ಉಮಾ ವಿರುದ್ಧ ಡಿಸಿ ಕ್ರಮ
ಫೆ.15ರಿಂದ ಶಿವರಾಮ ನಾಪತ್ತೆಯಾಗಿದ್ದರೂ ದೇವಳದ ಕಾರ್ಯನಿರ್ವ ಹಣಾಧಿಕಾರಿ ಉಮಾ ಪೊಲೀಸರಿಗೆ ದೂರು ನೀಡಿರುವುದು ಮಾತ್ರ ಎಂಟು ದಿನಗಳ ನಂತರ. ಇಲ್ಲಿಯೂ ಕೂಡ ಈ ಹಿಂದಿನಂತೆ ಶೆಟ್ಲ್‌ಮೆಂಟ್ ಮಾಡುವ ಪ್ರಯತ್ನ ನಡೆದಿತ್ತು. ಆ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಉಮಾ ಅವರ ಬಗ್ಗೆ ಜಿಲ್ಲಾಧಿಕಾರಿಗಳು ಇಲಾಖಾ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಿ ದ್ದಾರೆ ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ ಈ ದೇವಳದಲ್ಲಿ ಇಂತಹ ದುರುಪಯೋಗ ಪ್ರಕರಣಗಳು ಮೂರು ಬಾರಿ ನಡೆದಿತ್ತು. ಮೊದಲ ಬಾರಿ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಅದನ್ನು ಅವರೇ ಎಲ್ಲ ಸೇರಿ ಕೈಯಿಂದ ಹಾಕಿ ಪೊಲೀಸ ರಿಗೆ ದೂರು ನೀಡದೆ ಸರಿಪಡಿಸಿದ್ದರು. ಎರಡನೆ ಬಾರಿಗೆ ಬೆಳ್ಳಿಯ ಆಭರಣ ಹಾಗೂ ಮೂರನೆ ಬಾರಿಗೆ ಹಣ ನಾಪತ್ತೆಯಾಗಿತ್ತು. ಈ ಬಗ್ಗೆ ಯಾವುದೇ ದೂರುಗಳು ದಾಖಲಾಗಿರಲಿಲ್ಲ ಎಂದರು.
Next Story





