Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದೂರದೃಷ್ಟಿಯಿಲ್ಲದ ಬಜೆಟ್

ದೂರದೃಷ್ಟಿಯಿಲ್ಲದ ಬಜೆಟ್

ವಾರ್ತಾಭಾರತಿವಾರ್ತಾಭಾರತಿ1 March 2016 11:07 PM IST
share

‘ಮಾಯಾಬಝಾರ್’ ಎನ್ನುವ ಹಳೆಯ ಎನ್. ಟಿ. ರಾಮರಾವ್ ಚಿತ್ರದ ಚಿತ್ರಕತೆಯಂತಿದೆ ಎನ್‌ಡಿಎ ಸರಕಾರ ಮಂಡಿಸಿರುವ 2016-17ರ ಕೇಂದ್ರ ಬಜೆಟ್. ಎಲ್ಲವೂ ಮಾಯೆ. ಅರಮನೆಯ ವೈಭವಗಳೆಲ್ಲ ಒಂದು ಕಣ್ಣು ಕಟ್ಟು ಎನ್ನುವುದು ಗೊತ್ತಾಗುವಾಗ ಎಲ್ಲವೂ ತಡವಾಗಿರುತ್ತದೆ. ಕೊನೆಗೆ ಮದುವೆ ಸಮಾರಂಭದ ಮದುಮಗಳೂ ಕೂಡ ನಕಲಿ ಎನ್ನುವುದು ಬಯಲಾಗಿ ಬಿಡುತ್ತದೆ. ಕಳೆದ ಬಜೆಟ್‌ನಲ್ಲಿ ಕೇಂದ್ರ ಸರಕಾರ ರೈತರನ್ನು, ಜನಸಾಮಾನ್ಯರನ್ನು ಸಂಪೂರ್ಣ ನಿರ್ಲಕ್ಷಿಸಿ, ಅಭಿವೃದ್ಧಿಯ ಮುಖವಾಡವನ್ನು ಹಾಕಿಕೊಂಡು ಕಾರ್ಪೊರೇಟ್ ಪರವಾದ ಬಜೆಟ್‌ನ್ನು ಮಂಡಿಸಿತ್ತು. ಆದರೆ ಈ ಬಾರಿ ಹಾಗೆಲ್ಲ ಜನರನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಶೀಘ್ರದಲ್ಲೇ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಜನಸಾಮಾನ್ಯರನ್ನು ಸಂಪೂರ್ಣ ನಿರ್ಲಕ್ಷಿಸಿದರೆ ಅದು ಎನ್‌ಡಿಎಗೆ ಭಾರೀ ನಷ್ಟವನ್ನು ತಂದೊಡ್ಡಲಿದೆ ಎನ್ನುವುದು ಸರಕಾರಕ್ಕೆ ಮನವರಿಕೆಯಾಗಿತ್ತು. ಆದುದರಿಂದಲೇ ದೇಶದ ಜನರು ಈ ಬಾರಿ ಜನಪರ ಬಜೆಟ್ ಒಂದನ್ನು ನಿರೀಕ್ಷಿಸಿದ್ದರು. ನಿರೀಕ್ಷೆಯಂತೆಯೇ ಜನಪ್ರಿಯ ಆಶಯಗಳುಳ್ಳ ಬಜೆಟ್‌ನ್ನು ಜೇಟ್ಲಿ ಅವರು ಮಂಡಿಸಿದ್ದಾರೆ. ಆದರೆ ಇವೆಲ್ಲವುಗಳೂ ಬರೇ ಆಶಯಗಳಿಗಷ್ಟೇ ಸೀಮಿತವಾಗಿದೆ.

