ಮಂಗಳೂರು : ಮಾ.4-6: ಮತ್ಸ ಮೇಳ
ಮಂಗಳೂರು, ಮಾ.2: ನಗರದ ಟಿ.ಎಂ.ಎ.ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ರಾಷ್ಟ್ರೀಯ ಮತ್ಸ್ಯಮೇಳ 2016 ಮಾ.4ರಿಂದ 6ರ ವರೆಗೆ ನಡೆಯಲಿದೆ.
ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಕೆ.ಎಂ.ಶಂಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀನುಗಾರಿಕೆ ಕ್ಷೇತ್ರದಲ್ಲಾಗುತ್ತಿರುವ ಆವಿಷ್ಕಾರ, ಅಭಿವೃದ್ಧಿ, ವೈಜ್ಞಾನಿಕ ಯಶೋಗಾಥೆ, ರೈತರ ಆವಿಷ್ಕಾರವನ್ನು ಜನರಿಗೆ ಪರಿಚಯಿಸುವ ಸಲುವಾಗಿ ಮೇಳ ಆಯೋಜಿಸಲಾಗಿದೆ ಎಂದರು.
ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು ಮತ್ತು ಮೀನುಗಾರಿಕೆ ಇಲಾಖೆ, ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಕಾರ್ಯಕ್ರಮ ನಡೆಯಲಿದೆ.
ಮೀನುಗಾರಿಕೆ ಮತ್ತು ಯುವ ಸಬಲೀಕರಣ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದು, ಅರಣ್ಯ ಪರಿಸರ ಮತ್ತು ಜೀವಿಶಾಸ ಸಚಿವ ಬಿ.ರಮಾನಾಥ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಜೆ.ಆರ್.ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾ.6ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲ ಉಸ್ತುವಾರಿ ಸಚಿವ ರಮಾನಾಥ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಪಶು ಸಂಗೋಪನೆ ಸಚಿವ ಎ.ಮಂಜು ಪಾಲ್ಗೊಳ್ಳಲಿದ್ದಾರೆ.
ಮತ್ಸ್ಯಮೇಳದ ಸಂಘಟನಾ ಕಾರ್ಯದರ್ಶಿ ಡಾ.ಶಿವಕುಮಾರ್ ಮಗದ, ಡಾ.ಬಸವರಾಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮತ್ಸ್ಯಮೇಳ ಆಕರ್ಷಣೆ:
*ಮೀನಿನ ಆಹಾರ ಮತ್ತು ಖಾದ್ಯ ಸಹಿತ ಸುಮಾರು 50 ಮಳಿಗೆ.
*ನೇಚರ್ ಅಕ್ವೇರಿಯಂ ಮತ್ತು ಮದ್ವಂಗಿಗಳ ಪ್ರದರ್ಶನ.
*ಪಶ್ಚಿಮ ಘಟ್ಟದ ಮೀನುಗಳ ಪ್ರದರ್ಶನ.
*ತಾಜಾ ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ.
*ಮಾ.4 ಮಾತ್ತು 5ರಂದು ಮೀನಿನ ಖಾದ್ಯ ತಯಾರಿಕೆ ಸ್ಪರ್ಧೆ.
*ಮಾ.5ರಂದು ಬೆಳಗ್ಗೆ 9.30 ಕ್ಕೆ ರಾಷ್ಟ್ರೀಯ ಮೀನುಗಾರಿಕೆ ಸಮಾವೇಶ.
*ಮಾ.6ರಂದು ಪಿಲಿಕುಳದಲ್ಲಿ ಗಾಳಶಿಕಾರಿ ಸ್ಪರ್ಧೆ ಮತ್ತು ನುರಿತ ಶಿಕಾರಿ ತಜ್ಞ ಡೆರಿಕ್ ಡಿಸೋಜ.







