ್ನು ಶಿವರಾಮನ ಬಳಿಯೇ ನೀಡುತ್ತಿದ್ದರು. ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಕುಡಿತದ ಚಟ ಹೊಂದಿದ್ದ ಈತ ಸ್ವಲ್ಪ ಸ್ವಲ್ಪವೇ ಹಣವನ್ನು ಇದರಿಂದ ತೆಗೆದು ಅದಕ್ಕೆಲ್ಲ ಬಳಸಿಕೊಳ್ಳುತ್ತಿದ್ದ. ಬಂದ ಹಣವನ್ನು ಮತ್ತೆ ಅದಕ್ಕೆ ಹಾಕುತ್ತಿದ್ದ. ಹೀಗೆ ಒಮ್ಮಿಮ್ಮೆ ಹಣದ ಕೊರತೆ ಬರುತ್ತಿತ್ತು. ಹೀಗೆ ಕಳೆದ ಮೂರು ವರ್ಷಗಳಲ್ಲಿ 10ರಿಂದ 11ಲಕ್ಷ ರೂ. ಹಣದ ಕೊರತೆ ಎದುರಾಗಿದೆ.
  2012ರ ಮೊದಲಿನ ಚಿನ್ನಾಭರಣಗಳ ಶುದ್ಧತೆ ಬಗ್ಗೆ ಪರಿಶೀಲನೆ ಮಾಡ ಬೇಕಾಗಿದೆ. ಅದರಲ್ಲಿ ನಿಜವಾದ ಚಿನ್ನವನ್ನು ತೆಗೆದು ರೋಲ್ಡ್‌ಗೋಲ್ಡ್ ಚಿನ್ನ ಬೆರೆಸಿರುವ ಸಾಧ್ಯತೆಗಳಿರುತ್ತದೆ. ಆ ಬಗ್ಗೆ ಸಮಗ್ರ ತನಿಖೆ ಮಾಡಲಾಗುವುದು. ಚಿನ್ನಾಭರಣಗಳಲ್ಲಿ ಕೊಲ್ಲೂರು ಮೂಕಾಂಬಿಕ ಎಂದು ಬರೆದಿದ್ದರೂ, ತಾವರೆ ಚಿತ್ರಗಳ ಚಿನ್ನಾಭರಣಗಳಿದ್ದರೂ ಯಾವುದೇ ರೀತಿ ಸಂಶಯ ಪಡದೆ ಬ್ಯಾಂಕಿನ ವರು ಚಿನ್ನಗಳನ್ನು ಸ್ವೀಕರಿಸಿರುವುದರಿಂದ ಅವರಿಗೂ ನೋಟೀಸ್ ಜಾರಿ ಮಾಡ ಲಾಗಿದೆ ಎಂದು ಅವರು ಹೇಳಿದರು.

ಈವರೆಗೆ ದೇವಳಕ್ಕೆ ರಶೀದಿ ಪಡೆದುಕೊಳ್ಳದೆ ಚಿನ್ನಾಭರಣಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸಿರುವವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇದು ತನಿಖೆಗೆ ಸಹಕಾರಿಯಾಗಲಿದೆ ಎಂದು ಎಸ್ಪಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕುಂದಾಪುರ ಡಿವೈಎಸ್ಪಿ ಮಂಜುನಾಥ್ ಶೆಟ್ಟಿ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುದರ್ಶನ್, ಕೊಲ್ಲೂರು ಠಾಣಾಧಿಕಾರಿ ಶೇಖರ್ ಉಪಸ್ಥಿತರಿದ್ದರು.


share
ವಾರ್ತಾಭಾರತಿ
ವಾರ್ತಾಭಾರತಿ
Next Story
X