ಯುನಿವೆಫ್ ನಿಂದ ಚಾವಡಿ ಚರ್ಚೆ

ಯುನಿವೆಫ್ ಕರ್ನಾಟಕ ಇದರ ವತಿಯಿಂದ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಸಮುದಾಯದ ಸವಾಲುಗಳು ಮತ್ತು ಪರಿಹಾರ ಎಂಬ ವಿಷಯದಲ್ಲಿ ಚಾವಡಿ ಚರ್ಚೆ ನಡೆಯಿತು. ದ.ಕ. ಜಿಲ್ಲೆಯ ವಿವಿಧ ಮುಸ್ಲಿಮ್ ಸಂಘಟನೆಗಳ ನಾಯಕರುಗಳಾದ ಜನಾಬ್ ಅಲ್ ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ (ಅಧ್ಯಕ್ಷರು, ಮುಸ್ಲಿಮ್ ಸೆಂಟ್ರಲ್ ಕಮಿಟಿ, ದ.ಕ. ಮತ್ತು ಉಡುಪಿ) ಜನಾಬ್ ಉಮರ್ ಯು. ಹೆಚ್.(ಅಧ್ಯಕ್ಷರು, ಕೆರಿಯರ್ ಗೈಡೆನ್ಸ್ ಮತ್ತು ಇನ್ಫಾರ್ಮೇಶನ್ ಸೆಂಟರ್, ಮಂಗಳೂರು) ಜನಾಬ್ ಅಬ್ದುಲ್ ರಝಾಕ್ ಕೆಮ್ಮಾರ (ರಾಜ್ಯ ಸಲಹಾ ಸಮಿತಿ ಸದಸ್ಯ, ಪಿ.ಎ್.ಐ,) ಜನಾಬ್ ಬಿ.ಎ. ಮುಹಮ್ಮದ್ ಅಲಿ (ಉಪಾಧ್ಯಕ್ಷರು, ಮುಸ್ಲಿಮ್ ಲೇಖಕರ ಸಂಘ) ಜನಾಬ್ ಮುಸ್ತಾ ಕೆಂಪಿ (ಅಧ್ಯಕ್ಷರು, ಮುಸ್ಲಿಮ್ ಸಂಘಟನೆಗಳ ಐಕ್ಯತಾ ವೇದಿಕೆ, ದ.ಕ.) ಜನಾಬ್ ಅಶ್ರ್ ಕೆ. (ಅಧ್ಯಕ್ಷರು, ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ) ಜನಾಬ್ ಅಲಿ ಹಸನ್ (ಅಧ್ಯಕ್ಷರು, ಮಂಗಳೂರು ಸೆಂಟ್ರಲ್ ಕಮಿಟಿ) ಮೊದಲಾದವರು ಭಾಗವಹಿಸಿದ್ದರು. ಚರ್ಚೆಯಲ್ಲಿ ಸಮುದಾಯದ ಸವಾಲುಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಸಿ ಸಮಸ್ಯೆ ಮತ್ತು ಸವಾಲುಗಳಿಗೆ ಉತ್ತರಿಸುತ್ತಾ ಸಮುದಾಯದ ಐಕ್ಯತೆ, ಧನಾತ್ಮಕ ಹಾಗೂ ಧೀರ್ಘಕಾಲೀನ ಯೋಜನೆ ಹಾಗೂ ಸಮರ್ಥ ನಾಯಕತ್ವ ಎಲ್ಲಾ ಸವಾಲುಗಳನ್ನೂ ನಿವಾರಿಸಬಲ್ಲದು ಎಂದು ಅಭಿಪ್ರಾಯಪಟ್ಟರು ಮಾತ್ರವಲ್ಲ ಯುನಿವೆ್ ಕರ್ನಾಟಕದ ಈ ಪ್ರಯತ್ನವನ್ನು ಶ್ಲಾಘಿಸಿದರು. ಯುನಿವೆ್ ಕರ್ನಾಟಕ ಅಧ್ಯಕ್ಷ ರಫಿೀಉದ್ದೀನ್ ಕುದ್ರೋಳಿ ಚಾಡಿ ಚರ್ಚೆಯನ್ನು ನಡೆಸಿಕೊಟ್ಟರು.
ಅಡ್ವೋಕೇಟ್ ಸಿರಾಜುದ್ದೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಯೀದ್ ಅಹ್ಮದ್ ಕಿರ್‌ಅತ್ ಪಠಿಸಿದರು.






