ಅಮಲೇರಿದ ತಂದೆ - ಮಗನ ಗಲಾಟೆ :ಮಗನ ಸಾವಿನಲ್ಲಿ ಅಂತ್ಯ

ತಿರುವನಂತಪುರಂ, ಮಾರ್ಚ್.2: ತಿರುವನಂತಪುರಂನ ಬಾಲರಾಮಪುರದಲ್ಲಿ ತಂದೆ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡಿದ್ದನ್ನು ಪ್ರಶ್ನಿಸಿದ ಮಗನ ಮೇಲೆ ಸೇಡು ತೀರಿಸಲು ಹೊರ ತಂದೆ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಸುಟ್ಟು ಕೊಂದಿದ್ದಾನೆ. ಪಳ್ಳಿಚಾಲ್ ಅಯಿಣಿಮೂಡ್ ರಾಜೇಶ್ ಕುಮಾರ್ ತಂದೆಯಿಂದ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ ಮೃತ ರಾಜೇಶ್‌ನ ತಂದೆ ಭುವನ ಚಂದ್ರನ್ ನಾಯರ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಮಗ ನಿದ್ರಿಸುತ್ತಿದ್ದಾಗ ಭುವನ ಚಂದ್ರನ್ ನಾಯರ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದು ಹಾಕಿದ್ದರು. ಪೊಲೀಸರು ತಿಳಿಸಿರುವ ಪ್ರಕಾರ ಮದ್ಯಪಾನ ಮಾಡಿ ಮನೆಗೆ ಬಂದ ಭುವನಚಂದ್ರನ್ ನಾಯರ್ ಗಲಾಟೆಗಿಳಿದಾಗ ಅವರನ್ನು ಮಗ ರಾಜೇಶ್ ಪ್ರಶ್ನಿಸಿದ್ದಾನೆ. ಕೋಪಗೊಂಡು ಮನೆಬಿಟ್ಟು ಹೋಗಲು ತಂದೆಗೆ ಹೇಳಿದ್ದಾನೆ. ಆನಂತರ ಮನೆಯಿಂದ ಹೊರಹೋಗಿದ್ದ ತಂದೆ ಪೆಟ್ರೋಲ್‌ನೊಂದಿಗೆ ಮರಳಿ ಬಂದಿದ್ದು ಮನೆಯ ಹಿಂಬದಿಯಲ್ಲಿ ಕುಳಿತು ಮದ್ಯಪಾನಮಾಡಿದ ಬಳಿಕ ಮಗ ನಿದ್ರಿಸುತ್ತಿದ್ದ ಮಂಚಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದರು. ಬೆಂಕಿ ತೀವ್ರವಾಗಿ ಉರಿಯುತ್ತಿದ್ದುದರಿಂದ ರಾಜೇಶನಿಗೆ ಪಾರಾಗಲು ಸಾಧ್ಯವಾಗಿರಲಿಲ್ಲ. ಬೊಬ್ಬೆ ಕೇಳಿ ಓಡಿ ಬಂದ ನೆರೆಯವರು ಬಂಧುಗಳು ತಮಗೆ ಸುದ್ದಿ ಮುಟ್ಟಿಸಿದರೆಂದು ಪೊಲೀಸರು ಹೇಳಿದ್ದಾರೆ.