ಉಳಿದಂತೆ, ಅಂಕಿ, ಸಂಖಿಗಳ ಮಂಕು ಮರುಳು ಮಾಡಿ ದೇಶದ ಜನರಿಗೆ ವಂಚಿಸಿದ್ದಾರೆ. ಹಣಕಾಸು ಕ್ರೋಡೀಕರಣದಲ್ಲಿ ಮುಂಗಡ ಪತ್ರ ಎಡವಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮೇಲ್ನೋಟಕ್ಕೆ ಅಂಕಿ ಅಂಶಗಳು ಜನಪರವಾದ ಬಜೆಟ್‌ನಂತೆ ಭಾಸವಾಗುತ್ತದೆಯಾದರೂ ಆಳದಲ್ಲಿ ಇದು ಜನರಿಗೆ ಯಾವ ರೀತಿಯಲ್ಲೂ ಜನರನ್ನು ತಲುಪುವ ಬಜೆಟ್‌ನಂತೆ ಕಾಣುತ್ತಿಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹಾಕಿಕೊಂಡಿರುವ ಸರಕಾರ, ಕೃಷಿ ಕ್ಷೇತ್ರಕ್ಕೆ ಸುಮಾರು 36 ಸಾವಿರ ಕೋಟಿ ರೂಪಾಯಿ ಅನುದಾನ ವನ್ನು ಘೋಷಿಸಿದೆ. ಕೃಷಿ ಸಾಲದ ಬಡ್ಡಿ ಮನ್ನಾಕ್ಕಾಗಿ ಸಚಿವರು 15,000 ಕೋಟಿ ರೂ.ವನ್ನು ಒದಗಿಸಿದ್ದಾರೆ. ಮೇಲ್ನೋಟಕ್ಕೆ ಈ ಘೋಷಣೆಗಳೆಲ್ಲವೂ ಹಿತವಾಗಿದೆ. ಆದರೆ ಇದರಲ್ಲಿ ನಿಜಕ್ಕೂ ಸಣ್ಣ ರೈತರಿಗೆ ತಲುಪಬಹುದಾದ ಹಣವೆಷ್ಟು ಎನ್ನುವುದು ಸ್ಪಷ್ಟವಿಲ್ಲ. ರೈತರ ಆತ್ಮಹತ್ಯೆಯಲ್ಲಿ ದೊಡ್ಡ ಪಾಲು ಇರುವುದು ಸಣ್ಣ ರೈತರದು.

ಒಂದೆರಡು ಎಕರೆ ಭೂಮಿಯಿರುವ ರೈತರೇ ಇಂದು ಕೃಷಿ ವಲಯದಲ್ಲಿ ಆತಂಕಗಳನ್ನು ಎದುರಿಸುತ್ತಿದ್ದಾರೆ. ಸರಕಾರದ ಕೃಷಿ ಪರ ಯೋಜನೆಗಳು ಇವರನ್ನು ತಲುಪುವುದಿಲ್ಲ. ಇದರ ಜೊತೆ ಜೊತೆಗೇ ಕೃಷಿ ವಲಯಕ್ಕೆಂದು ಮೀಸಲಿಡುವ ಭಾರೀ ಹಣದ ಫಲಾನುಭವಿಗಳು ಕೃಷಿಕರಲ್ಲ. ಕೃಷಿ ಗೊಬ್ಬರ ಸೇರಿದಂತೆ ಬೇರೆ ಬೇರೆ ವಲಯಗಳಿಗೆ ಸಂಬಂಧಪಟ್ಟ ಕಂಪೆನಿಗಳು ಇದರ ಲಾಭವನ್ನು ಪಡೆದುಕೊಳ್ಳುತ್ತವೆೆ. ಇದೇ ಸಂದರ್ಭದಲ್ಲಿ ಕೃಷಿ ವಲಯವನ್ನು ಉದ್ಧರಿಸುತ್ತೇನೆ ಎನ್ನುವ ಸರಕಾರ, ಕೃಷಿ ಆಮದು ನಿಯಂತ್ರಣದ ಬಗ್ಗೆ ಭರವಸೆಯನ್ನು ನೀಡುವುದಿಲ್ಲ. ಜೊತೆಗೇ ಕೃಷಿಕರ ಬೆಳೆಗೆ ಬೆಂಬಲ ಬೆಲೆ ನೀಡುವ ಬಗ್ಗೆಯೂ ಯಾವುದೇ ಬದ್ಧತೆಯನ್ನು ಹೊಂದಿಲ್ಲ. ಆಮದಿಗೆ ಕಡಿವಾಣ ಹಾಕಿ, ರೈತರಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸುವ ಕುರಿತಂತೆಯೂ ಸರಕಾರದ ಬಳಿ ಯಾವುದೇ ದೂರಗಾಮಿ ಯೋಜನೆಗಳಿಲ್ಲ. ಇದರಿಂದಾಗಿ ಸರಕಾರ ನೀಡುವ ಅನುದಾನ ಕೃಷಿಯನ್ನು ಎಷ್ಟರ ಮಟ್ಟಿಗೆ ಮೇಲೆತ್ತುತ್ತದೆ ಎನ್ನುವುದು ಅನುಮಾನವಾಗಿಯೇ ಉಳಿಯುತ್ತದೆ. ಒಟ್ಟಾರೆ ಸೂಟು ಬೂಟು ಸರಕಾರ ಕೃಷಿ ವಲಯದ ಕಡೆಗೆ ಕನ್ಣು ಹಾಯಿಸಿರುವುದು ಸಮಾಧಾನಕರ ಅಂಶ. ಇತ್ತೀಚಿನ ದಿನಗಳಲ್ಲಿ ಆಹಾರ ಅಭದ್ರತೆ ಸರಕಾರದ ಗಮನವನ್ನು ಸೆಳೆದಿರುವುದು ಇದಕ್ಕೆ ಕಾರಣವಾಗಿರಲೂ ಬಹುದು. ಆದರೆ ಸಣ್ಣ ಪುಟ್ಟ ತೇಪೆಗಳು ಈ ದೇಶದ ಕೃಷಿವಲಯವನ್ನು ಉಳಿಸಲಾರದು ಎನ್ನುವ ಎಚ್ಚರಿಕೆ ಸರಕಾರಕ್ಕೆ ಇರಬೇಕಾಗಿದೆ.

