ಮಂಗಳೂರು: ಫೆ.4-6: ವಿವಿಧೆಡೆ ಸಲಫಿ ಸಮಾವೇಶ
ಮಂಗಳೂರು,ಮಾ.2:ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಸತ್ಯ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಫೆ.4 ರಿಂದ 6 ರವರೆಗೆ ವಿವಿಧೆಡೆ ಸಲಫಿ ಸಮಾವೇಶಗಳು ನಡೆಯಲಿದೆ.
ಫೆ.4 ರಂದು ಮಗ್ರಿಬ್ ನಮಾಝಿನ ಬಳಿಕ ಕುದ್ರೋಳಿ ಸಮೀಪದ ಭಟ್ಕಳ್ ಬಝಾರ್‌ನಲ್ಲಿ ಸಲಫಿ ಸಮಾವೇಶವು ಜರುಗಲಿದ್ದು ಈ ಸಮಾವೇಶದಲ್ಲಿ ವೌಲವಿ ಸಲೀಮ್ ಹಮದಾನಿ ಮತ್ತು ವೌಲವಿ ಮುಸ್ತಫಾ ದಾರಿಮಿಯವರು ಉಪನ್ಯಾಸ ನೀಡಲಿದ್ದಾರೆ.ಫೆ.5 ರಂದು ಮೂಡಬಿದ್ರೆ ಸಮೀಪದ ಹಂಡೇಲ್ ಜಂಕ್ಷನ್‌ನಲ್ಲಿ ಸಂಜೆ 4 .30ಕ್ಕೆ ಸಲಫಿ ಸಮಾವೇಶವು ಜರುಗಲಿದೆ. ಈ ಸಮಾವೇಶದಲ್ಲಿ ಪ್ರಸಿದ್ದ ವಾಗ್ಮಿ ವೌಲವಿ ಹನೀಫ್ ಕಾಯಕ್ಕೋಡಿ ಮತ್ತು ವೌಲವಿ ಅಲಿಉಮರ್‌ರವರು ಉಪನ್ಯಾಸ ನೀಡಲಿದ್ದಾರೆ. ಫೆ.6 ರಂದು ಸಂಜೆ 4.30 ಕ್ಕೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಸಲಫಿ ಸಮಾವೇಶವು ಜರುಗಲಿದ್ದು ಈ ಸಮಾವೇಶದಲ್ಲಿ ಖ್ಯಾತ ಯುವ ವಾಗ್ಮಿ ವೌಲವಿ ಅಹ್ಮದ್ ಅನಸ್ ಮತ್ತು ವೌಲವಿ ಮುಸ್ತಫಾ ಧಾರಿಮಿಯವರು ಉಪನ್ಯಾಸ ನೀಡಲಿದ್ದಾರೆಂದು ಸಲಫಿ ಮೂವ್‌ಮೆಂಟ್ ದಾವಾ ಮುಖ್ಯಸ್ಥ ಇಸ್ಮಾಯೀಲ್ ಶಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





