‘‘ಪಾಕಿಸ್ತಾನ್ ಜಿಂದಾಬಾದ್’’ ಘೋಷಣೆಗಳಿರಲಿಲ್ಲ, ವಿಡಿಯೋಗಳು ನಕಲಿ:ಮ್ಯಾಜಿಸ್ಟ್ರೇಟ್ ವರದಿ
ಜೆಎನ್‌ಯು ವಿವಾದ

ಹೊಸದಿಲ್ಲಿ,ಮಾ.2: ‘‘ಪಾಕಿಸ್ತಾನ್ ಜಿಂದಾಬಾದ್’’ ಘೋಷಣೆಗಳನ್ನು ಕೂಗಲಾಗಿರಲಿಲ್ಲ ಮತ್ತು ಹಿಂಸೆಯನ್ನು ಪ್ರಚೋದಿಸುವ ಶಬ್ದಗಳು ಭಾಷಣದಲ್ಲಿದ್ದಿರಲಿಲ್ಲ ಮತ್ತು ಬಳಿಕ ಅವುಗಳನ್ನು ತುರುಕಲಾಗಿದೆ ಎಂದು ಜೆಎನ್‌ಯುದ ವಿವಾದಾತ್ಮಕ ಕಾರ್ಯಕ್ರಮದ ಕುರಿತು ದಿಲ್ಲಿ ಸರಕಾರವು ಆದೇಶಿಸಿದ್ದ ಮ್ಯಾಜಿಸ್ಟ್ರೇಟ್ ತನಿಖಾ ವರದಿಯು ಹೇಳಿದೆ. ಈ ವರದಿಯನ್ನು ಬುಧವಾರ ಸರಕಾರಕ್ಕೆ ಸಲ್ಲಿಸಲಾಗಿದೆ.
ಎಬಿವಿಪಿಯು ಟಿವಿ ವರದಿಗಾರನೋರ್ವನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು ಎಂದು ವರದಿಯು ಹೇಳಿದೆ.
ಎರಡು ನಕಲಿ ವೀಡಿಯೊಗಳು ಫೆ.9 ಮತ್ತು ಫೆ.11ರದ್ದಾಗಿವೆ ಎಂದು ವರದಿಯು ಹೇಳಿದೆ ಎಂದು ಮೂಲಗಳು ತಿಳಿಸಿವೆ.
ವೀಡಿಯೊಗಳನ್ನು ಸಲ್ಲಿಸುವಂತೆ ಟಿವಿ ವಾಹಿನಿಗೆ ಸೂಚಿಸಲಾಗಿತ್ತಾದರೂ ಅದು ಮ್ಯಾಜಿಸ್ಟ್ರೇಟ್‌ರಿಗೆ ಅವುಗಳನ್ನು ನೀಡಿರಲಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿರುವ ವೀಡಿಯೊಗಳು ಚಾನೆಲ್‌ಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಪ್ರಸಾರಗೊಂಡಿದ್ದ ವೀಡಿಯೊಗಳನ್ನು ಒಳಗೊಂಡಿವೆ. ಇವುಗಳನ್ನು ಜೆಎನ್‌ಯು ವಿದ್ಯಾರ್ಥಿಗಳು ಸಂಗ್ರಹಿಸಿದ್ದರು ಎಂದು ಮೂಲಗಳು ಹೇಳಿವೆ.