ಮಧ್ಯಮವರ್ಗದ ಅಸಮಾಧಾನವನ್ನು ಈ ಬಾರಿ ಬಿಜೆಪಿ ಸರಕಾರ ಕಟ್ಟಿಕೊಂಡಿದೆ. ಇತ್ತ ಬಜೆಟ್ ಬಡವರ ಪರ ಎಂದು ಬಿಂಬಿತವಾಗಿದ್ದರೂ ವಾಸ್ತವದಲ್ಲಿ ಅದು ಬಡತವನ್ನು ಮೇಲೆತ್ತುವಲ್ಲಿ ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಇದೇ ಸಂದರ್ಭದಲ್ಲಿ ಬಡವರನ್ನು ಗುರಾಣಿಯಾಗಿಟ್ಟುಕೊಂಡು ಮಧ್ಯಮ ವರ್ಗದ ಅಸಮಾಧಾನವನ್ನು ಎದುರಿಸುವ ಪ್ರಯತ್ನದಲ್ಲಿದೆ ಸರಕಾರ. ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡದೆ, ಇನ್ನಷ್ಟು ತೆರಿಗೆಗಳನ್ನು ಜಾರಿ ಮಾಡಲು ಸರಕಾರ ಮುಂದಾಗಿದೆ. ಇದೇ ಸಂದರ್ಭದಲ್ಲಿ ಮಧ್ಯಮವರ್ಗದ ನೌಕರರ ಪಿಎಫ್ ಅಥವಾ ನೌಕರರ ಭವಿಷ್ಯನಿಧಿಗೆ ಕೈ ಹಾಕಿರುವುದು ಅದರ ಅಸಹಾಯಕತೆಯನ್ನು ತೋರಿಸುತ್ತದೆ. ಮಧ್ಯಮವರ್ಗವನ್ನು ಭಾವನಾತ್ಮಕವಾಗಿ ವಂಚಿಸಿ ಅಧಿಕಾರ ಹಿಡಿದ ಸರಕಾರ, ಇದೀಗ ಮಧ್ಯಮ ವರ್ಗಕ್ಕೇ ಬರೆ ಎಳೆದಿರುವುದು ಅದಕ್ಕೆ ಭಾರೀ ನಷ್ಟವನ್ನು ತಂದೊಡ್ಡಲಿದೆ. ಈ ಮೂಲಕ ಕಪ್ಪು ಹಣದ ವಿಷಯದಲ್ಲೂ ಸರಕಾರ ಸೋಲೊಪ್ಪಿಕೊಂಡಂತಿದೆ. ವಿದೇಶದಲ್ಲಿರುವ ಕಪ್ಪು ಹಣ ಪಕ್ಕಕ್ಕಿರಲಿ, ದೇಶದೊಳಗಿರುವ ಕಪ್ಪು ಹಣವನ್ನು ಹೊರತೆಗೆಯುವಲ್ಲೂ ಅದು ಮೆದು ನಿಲುವನ್ನು ತಾಳಿದೆ. ಅದರ ಪರಿಣಾಮವಾಗಿಯೇ ಅವರು, ದೇಶದಲ್ಲಿ ಕಪ್ಪು ಹಣ ಹೊಂದಿರುವ ವ್ಯಕ್ತಿಗಳಿಗೆ ಕ್ಷಮಾದಾನ ಯೋಜನೆಯ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಇದರಿಂದಾಗಿ ಕಪ್ಪು ಹಣ ಹೊಂದಿದವರು ಮುಂದೆ ಕಾನೂನಿನ ರಕ್ಷಣೆಯನ್ನು ಸುಲಭದಲ್ಲಿ ಪಡೆದುಕೊಳ್ಳುವಂತಾಗುತ್ತದೆ. ಮುಂಗಡ ಪತ್ರದಲ್ಲಿ ರಫ್ತುಕುರಿತಂತೆಯಾವುದೇ ಉಲ್ಲೇಖವಿಲ್ಲದೇ ಇರುವುದು, ಸರಕಾರದ ನಕಾರಾತ್ಮಕ ಬೆಳವಣಿಗೆಗೆ ಹಿಡಿದ ಕನ್ನಡಿಯಾಗಿದೆ. ರಫ್ತು ಉತ್ತೇಜನದಲ್ಲಿ ಸರಕಾರ ವೈಫಲ್ಯ ಅನುಭವಿಸಿರುವುದನ್ನು ಇದು ತೋರಿಸುತ್ತದೆ. ಅಂತಾರಾಷ್ಟ್ರೀಯ ತೈಲ ಬೆಲೆ ಅತ್ಯಂತ ಕೆಳಮಟ್ಟದಲ್ಲಿದ್ದರೂ ಸರಕಾರ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಅಬಕಾರಿ ಸುಂಕವನ್ನು ಹೆಚ್ಚಿಸುತ್ತಾ ತೆರಿಗೆಯನ್ನು ತುಂಬುತ್ತದೆಯಾದರೂ, ಈ ತೆರಿಗೆಯ ಮೂಲಕ ಸಾಮಾಜಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಯಾವುದೇ ಪ್ರಯತ್ನ ಮಾಡಿಲ್ಲ. ಬಹುಶಃ ಈ ಬಾರಿ ರೈತರು ಮತ್ತು ಬಡವರ ಕುರಿತಂತೆ ಮಾತನಾಡುವುದು ಸರಕಾರಕ್ಕೆ ಅನಿವಾರ್ಯವಿತ್ತು. ಕೊಟ್ಟಂತೆಯೂ ಆಗಬೇಕು. ಕೊಡಬಾರದು. ಈ ನಿಟ್ಟಿನಲ್ಲಿ ಸದ್ಯದ ಬಜೆಟ್ ಅತ್ಯಂತ ಚಾಣಾಕ್ಷತನದಿಂದ ರೂಪಿಸಲಾಗಿದೆ.

