ಕೊಲ್ಲೂರು ದೇವಸ್ಥಾನದ ಕಳವು ಪ್ರಕರಣ:ಐವರು ಆರೋಪಿಗಳ ಸೆರೆ
70 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶ.

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಪಾಟಿನಿಂದ ಚಿನ್ನಾಭರಣ ಕಳವುಗೈದ ಕೃತ್ಯಕ್ಕೆ ಸಂಬಂಽಸಿ ಐವರು ಸಿಬ್ಬಂದಿಯನ್ನು ಪೋಲಿಸರು ಬಂದಿಸಿದ್ದಾರೆ.ಸುಮಾರು ೭೦ ಲ.ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಬಂದಿಗಳಾದ ಶಿವರಾಮ ಮಡಿವಾಳ, ಗಂಗಾಧರ ಹೆಗ್ಡೆ, ಪ್ರಸಾದ ಆಚಾರ್, ನಾಗರಾಜ ಶೇರುಗಾರ್ ಹಾಗೂಗಣೇಶ ಪೂಜಾರಿ ಬಂಧಿತರು.
ಉಡುಪಿ ಜಿಲ್ಲಾ ಎಸ್.ಪಿ.ಅಣ್ಣಾಮಲೈ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಪ್ರಮುಖ ಆರೋಪಿ ಶಿವರಾಮ ಮಡಿವಾಳನನ್ನು ಫೆ.೨ರಂದು ಪೋಲಿಸರು ಬಂಽಸಿದ್ದು ಆತನನ್ನು ತೀವೃವಾಗಿ ತನಿಖೆಗೊಳಪಡಿಸಿದಾಗ ಕೊಲ್ಲೂರು,ಭಟ್ಕಳ,ಕುಂದಾಪುರ, ಗಂಗೊಳ್ಳಿ ಸೇರಿದಂತೆ ಹತ್ತು ಬ್ಯಾಂಕು ಹಾಗೂ ಸೊಸೈಟಿಗಳಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದ.
ಕೃತ್ಯದ ಹಿಂದೆ ಬ್ರಹತ್ ಜಾಲ: ಇದೊಂದು ಬ್ರಹತ್ ಕಳ್ಳತನದ ಜಾಲವಾಗಿದ್ದು ದೇವಸ್ಥಾನದಲ್ಲಿ ಈ ಹಿಂದೆ ನಾಲ್ಕು ಬಾರಿ ಕಳ್ಳತನವಾಗಿದ್ದರು ಧಾರ್ಮಿಕ ದತ್ತಿ ಇಲಾಖೆಯು ಅದನ್ನು ಗಂಭೀರವಾಗಿ ಪರಿಗಣಿಸಿರುವುದು ಇಂತಹ ಕೃತ್ಯಕ್ಕೆ ಎಡೆಮಾಡಿಕೊಟ್ಟಿದೆ.ಪೋಲಿಸ್ ಉನ್ನತ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿ 2012ರ ಮೊದಲು ದೇವಸ್ಥಾನದಲ್ಲಿದ್ದ ಚಿನ್ನಾಭರಣಗಳ ಸಂಪೂರ್ಣ
ಮಾಹಿತಿಯನ್ನು ಪಡೆಯುವ ಮೂಲಕ ಆ ಅವಧಿಯಲ್ಲೂ ಕಳ್ಳತನ ಪ್ರಕರಣ ನಡೆದಿತ್ತೆ?ಎಂಬ ಪೂರ್ಣ ಮಾಹಿತಿ ಕಲೆಹಾಕಲಾಗುವುದು.ಸಿ.ಐ.ಡಿ ಮೂಲಕ ತನಿಖೆ ನಡೆಸಲಾಗುವುದು ಎಂದು ಎಸ್.ಪಿ.ಅಣ್ಣಾಮಲೈತಿಳಿಸಿದರು.
ಮೋಜು ಮಸ್ತಿಗೆ ಹಣ ಬಳಕೆ:ಕಳೆದ ೫ ವರ್ಷಗಳಿಂದ ನಿರಂತರವಾಗಿ ಶ್ರಿದೇವಿಯ ಚಿನ್ನಾಭರಣಗಳನ್ನು ಎಗರಿಸಿ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಅಡವಿಟ್ಟು ಈ ಹಣವನ್ನು ಕ್ರಿಕೆಟ್ ಬೆಟ್ಟಿಂಗ್ ಹಾಗೂ ಇನ್ನಿತರ ಮೋಜಿನ ಜೀವನಕ್ಕಾಗಿ ಬಳಸುತ್ತಿದ್ದ ಎನ್ನಲಾಗಿದೆ.ಬಡ್ಡಿ ಹಣ ಬಂದಾಗ ಮತ್ತೆ ಚಿನ್ನಾಭರಣಗಳನ್ನು ಲಪಟಾಯಿಸುತ್ತಿದ್ದರು.
ಅಣ್ಣಾಮಲೈಗೆ ಜೈಕಾರ: ಕೊಲ್ಲೂರು ಪೋಲಿಸ್ ಠಾಣೆಯ ಬಳಿ ಸೇರಿದ್ದ ಸಹಸ್ರಾರು ಭಕ್ತರು ಹಾಗೂ ಗ್ರಾಮಸ್ಥರು ಆರೋಪಿಗಳ ವಿರುದ್ದ ಽಕ್ಕಾರ ಕೂಗಿದ್ದಲ್ಲದೆ ಎಸ್.ಪಿ ಅಣ್ಣಾಮಲೈ ಅವರಿಗೆ ಜಯಕಾರ ಹಾಕಿದರು.