ಜನರನ್ನು ಅತ್ಯಂತ ಚಾಲಾಕಿತನದಿಂದ ವಂಚಿಸಲಾಗಿದೆ. ಈ ಬಜೆಟ್ ಜನಪರ ಆಶಯವನ್ನಷ್ಟೇ ಹೊಂದಿದೆ. ಆದರೆ ಅದನ್ನು ಸಾಧಿಸುವ ಕುರಿತಂತೆ ದೂರಗಾಮಿಯಾದ ಯೋಜನೆಗಳಿಲ್ಲದೆ ಸೊರಗಿದೆ. ಬಹುಶಃ ಮುಂದಿನ ಚುನಾವಣೆ ಮುಗಿದಾಕ್ಷಣ, ಈ ಆಶಯಗಳನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ಸರಕಾರ ತೆಗೆದುಕೊಳ್ಳ ಬಹುದು ಎನ್ನುವುದು ಅನುಮಾನವಾಗಿಯೇ ಉಳಿಯುತ್ತದೆ. ಮೋದಿ ನೇತೃತ್ವದ ಸರಕಾರದಿಂದ ಇಷ್ಟರಮಟ್ಟಿಗಾದರೂ ಜನಾಶಯವುಳ್ಳ ಬಜೆಟ್ ಹೊರ ಬಿದ್ದಿತಲ್ಲ ಎಂದು ನಾವು ತೃಪ್ತಿಪಟ್ಟುಕೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X